Advertisement

Jharkhand ವೀರನ ಸಂಗಾತಿ ನಾನು: ಹೇಮಂತ್‌ ಪತ್ನಿ ಪೋಸ್ಟ್‌

12:25 AM Feb 08, 2024 | Team Udayavani |

ರಾಂಚಿ: ಭೂ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಝಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಕುರಿತಂತೆ ಅವರ ಪತ್ನಿ ಕಲ್ಪನಾ ಮುರ್ಮು ಸೊರೇನ್‌ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, “ನಾನು ಝಾರ್ಖಂಡ್‌ ವೀರನ ಸಂಗಾತಿ’ ಎಂದು ಹೇಳಿಕೊಂಡಿದ್ದಾರೆ.

Advertisement

ಅವರ 18ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಲ್ಪನಾ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ. ಅದರಲ್ಲಿ ” ಹೇಮಂತ್‌ ಸೊರೇನ್‌ ತಮ್ಮ ವಿರುದ್ಧ ನಡೆ ಯುತ್ತಿರುವ ಪಿತೂರಿಗಳಿಗೆ ತಲೆ ಬಾಗದೇ ಝಾರ್ಖಂಡ್‌ನ‌ ಅಸ್ತಿತ್ವ ಮತ್ತು ಅಸ್ಮಿತೆಯನ್ನು ರಕ್ಷಿಸಲು ನಿರ್ಧರಿಸಿದರು. ಇಂದು ನಮ್ಮ ವಿವಾಹ ವಾರ್ಷಿಕೋತ್ಸವದ ವೇಳೆ ಅವರು ನಮ್ಮ ಜತೆಗಿಲ್ಲ. ಆದರೆ, ಎಲ್ಲÉ ಷಡ್ಯಂತ್ರ ಮೆಟ್ಟಿ ಶೀಘ್ರ ಅವರು ನಮ್ಮನ್ನು ಸೇರುವ ಭರವಸೆ ಇದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next