ಹುಬ್ಬಳ್ಳಿ: ಜಿಲೇಬಿ ಮಾಡಬೇಕಾದರೆ ಏನೆಲ್ಲಾ ಮಾಡಬೇಕು ಎಂಬುದನ್ನೇ ಆಧಾರವಾಗಿಟ್ಟುಕೊಂಡು “ಜಿಲೇಬಿ’ ಚಿತ್ರ ನಿರ್ಮಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಲಕ್ಕಿ ಶಂಕರ ಹೇಳಿದರು. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲೇಬಿ ಚಿತ್ರದಲ್ಲಿ ಪಡ್ಡೆ ಹುಡುಗರಿಗೆ ಸಂಬಂಧಿಸಿದ ಚಿತ್ರ ಇದಾಗಿದ್ದು ಎಲ್ಲರಿಗೂ ಇಷ್ಟವಾಗುವಂತೆ ಚಿತ್ರ ನಿರ್ಮಿಸಲಾಗಿದೆ.
ನಾಯಕ ನಟರಾಗಿ ವಿಜಯ ಚಂಡೂರ, ಯಶಸ್ ಹಾಗೂ ನಾಗೇಂದ್ರ ಉತ್ತಮವಾಗಿ ನಟಿಸಿದ್ದು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಬೆಂಗಳೂರಿನ ಒಂದು ಮನೆಯಲ್ಲಿ ಹಾಕಲಾಗಿದ್ದ ಸೆಟ್ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಸಂಪೂರ್ಣ ಚಿತ್ರ ನಿರ್ಮಿಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಜೆಮ್ಸ್ ಆರ್ಕಿಟೆಕ್ಟ್ ಸಂಗೀತ ನಿರ್ದೇಶನ, ಎಂ.ಆರ್.ಸಿಂಗ್ ಛಾಯಾಗ್ರಹಣ ಮಾಡಿದ್ದಾರೆ.
ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು. ನಟಿ ಪೂಜಾ ಗಾಂಧಿ ಮಾತನಾಡಿ, ಇಷ್ಟು ದಿನಗಳವರೆಗೆ ಮಾಡಿದ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಹೆಚ್ಚು ಇಷ್ಟವಾಗಿದೆ. ಈ ಚಿತ್ರದಲ್ಲಿ ಹಾಸ್ಯ, ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಚಿತ್ರ ಇದಾಗಿದೆ.
ಉತ್ತಮವಾಗಿ ಮೂಡಿ ಬಂದಿರುವ ಚಿತ್ರವನ್ನು ಎಲ್ಲರೂ ವೀಕ್ಷಣೆ ಮಾಡುವ ಮೂಲಕ ನಮಗೆ ಆಶೀರ್ವದಿಸಬೇಕು ಎಂದರಲ್ಲದೆ, ಈಗಾಗಲೇ ದಂಡುಪಾಳ್ಯ-3 ಚಿತ್ರೀಕರಣ ನಡೆಯುತ್ತಿದೆ ಎಂದರು. ನಾಯಕ ನಟರಾದ ಯಶಸ್ ಹಾಗೂ ನಾಗೇಂದ್ರ ಮಾತನಾಡಿ, ಜಿಲೇಬಿ ಚಿತ್ರವೂ ಹಾಟ್ ಆ್ಯಂಡ್ ಸ್ವೀಟ್ ಆಗಿದ್ದು ಎಲ್ಲರೂ ನೋಡಬಹುದಾದ ಚಿತ್ರ ಇದಾಗಿದೆ.
ಚಿತ್ರದಲ್ಲಿ ಆರಂಭದಿಂದಲೂ ಹಾಸ್ಯ ಸಮ್ಮಿಲನವಾಗಿದ್ದು ಎಲ್ಲರೂ ಖುಷಿ ಕೊಡುವ ಚಿತ್ರವಾಗಿದೆ ಎಂದರು. ನಟಿ ಪೂಜಾ ಗಾಂಧಿ ಮಾತನಾಡಿ, ಈ ಭಾಗದಲ್ಲಿ μಲ್ಮ ಸಿಟಿ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಆದ್ದರಿಂದ ಹುಬ್ಬಳ್ಳಿಯಲ್ಲಿ μಲ್ಮಸಿಟಿ ಮಾಡುವ ಕುರಿತು ಮುಂದಾಗಬೇಕು ಎಂದರು.
ಅನಂತರ ನಟಿ ಪೂಜಾ ಗಾಂಧಿ ಕಿತ್ತೂರ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಗೀತ ನಿರ್ದೇಶಕ ಜೇಮ್ಸ್ ಆರ್ಕಿಟೆಕ್ಟ್, ಶಿವಾನಂದ ಮುತ್ತಣ್ಣವರ ಸೇರಿದಂತೆ ಇನ್ನಿತರರು ಇದ್ದರು.