Advertisement

Viral Video: ಇಂಜಿನ್ ಇಲ್ಲದೆ ಹಳಿ ಮೇಲೆ ಓಡಿದ ರೈಲು ಬೋಗಿ… ತಪ್ಪಿದ ಭಾರಿ ದುರಂತ

12:45 PM Sep 04, 2023 | Team Udayavani |

ಜಾರ್ಖಂಡ್‌: ರೈಲು ಚಲಿಸಬೇಕಾದರೆ ಇಂಜಿನ್ ಬೇಕೇ ಬೇಕು ಆದರೆ ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ರೈಲೊಂದು ಇಂಜಿನ್ ಇಲ್ಲದೆ ಜೊತೆಗೆ ಪೈಲೆಟ್ ಕೂಡ ಇಲ್ಲದೆ ರೈಲಿನ ನಾಲ್ಕು ಬೋಗಿಗಳು ಸಂಚರಿಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಹೌದು ಜಾರ್ಖಂಡ್‌ ನಲ್ಲಿ ಇಂಜಿನ್ ಇಲ್ಲದೆ ರೈಲೊಂದು ಸಂಚರಿಸಿ ಸಾರ್ವಜನಿಕರು ಗಾಬರಿಗೊಂಡ ಘಟನೆ ನಡೆದಿದ್ದು, ಘಟನೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ವಿಡಿಯೋದಲ್ಲಿ ರೈಲಿನ ನಾಲ್ಕು ಬೋಗಿಗಳು ಎಂಜಿನ್ ಇಲ್ಲದೆ ಸಂಚರಿಸುವುದು ಕಂಡುಬಂದಿದೆ ಅಲ್ಲದೆ ಅಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸುವ ಚಿತ್ರಣಗಳನ್ನು ಕಾಣಬಹುದಾಗಿದೆ.

ಎಂಜಿನ್ ಇಲ್ಲದೆ ರೈಲು ಸಂಚರಿಸಲು ಕಾರಣವೇನು ಎಂಬುದಕ್ಕೆ ರೈಲ್ವೆ ಅಧಿಕಾರಿಗಳು ಮಾತ್ರ ಇದುವರೆಗೂ ಸ್ಪಷ್ಟನೆ ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next