Advertisement

Jharkhand  ಸ್ಥಾಪನೆಯಾಗುವ ಕಂಪೆನಿಗಳಲ್ಲಿ ಶೇ.75 ಉದ್ಯೋಗ ಸ್ಥಳೀಯರಿಗೆ: ಸಿಎಂ ಸೊರೇನ್‌

12:24 AM Dec 30, 2023 | Team Udayavani |

ರಾಂಚಿ: ಝಾರ್ಖಂಡ್‌ನ‌ಲ್ಲಿ ಸ್ಥಾಪನೆಗೊಳ್ಳುವ ಕಂಪೆನಿಗಳಲ್ಲಿ ಶೇ.75ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವ ನಿಯಮ ಜಾರಿಗೊಳಿಸುವುದಾಗಿ ಜಾರ್ಖಂಡ್‌ ಮುಖ್ಯ ಮಂತ್ರಿ ಹೇಮಂತ್‌ ಸೊರೇನ್‌ ಘೋಷಿಸಿದ್ದಾರೆ.

Advertisement

ಸೊರೇನ್‌ ನೇತೃತ್ವದ ಸರ ಕಾರ ರಚನೆಯಾಗಿ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ರಾಜ್ಯದ ಯುವ ಜನತೆಗೆ ಉದ್ಯೋಗ ಅವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸ್ಥಾಪನೆಯಾಗುವ ಖಾಸಗಿ ಸಂಸ್ಥೆಗಳಲ್ಲಿ ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲಿರಿಸುವ ನಿಯಮವನ್ನು ಸರ ಕಾರ ಪ್ರಸ್ತಾವಿಸಿದೆ. ಆದರೆ, ವಿಪಕ್ಷಗಳು ಇದರ ವಿರುದ್ಧ ಪಿತೂರಿ ನಡೆಸಿ, ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆ. ಬೇರೆ ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ನೀಡುವುದಕ್ಕೆ ಆದ್ಯತೆ ನೀಡುವಾಗ ನಮ್ಮ ರಾಜ್ಯದಲ್ಲಿ ಏಕೆ ಆಗಬಾರದು ಎಂದು ಪ್ರಶ್ನಿಸಿದರು. ಶೇ.75 ಮೀಸಲನ್ನು ಜಾರಿ ಗೊಳಿಸಲು ನಮ್ಮ ಸರ ಕಾರ ಬದ್ಧವಾಗಿದೆ ಎಂದಿದ್ದಾರೆ.

ಹರಿಯಾಣದಲ್ಲೂ ಇಂಥದ್ದೇ ಕಾನೂನು ಜಾರಿಗೊಳಿಸುವ ಪ್ರಸ್ತಾವವನ್ನು ಪಂಜಾಬ್‌-ಹರಿ ಯಾ ಣ ಹೈಕೋರ್ಟ್‌ ಕಳೆದ ತಿಂಗಳು ವಜಾಗೊಳಿಸಿತ್ತು. ಇನ್ನೊಂದೆಡೆ, ರಾಜ್ಯದಲ್ಲಿ ದಲಿತರು ಹಾಗೂ ಬುಡಕಟ್ಟು ಸಮುದಾಯದಲ್ಲಿ ವೃದ್ಧಾಪ್ಯವೇತನ ಪಡೆಯುವ ಹಿರಿಯರ ವಯಸ್ಸಿನ ಮಿತಿಯನ್ನು 60 ರಿಂದ 50ಕ್ಕೆ ಇಳಿಕೆ ಮಾಡುವುದಾಗಿ ಸಿಎಂ ಸೊರೇನ್‌ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next