Advertisement

ಸೆ.17ರಿಂದ ”ಜಿಗ್ರಿದೋಸ್ತ್”ಗಳ ಆಟ: ಸ್ನೇಹವೇ ಚಿತ್ರದ ಜೀವಾಳ

09:44 AM Sep 11, 2021 | Team Udayavani |

“ಜಿಗ್ರಿದೋಸ್ತ್’- ಹೀಗೊಂದು ಸಿನಿಮಾ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.17ರಂದು ತೆರೆಕಾಣುತ್ತಿದೆ. ಬಿ.ಎನ್‌.ಗಂಗಾಧರ್‌ ನಿರ್ಮಾಣದ ಈ ಚಿತ್ರವನ್ನು ಎಸ್‌.ಮೋಹನ್‌ ನಿರ್ದೇಶಿಸಿದ್ದಾರೆ.

Advertisement

ಚಿತ್ರ ಹಾಗೂ ನಿರ್ಮಾಪಕರ ಬಗ್ಗೆ ಮಾತನಾಡುವ ಮೋಹನ್‌, “ನನಗೆ ಗಂಗಾಧರ್‌ ಅವರು ಸುಮಾರು 22 ವರ್ಷಗಳ ಪರಿಚಯ. ಅವರ ಯಾರಿಗೆ ಸಾಲತ್ತೆ ಸಂಬಳ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರಪಂಚದಲ್ಲಿ ಎಲ್ಲಾ ಸಂಬಂಧಗಳನ್ನು ನಮಗೆ ಅಪ್ಪ – ಅಮ್ಮ ಪರಿಚಯ ಮಾಡಿಕೊಟ್ಟರಷ್ಟೇ ತಿಳಿಯುತ್ತದೆ. ಆದರೆ ನಾವು ಇಷ್ಟ ಪಟ್ಟು ಪಡೆಯುವ ಸಂಬಂಧ ಸ್ನೇಹ. ಹಾಗಾಗಿ ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಚಿತ್ರದ ಬಗ್ಗೆ ಹೇಳಿದರು.

ಇದನ್ನೂ ಓದಿ:ಮೆಗಾ ಅಭಿಮಾನಿಗಳಿಗೆ ಶಾಕಿಂಗ್ : ನಟ ಸಾಯಿ ಧರ್ಮತೇಜ್ ಬೈಕ್ ಅಪಘಾತ, ಆಸ್ಪತ್ರೆಗೆ ದಾಖಲು

ಇನ್ನು ಚಿತ್ರದಲ್ಲಿ ಸ್ಕಂದ ಅಶೋಕ್‌ ಹಾಗೂ ಚೇತನ್‌ ಇಬ್ಬರೂ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತಾ, ಸುಷ್ಮಾ ನಾಯಕಿಯರು. ಪಂಚಭಾಷಾ ನಟ ವಿನೋದ್‌ ಆಳ್ವ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಿತ್ಕಲಾ ಬಿರಾದಾರ್‌ , ಇಫ್ರಾನ್‌, ಮಂಜುನಾಥ್‌, ರಮೇಶ್‌ ಪಂಡಿತ್‌, ಟೆನ್ನಿಸ್‌ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ಮಾಪಕ ಗಂಗಾಧರ್‌ ಮಾತನಾಡಿ, “ನಾನು ಇಲ್ಲಿಯವರೆಗೂ ಇಪ್ತತ್ತೇಳು ಚಿತ್ರಗಳ ನಿರ್ಮಾಣ ಮಾಡಿದ್ದೇನೆ. ಕೋವಿಡ್‌ ಬರದಿದ್ದರೆಕಳೆದ ವರ್ಷ ನಮ್ಮ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಈಗ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

Advertisement

ನಾಯಕರಲೊಬ್ಬರಾದ ಚೇತನ್‌ ಮತಾನಾಡುತ್ತಾ, “ನಾನು ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದರು. ನಟಿಯರಾದ ಅಕ್ಷತ, ಸುಷ್ಮ ಕಲಾವಿದರಾದ ಇರ್ಫಾನ್‌ ಹಾಗೂ ಚಿತ್ರದ ಸಹ ನಿರ್ಮಾಪಕ ಹಾಗೂ ನಟ ಮಂಜುನಾಥ್‌ ಹಾಗೂ ಸಂಗೀತ ನಿರ್ದೇಶಕ ದಿನೇಶ್‌ ಕುಮಾರ್‌ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಪ್ರಸಾದ್‌ ಬಾಬು ಛಾಯಾಗ್ರಹಣ, ಶಿವಪ್ರಸಾದ್‌ ಯಾದವ್‌ ಸಂಕಲನ, ಕೌರವ ವೆಂಕಟೇಶ್‌ ಸಾಹಸ ನಿರ್ದೇಶನ ಹಾಗೂ ಮದನ್‌ – ಹರಿಣಿ ಅವರ ನೃತ್ಯ ನಿರ್ದೇಶನವಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next