Advertisement

ಪ್ರಧಾನಿ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು

10:13 AM Nov 01, 2019 | sudhir |

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪ ಎದುರಿಸುತ್ತಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಚಿತ್ರದುರ್ಗದ 1ನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.

Advertisement

ಓರ್ವ ವ್ಯಕ್ತಿ ಶ್ಯೂರಿಟಿ ಹಾಗೂ 25 ಸಾವಿರದ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿ ನ್ಯಾಯಾಧೀಶ ಶಂಕರಪ್ಪ ಬಿ. ಮಾಲಾಶೆಟ್ಟಿ ಆದೇಶ ಹೊರಡಿಸಿ, ಪ್ರಕರಣದ ವಿಚಾರಣೆಯನ್ನು 2020 ಜನವರಿ 2 ಕ್ಕೆ ಮುಂದುಡಲಾಯಿತು.

ಚುನಾವಣೆ ಪ್ರಚಾರಕ್ಕಾಗಿ ಬೆಂಗಳೂರಿಗೆ ಮೋದಿ ಆಗಮಿಸಿದಾಗ ಕುರ್ಚಿಗಳನ್ನು ಗಾಳಿಯಲ್ಲಿ ತೂರಿ ಉದ್ಯೋಗ ಕೊಡಿ ಎಂದು ಮೇವಾನಿ ಸಂವಾದದಲ್ಲಿ ಹೇಳಿದ್ದರು.

2018 ಏಪ್ರಿಲ್ 6 ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ನಡೆದ ಸಂವಾದದಲ್ಲಿ ಜಿಗ್ನೇಶ್ ಮೇವಾನಿ ಮೇಲಿನಂತೆ ಮಾತನಾಡಿದ್ದ ಆರೋಪವಿದೆ.

ಕಾರ್ಯಕ್ರಮ ಸಂಘಟಕ ಟಿ.ಶಫಿವುಲ್ಲಾ ಹಾಗೂ ಜಿಗ್ನೆಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.

Advertisement

ಪ್ರಕರಣದ ತನಿಖೆ ನಡೆಸಿದ ನಗರ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಆರೋಪಿಗಳ ಪರ ವಕೀಲ ಸಿ.ಶಿವು ಯಾದವ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next