Advertisement

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

10:46 AM Oct 02, 2024 | Team Udayavani |

ಪ್ಲೈನ್ಸ್(ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್(‌Jimmy Carter) ಮಂಗಳವಾರ (ಅ.01) 100ನೇ ವರ್ಷದ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷರಲ್ಲಿ 100 ವರ್ಷ ಪೂರೈಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಜಿಮ್ಮಿ ಕಾರ್ಟರ್‌ ಅಮೆರಿಕದ ಹಿರಿಯ ರಾಜಕಾರಣಿ, ಅಮೆರಿಕದ 39ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಡೆಮೋಕ್ರಟಿಕ್‌ ಪಕ್ಷದ ಸದಸ್ಯರಾಗಿದ್ದ ಜಿಮ್ಮಿ ಕಾರ್ಟರ್‌ ಅವರು 1977ರಿಂದ 1981ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 1971ರಿಂದ 1975ರವರೆಗೆ ಜಾರ್ಜಿಯಾದ 76ನೇ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.

ಜಿಮ್ಮಿ ಕಾರ್ಟರ್‌ ಅವರು ಜಾರ್ಜಿಯಾದ ಪ್ಲೈನ್ಸ್‌ ನಲ್ಲಿ 1924ರ ಅಕ್ಟೋಬರ್‌ 1ರಂದು ಜನಿಸಿದ್ದರು. ಜಿಮ್ಮಿ ಕಾರ್ಟರ್‌, ಪತ್ನಿ ರೋಸಾಲೈನ್‌ ಕಾರ್ಟರ್‌ ದಂಪತಿಗೆ ನಾಲ್ವರು ಮಕ್ಕಳು. ಜಿಮ್ಮಿ ಕಾರ್ಟರ್‌ ಅವರು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ಅವರು 1960ರಲ್ಲಿ ಪ್ಲೈನ್ಸ್‌ ನಲ್ಲಿ ನಿರ್ಮಿಸಿದ್ದ ಮನೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಅಟ್ಲಾಂಟಾ ಜರ್ನಲ್‌ ವರದಿ ಪ್ರಕಾರ, ಜಿಮ್ಮಿ ಕಾರ್ಟರ್‌ ಅವರು ಸುಮಾರು 20 ಮಂದಿ ಕುಟುಂಬ ಸದಸ್ಯರ ಜೊತೆ 100ನೇ ಜನ್ಮ ದಿನ ಆಚರಿಸಿಕೊಂಡಿರುವುದಾಗಿ ತಿಳಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಎಕ್ಸ್‌ ಖಾತೆಯಲ್ಲಿ ಶುಭಾಶಯ ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next