Advertisement

Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ

12:08 AM May 08, 2024 | Team Udayavani |

ರಾಂಚಿ: ಝಾರ್ಖಂಡ್‌ನ‌ ಸಚಿವ ಅಲಂಗೀರ್‌ ಆಲಂ ಅವರ ಆಪ್ತ ಕಾರ್ಯದರ್ಶಿ ಮನೆ ಕೆಲಸದಾಳಿನ ನಿವಾಸದಲ್ಲಿ ಸೋಮವಾರದ ದಾಳಿ ವೇಳೆ ಒಟ್ಟು 32 ಕೋಟಿ ನಗದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ.) ಮಾಹಿತಿ ನೀಡಿದೆ. ಜತೆಗೆ, ಮಂಗಳವಾರ ಆಲಂ ಆಪ್ತ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಲಾಲ್‌ ಮತ್ತು ಅವರ ಮನೆ ಕೆಲಸದಾಳು ಜಹಾಂಗೀರ್‌ ಆಲಂರನ್ನು ಬಂಧಿಸಲಾಗಿದೆ.

Advertisement

ಇವರಿಬ್ಬರನ್ನೂ ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 6 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿದೆ.  ಸಚಿವ ಅಲಂಗೀರ್‌ ಆಲಂ ಅವರ ಸಹಾಯಕ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ಕಮಿಷನ್‌ ರೂಪದಲ್ಲಿ ಟೆಂಡರ್‌ ಹಣ ಪಡೆದಿದ್ದಾರೆ ಎಂದು ಇ.ಡಿ. ಕೋರ್ಟ್‌ಗೆ ತಿಳಿಸಿದೆ.

ಝಾರ್ಖಂಡ್‌ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕೆಳದರ್ಜೆಯಿಂದ ಮೇಲ್ದರ್ಜೆಯ ಹಲವು ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದಿದೆ. ಜತೆಗೆ ಈ ಪ್ರಕರಣದ ಸಂಬಂಧ ರಾಜ್ಯದಲ್ಲಿ ಮತ್ತೂ 5 ಕಡೆಗಳಲ್ಲಿ ಶೋಧ ನಡೆಸಿದ ಇ.ಡಿ.ಗೆ ರಾಜೀವ್‌ ಕುಮಾರ್‌ ಎಂಬ ಗುತ್ತಿಗೆ ದಾರನ ಬಳಿ ಮತ್ತೆ 1.5 ಕೋಟಿ ರೂ. ನಷ್ಟು ಹಣ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next