Advertisement

Jharkhand ಸಿಎಂ ಸೊರೇನ್‌ಗೆ ಏಳನೇ ಬಾರಿಗೆ ಇ.ಡಿ. ಸಮನ್ಸ್‌

12:36 AM Dec 31, 2023 | Team Udayavani |

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶಾನಲಯವು (ಇ.ಡಿ.) 7ನೇ ಬಾರಿಗೆ ಝಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಸಮನ್ಸ್‌ ದೊರೆತ ಎರಡು ದಿನದಲ್ಲಿ ಅವರ ಆಯ್ಕೆಯ ವಿಚಾ ರಣ ಸ್ಥಳದ ಬಗ್ಗೆ ಮಾಹಿತಿ ನೀಡು ವಂತೆ ಝಾರ್ಖಂಡ್‌ ಸಿಎಂ ಸೊರೇನ್‌ಗೆ ಸೂಚಿಸಲಾಗಿದೆ.

Advertisement

ಅವರು ನಿಗದಿ ಪಡಿಸಿದ ಸ್ಥಳ ಮತ್ತು ಸಮಯದಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಸಮನ್ಸ್‌ಗೆ ಪ್ರತಿಕ್ರಿಯಿಸಲು 7 ದಿನಗಳ ಕಾಲಾವಕಾಶ ಇರಲಿದೆ.

ಏನಿದು ಪ್ರಕರಣ?
ಝಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಯ ಮಾಲಕತ್ವವನ್ನು ಅಕ್ರಮವಾಗಿ ಬೇರೆಯವರಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ದೊಡ್ಡ ಮಾಫಿಯಾದ ಕೈವಾಡವಿದೆ ಎನ್ನಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸೊರೇನ್‌ ಅವರಿಗೆ ಇಡಿ ಸಮನ್ಸ್‌ ಜಾರಿ ಗೊಳಿಸಿದೆ. ಈ ಹಿಂದೆ ಆರು ಬಾರಿ ಸಮನ್ಸ್‌ ಜಾರಿ ಗೊಳಿಸಿದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next