Advertisement

ಚೀನಾ ಮೂಲದ ಟಿಕ್ ಟಾಕ್ ಜತೆಗಿನ ಪಾಲುದಾರಿಕೆ ಕೈಬಿಡಿ; ಎನ್ ಎಸ್ ಡಿಸಿಗೆ ಪತ್ರ

09:12 AM Sep 11, 2019 | Team Udayavani |

ನವದೆಹಲಿ: ಚೀನಾ ಮೂಲದ ಜನಪ್ರಿಯ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್ ಟಾಕ್ ಕುರಿತು ಆಕ್ಷೇಪ ಎತ್ತಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕ ಕುನಾಲ್ ಸಾರಂಗಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ  ಮಹೇಂದ್ರನಾಥ್ ಪಾಂಡೆಗೆ ಪತ್ರ ಬರೆದು, ಟಿಕ್ ಟಾಕ್ ಜತೆಗಿನ ಸಹಭಾಗಿತ್ವದ ಬಗ್ಗೆ ಪುನರ್ ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Advertisement

ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಟಿಕ್ ಟಾಕ್ ನಲ್ಲಿ ದ್ವೇಷದ ಭಾಷಣ, ಮತದಾರರ ದಿಕ್ಕುತಪ್ಪಿಸುವಂತಹ ವಿಡಿಯೋಗಳು ಹೆಚ್ಚುತ್ತಿವೆ. ಭಾರತದಲ್ಲಿ ಟಿಕ್ ಟಾಕ್ ನ ವ್ಯಾವಹಾರಿಕ ಮಾದರಿ ಮತ್ತು ನಿರ್ವಹಣೆ ಹಲವು ರೀತಿಯಲ್ಲಿ ಕಳವಳ ಹುಟ್ಟುಹಾಕಿದೆ. ಆ ನಿಟ್ಟಿನಲ್ಲಿ ನಾನು ಕೇಂದ್ರ ಸರಕಾರದಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಚೀನಾ ಮೂಲದ ಈ ಸಂಸ್ಥೆಯೊಂದಿಗಿನ ಸಹಭಾಗಿತ್ವವನ್ನು ಪುನರ್ ಪರಿಶೀಲಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ಜುಲೈ ತಿಂಗಳಿನಲ್ಲಿ ಎಸ್ ಎಸ್ ಡಿಸಿ(ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೋರೇಶನ್) ಟಿಕ್ ಟಾಕ್ ಜತೆ ಸಹಭಾಗಿತ್ವದೊಂದಿಗೆ ಟಿಕ್ ಟಾಕ್ ಬಳಕೆದಾರರನ್ನು ತಿದ್ದುವ ಕೆಲಸಕ್ಕೆ ಮುಂದಾಗಿತ್ತು. ಅದರಲ್ಲೂ ಭಾರತದಲ್ಲಿ ಮೊದಲ ಬಾರಿ ಇಂಟರ್ನೆಟ್ ಬಳಕೆ ಮಾಡುವವರನ್ನು ಶಿಕ್ಷಿತರನ್ನಾಗಿ ಮಾಡುವ ಉದ್ದೇಶ ಹೊಂದಿತ್ತು.

ಅಷ್ಟೇ ಅಲ್ಲ ಬಿಜೆಪಿಯ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್ ಕೂಡಾ ಟಿಕ್ ಟಾಕ್ ಅನ್ನು ಭಾರತದಲ್ಲಿ ನಿಷೇಧಿಸುವಂತೆ ಆಗ್ರಹಿಸಿತ್ತು. ಅಲ್ಲದೇ ಸೆಪ್ಟೆಂಬರ್ 4ರಂದು ಕೇಂದ್ರಕ್ಕೆ ಪತ್ರ ಬರೆದಿತ್ತು. ಟಿಕ್ ಟಾಕ್ ಜತೆಗಿನ ಎನ್ ಎಸ್ ಡಿಸಿ ಪಾರ್ಟನರ್ ಶಿಪ್ ನಿಂದಾಗಿ ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎಸ್ ಜೆಎಂ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next