ರಾಂಚಿ: ಝಾರ್ಖಂಡ್ ರಾಜ್ಯದ ಬಹುಮತದ ಪರೀಕ್ಷೆಗೆ ಮುನ್ನ ವಿಧಾನಸಭೆಯಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ ಜೈಲು ಪಾಲಾದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ, ಮಾಜಿ ಸಿಎಂ ಹೇಮಂತ್ ಸೊರೇನ್ ಅವರು “ಇಂದು ಕಣ್ಣೀರು ಹಾಕುವುದಿಲ್ಲ, ಏಕೆಂದರೆ ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಕಣ್ಣೀರಿಗೆ ಬೆಲೆಯಿಲ್ಲ” ಎಂದರು.
ಮನಿ ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿರುವ ಹೇಮಂತ್ ಸೋರೆನ್ ಅವರು ಜನವರಿ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶೀಘ್ರದಲ್ಲೇ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತು. ಜೆಎಂಎಂ, ಕಾಂಗ್ರೆಸ್ ಮತ್ತು ಇತರ ಮಿತ್ರಪಕ್ಷಗಳ ಶಾಸಕರ ಬೆಂಬಲದೊಂದಿಗೆ, ಸೋರೆನ್ ಅವರ ಆಪ್ತ ಚಂಪೈ ಸೊರೆನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರದ ನಂತರ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಯಲ್ಲಿ ಅವರು ಗೆದ್ದರು.
ಇದನ್ನೂ ಓದಿ:Tollywood: ʼಹನುಮಾನ್ʼ ಗಾಗಿ 75 ಸಿನಿಮಾಗಳನ್ನು ತಿರಸ್ಕರಿಸಿದ್ದೆ; ನಟ ತೇಜ ಸಜ್ಜ
ಬಂಧನದಲ್ಲಿದ್ದರೂ ಇಂದು ಬಹುಮತ ಪರೀಕ್ಷೆಗಾಗಿ ಇಂದು ವಿಧಾನಸಭೆಗೆ ಬಂದ ಹೇಮಂತ್ ಸೊರೇನ್, ತನ್ನ ಬಂಧನದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೂರಿದರು. ಜನವರಿ 31 ರ ರಾತ್ರಿಯನ್ನು ದೇಶದ ಪ್ರಜಾಪ್ರಭುತ್ವದಲ್ಲಿ “ಕರಾಳ ಅಧ್ಯಾಯ” ಎಂದು ಅವರು ಉಲ್ಲೇಖಿಸಿದ್ದಾರೆ. ರಾಜ್ಯಪಾಲರ ಕಚೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ತಮ್ಮ ಬಂಧನಕ್ಕೆ ಕಾರಣವಾದ ಘಟನೆಗಳಲ್ಲಿ ರಾಜಭವನವೂ ಭಾಗಿಯಾಗಿದೆ ಎಂದು ಆರೋಪಿಸಿದರು.
ತನ್ನನ್ನು ಬಂಧಿಸಲು ಪಿತೂರಿ ದೀರ್ಘಕಾಲದವರೆಗೆ ಪಿತೂರಿ ಕೆಲಸ ಮಾಡಿದೆ ಎಂದು ಹೇಳಿದರು. “ಇದನ್ನು ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತಿತ್ತು. ಇದನ್ನು ಉತ್ತಮವಾಗಿ ಯೋಜಿಸಿದ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದೆ” ಎಂದು ಅವರು ಹೇಳಿದರು.