Advertisement
ಪಂದ್ಯದ 40ನೇ ಓವರ್‌ನಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದ 39 ವರ್ಷದ ಜೂಲನ್ ಬ್ಯಾಟಿಂಗಿಗೆ ಬಂದಾಗ ಇಂಗ್ಲೆಂಡ್ ಆಟಗಾರ್ತಿಯರು ಎರಡು ಕಡೆ ಸಾಲಾಗಿ ನಿಂತಿದ್ದರು. ಆಟಗಾರ್ತಿರು ಚಪ್ಪಾಳೆ ತಟ್ಟಿದಾಗ ಜೂಲನ್ ಬಲಕೈ ಮೇಲಕ್ಕೆತ್ತಿ ಕೃತಜ್ಞತೆ ಸಲ್ಲಿಸಿದರು.
ಕ್ರಿಕೆಟ್ ರಂಗದಿಂದ ಮರಳುತ್ತಿರುವ ಜೂಲನ್ ಗೋಸ್ವಾಮಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಲ ಈಡನ್ ಗಾರ್ಡನ್ಸ್‌ನ ಸ್ಟಾಂಡ್ ಒಂದಕ್ಕೆ ಅವರ ಹೆಸರನ್ನು ಇಡಲು ಯೋಚಿಸುತ್ತಿದೆ. ಪಶ್ಚಿಮ ಬಂಗಾಲದ ನಡಿಯಾ ಜಿಲ್ಲೆಯ ಜೂಲನ್ ಲೆಜೆಂಡ್ಸ್‌ಗಳ ಸಾಲಿನಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಸ್ಟಾಂಡ್‌ಗೆ ಹೆಸರು ಮಾತ್ರವಲ್ಲದೇ ವಾರ್ಷಿಕ ದಿನದಂದು ಅವರನ್ನು ವಿಶೇಷವಾಗಿ ಗೌರವಿಸಲು ಯೋಚಿಸುತ್ತಿದ್ದೇವೆ ಎಂದು ಸಿಎಬಿ ಅಧ್ಯಕ್ಷ ಅವಿಶೇಕ್ ದಾಲಿ¾ಯ ಹೇಳಿದ್ದಾರೆ.
Related Articles
ಲಂಡನ್: ಭಾರತದ ಖ್ಯಾತ ಮಹಿಳಾ ವೇಗದ ಬೌಲರ್ ಜೂಲನ್ ಗೋಸ್ವಾಮಿ ನಿವೃತ್ತರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧವೇ ಏಕದಿನ ಆಡುವ ಮೂಲಕ ಕ್ರಿಕೆಟ್ ಜೀವನ ಆರಂಭಿಸಿದ್ದ ಅವರು, ತಮ್ಮ ಅದ್ಭುತ ವೃತ್ತಿಜೀವನದ ಅಂತಿಮ ಪಂದ್ಯವನ್ನು ಅದೇ ತಂಡದ ವಿರುದ್ಧ ಆಡಿದ್ದಾರೆ.
Advertisement
ಒಂದೇ ವ್ಯತ್ಯಾಸವೆಂದರೆ ಆರಂಭಿಕ ಪಂದ್ಯ ನಡೆದಿದ್ದು ಚೆನ್ನೈನಲ್ಲಿ. ಮುಗಿದಿದ್ದು ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ. ಪಂದ್ಯಕ್ಕೂ ಮೊದಲು ಜೂಲನ್ ಗೋಸ್ವಾಮಿಗೆ ಸ್ಮರಣಿಕೆಯೊಂದನ್ನು ನೀಡಲಾಯಿತು.
ಈ ವೇಳೆ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಇದ್ದರು. ಹಿರಿಯ ಆಟಗಾರ್ತಿ, ದೀರ್ಘಕಾಲದ ಗೆಳತಿ ವಿದಾಯ ಹೇಳುತ್ತಿರುವುದನ್ನು ನೋಡಿ ಹರ್ಮನ್ ತಬ್ಬಿಕೊಂಡು ಕಣ್ಣೀರು ಹಾಕಿದರು. ಅವರು ಅಳುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜೂಲನ್ ಹಲವು ವಿಶ್ವದಾಖಲೆ ನಿರ್ಮಿಸಿದ್ದಾರೆ. ದೀರ್ಘಕಾಲ ಬೌಲಿಂಗ್ ಮಾಡಿ ಮುಂದಿನ ಪೀಳಿಗೆಗಳಿಗೆ ಮಾದರಿಯಾಗಿದ್ದಾರೆ.