ಹೀಗೆಂದು ಜೆಎಂಎಂ ನಾಯಕ ಚಂಪಯಿ ಸೊರೇನ್ ಹೇಳಿದ್ದಾರೆ. ಚಂಪಯಿ ಬಿಜೆಪಿ ಸೇರ್ಪಡೆ ಸುದ್ದಿಯ ನಡುವೆಯೇ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
Advertisement
ರವಿವಾರ ದಿಲ್ಲಿಗೆ ಆಗಮಿಸಿದ್ದ ಚಂಪಯಿ ಬಿಜೆಪಿ ವರಿ ಷ್ಠರನ್ನು ಭೇಟಿಯಾಗಿದ್ದಾರೆಂದು ಮೂಲಗಳು ತಿಳಿಸಿದ್ದವು. ಆದರೆ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಚಂಪ ಯಿ “ವದಂತಿಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಂದಿರುವುದು ನನ್ನ ಖಾಸಗಿ ಕೆಲಸಕ್ಕೆ’ ಎಂದಿದ್ದರು.
ಆ ಬಳಿಕ ಸುದೀರ್ಘವಾದ ಟ್ವೀಟ್ ಮಾಡಿ, “ಅಧಿಕಾರದ ಆಸೆ ಇರದ ನನ್ನನ್ನು ವಿಪಕ್ಷ ಒಕ್ಕೂಟದ ನಾಯಕರು ಸಿಎಂ ಆಗುವಂತೆ ಕೇಳಿದರು. ಅದರಂತೆ ಜ.31ರಂದು ಸಿಎಂ ಆದೆ. ಬಳಿಕ ಜು.3ಕ್ಕೂ 2 ದಿನದ ಹಿಂದೆ ಇದ್ದಕ್ಕಿದ್ದಂತೆ ಸಿಎಂ ಆಗಿದ್ದ ನನ್ನ ಕಾರ್ಯಕ್ರಮಗಳನ್ನು ಪಕ್ಷ ರದ್ದುಗೊಳಿಸಿತ್ತು. ಪ್ರಜಾಪ್ರಭುತ್ವದಲ್ಲಿ ಸಿಎಂಗೆ ಇದಕ್ಕಿಂತ ದೊಡ್ಡ ಅವಮಾನ ಏನಿದೆ? ಬಳಿಕ ನನ್ನ ರಾಜೀನಾಮೆ ಕೇಳಿದರು. ಅಧಿಕಾರದ ಆಸೆ ಇಲ್ಲದ್ದಕ್ಕೆ ರಾಜೀನಾಮೆಯನ್ನೂ ಕೊಟ್ಟೆ. ಆದರೆ ನನ್ನ ಆತ್ಮ ಗೌರವವನ್ನು ಗಾಳಿಯಲ್ಲಿ ತೂರಿದ್ದರ ಬಗ್ಗೆ ಯಾರೂ ಚಿಂತಿಸಲಿಲ್ಲ. ಇದರಿಂದ ನಾನು ಕಣ್ಣೀರಿಟ್ಟೆ, ಅವಮಾನಕ್ಕೊಳಗಾದೆ. ಆ ಬಳಿಕ ನನ್ನ ಮುಂದೆ 3 ಹಾದಿ ಇದೆ ಎಂದು ನಿರ್ಧರಿಸಿದೆ. ಒಂದು ರಾಜಕೀಯ ನಿವೃತ್ತಿ ಅಥವಾ ಪಕ್ಷ ಸ್ಥಾಪನೆ, ಇಲ್ಲವೋ ಸಮಾನ ಮನಸ್ಕರೊಂದಿಗೆ ಹೆಜ್ಜೆ ಎಂದುಕೊಂಡಿದ್ದೆ. ಆ ಆಯ್ಕೆಗಳು ಆಗಲೂ ನನ್ನ ಮುಂದೆ ಇದ್ದವು, ಈಗಲೂ ಇವೆ’ ಎಂದಿದ್ದಾರೆ. “ರಾಜಕೀಯ ಪಕ್ಷಗಳನ್ನು ಕಿತ್ತೂಗೆಯುವುದರಲ್ಲಿ, ಮನೆ ಮುರಿಯುವುದರಲ್ಲಿ ಅವರು (ಬಿಜೆಪಿ) ನಿರತರಾಗಿದ್ದಾರೆ. ಇವತ್ತು ಶಾಸಕರು ನಾಳೆ ಮತ್ಯಾರೋ ದುಡ್ಡಿನಿಂದ ಎಲ್ಲರನ್ನೂ ಕೊಂಡುಕೊಳ್ಳುತ್ತಾರೆ. ಆದರೂ ಪರವಾಗಿಲ್ಲ, ನಮ್ಮ ವಿಪಕ್ಷ ಒಕ್ಕೂಟ ಗಟ್ಟಿಯಾಗಿ ಇರಲಿದೆ.” – ಹೇಮಂತ್ ಸೊರೇನ್, ಸಿಎಂ