Advertisement
ಹಲವು ಅವಕಾಶಗಳುಜಿಮ್ ಟ್ರೈನರ್ ಇದು ಪೂರ್ಣಕಾಲಿಕ ಹುದ್ದೆಯೂ ಹೌದು, ಅರೆಕಾಲಿಕ ಹುದ್ದೆಯೂ ಆಗಿದೆ. ವ್ಯಾಸಂಗ ಮಾಡುತ್ತ ಕೂಡ ನಾವು ಜಿಮ್ ಟ್ರೈನರ್ ಆಗಬಹುದು. ಇದರಿಂದ ನಮ್ಮದೇ ಆದ ಪ್ರತ್ಯೇಕವಾದ ಜಿಮ್ ಸೆಂಟರ್‌ನ್ನು ಹೊಂದಿ ಸ್ವಂತ ಉದ್ಯೋಗವನ್ನು ನಾವು ಗಳಿಸಿಕೊಳ್ಳಬಹುದಾಗಿದೆ. ಇದು ಒಂದು ಮಾದರಿಯಾದರೂ ಇನ್ನು ಬೇರೆಯವರ ಜಿಮ್‌ನಲ್ಲಿ ಟ್ರೈನರ್ ಆಗಿ ನಾವು ಕೆಲಸ ನಿರ್ವಹಿಸಬಹುದು. ಬಹುತೇಕ ಜಿಮ್ ವ್ಯಾಯಾಮ ಹವ್ಯಾಸಿಗಳು ಹೆಚ್ಚಿನ ಸಮಯ ಬೆಳಗ್ಗೆ ಮತ್ತು ಸಂಜೆ ಬರುವುದರಿಂದ ಓದುವ ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ತಮ್ಮ ಕಾಲೇಜು ಸಮಯವನ್ನು ಹೊರತುಪಡಿಸಿ ಜಿಮ್‌ನಲ್ಲಿ ಕೆಲಸ ನಿರ್ವಹಿಸಬಹುದು. ಇದು ಕೂಡ ಒಳ್ಳೆಯ ಆದಾಯದ ಉದ್ಯೋಗವಾಗಿದೆ ಎಂಬುದು ಜಿಮ್ ಟ್ರೈನರ್‌ಗಳ ಅಭಿಪ್ರಾಯ.
ಜಿಮ್ ಟ್ರೈನರ್ ಆಗಲು ಮುಖ್ಯವಾದ ಅರ್ಹತೆ ಎಂದರೆ ಅದು ಜಿಮ್ ಅಂಗಣದಲ್ಲಿನ ಅನುಭವ. ಜಿಮ್ ಟ್ರೈನರ್‌ಗಳಿರಬೇಕಾದ ಇದು ಮೊದಲನೇ ಮತ್ತು ಕೊನೆಯ ಅರ್ಹತೆಯಾಗಿದೆ. ಏಕೆಂದರೆ ದೇಹ ದಂಡನೆ ಮಾಡುವಾಗ ಹಲವು ಸೂಚನೆ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕಾದ ಕಾರಣದಿಂದಾಗಿ ಅಗತ್ಯವಾಗಿ ಜಿಮ್ ಟ್ರೈನರ್‌ಗಳಿಗೆ ಜಿಮ್ ಅಂಗಣದ ಎಲ್ಲ ನುರಿತ ಅನುಭವ ಮುಖ್ಯವಾಗಿ ಬೇಕಾಗಿರುತ್ತದೆ. ಇಲ್ಲವಾದರೆ ಮುಂದೆ ಎರಗುವ ಅಪಾಯಗಳಿಗೆ ಮುಖ್ಯ ಕಾರಣರು ನಾವು ಆಗಿರಬೇಕಾಗುತ್ತದೆ. ಅದಕ್ಕಾಗಿ ಏನಿಲ್ಲವಾದರೂ ಕನಿಷ್ಠ ಸುಮಾರು 2-3 ವರ್ಷವಾದರೂ ಜಿಮ್ ಅಂಗಣದ ಅನುಭವ ಇರಲೇಬೇಕಾಗುತ್ತದೆ. ಹೆಚ್ಚಿನ ಬೇಡಿಕೆ
ಜಿಮ್ ಸೆಂಟರ್‌ಗಳಲ್ಲಿ ಹೆಚ್ಚಿನ ಜಿಮ್ ಟ್ರೈನರ್‌ಗಳಿಗೆ ಬೇಡಿಕೆ ಸದ್ಯಮಟ್ಟದಲ್ಲಿ ಹೆಚ್ಚಿದೆ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜತೆಗೆ ಕಟ್ಟುಮಸ್ತಾದ ದೇಹವನ್ನು ಬೆಳೆಸಿಕೊಳ್ಳಬೇಕು ಎಂದು ಬಹುತೇಕರು ಜಿಮ್ ಸೆಂಟರ್‌ಗಳ ಬಾಗಿಲು ತಟ್ಟುತ್ತಿದ್ದಾರೆ. ಇಂತಿಷ್ಟು ತಿಂಗಳಿಗೆ ಎಂದೂ ಗರಿಷ್ಠ ಫೀ ನೀಡುತ್ತಿದ್ದಾರೆ ಹಾಗಾಗಿ ಜಿಮ್ ಟ್ರೈನರ್‌ಗಳಿಗೆ ಬೇಡಿಕೆ ಇರುವುದರಿಂದಾಗಿ ಇಂತಹ ಉದ್ಯೋಗ ಪಡೆಯುವ ಯುವಕರು ಜಿಮ್ ಟ್ರೈನರ್ ಆದರೆ ಓದಿನ ಜತೆ-ಜತೆಗೆ ಒಳ್ಳೆಯ ಆದಾಯವನ್ನು ಕೂಡ ಗಳಿಸಬಹುದು.
Related Articles
ಜಿಮ್ ಟ್ರೈನರ್ ಆಗಲು ಯಾವುದೇ ಪದವಿಗಳಿರುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ದೇಹ ದಂಡನೆ ವ್ಯಾಯಾಮಗಳನ್ನು ಕಲಿತರೆ ನಾವು ಕೂಡ ಕಡಿಮೆ ಅವಧಿಯಲ್ಲಿ ಜಿಮ್ ಟ್ರೈನರ್ ಆಗಬಹುದು.
Advertisement
- ಅಭಿನವ