Advertisement
ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಶುಕ್ರವಾರ ಬಿಹಾರ ಮತ್ತು ಝಾರ್ಖಂಡ್‌ಗೆ ಸುಮಾರು 3,000 ಮಂದಿ ತೆರಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಇತರ ರಾಜ್ಯಗಳ 40,510 ಕಾರ್ಮಿಕರು ಹೊರ ರಾಜ್ಯಕ್ಕೆ ತೆರಳಲು “ಸೇವಾ ಸಿಂಧು’ ಆ್ಯಪ್ ಮೂಲಕ ನೋಂದಣಿ ಮಾಡಿದ್ದಾರೆ. ಬಿಹಾರದ 7,589 ಮಂದಿ, ಝಾರ್ಖಂಡ್‌ನ 7,976, ಉತ್ತರಪ್ರದೇಶದ 9,700, ಪಶ್ಚಿಮ ಬಂಗಾಲದ 4,609 ಮಂದಿ ಜಿಲ್ಲೆಯ ಲ್ಲಿದ್ದರು. ಈ ಪೈಕಿ ಉತ್ತರ ಪ್ರದೇಶದ 6,000, ಬಿಹಾರದ 4200, ಝಾರ್ಖಂಡ್‌ನ 1,148 ಮಂದಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ಯಿಂದ ತೆರಳಿದ್ದಾರೆ. ಜಿಲ್ಲೆಯಲ್ಲಿದ್ದ ಬಾಗಲಕೋಟೆ, ಗದಗ, ವಿಜಯಪುರ ಸೇರಿದಂತೆ 25 ರಾಜ್ಯಗಳ 12,970 ಮಂದಿ 500 ಬಸ್‌ಗಳ ಮೂಲಕ ತೆರಳಿದ್ದಾರೆ. ಇಂದು ಹೊಸದಿಲ್ಲಿಗೆ ರೈಲು
ತಿರುವನಂತಪುರದಿಂದ ಹೊಸ ದಿಲ್ಲಿಗೆ ವಿಶೇಷ ರೈಲು ಶುಕ್ರವಾರ ಹೊರಟಿದ್ದು, ಶನಿವಾರ ಬೆಳಗ್ಗೆ 5.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅಲ್ಲಿಂದ 262 ಮಂದಿ ಕಾರ್ಮಿಕರು ಪ್ರಯಾಣ ಬೆಳೆಸಲಿದ್ದಾರೆ.
Related Articles
ಬಂಟ್ವಾಳ: ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಆಗಮಿಸಿ ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲುನಲ್ಲಿರುವ ಬಂಟರ ಭವನದಲ್ಲಿ ಆಶ್ರಯ ಪಡೆದಿದ್ದ ಝಾರ್ಖಂಡ್ ಮೂಲಕ ಕಾರ್ಮಿಕರು ಶುಕ್ರವಾರ ರಾತ್ರಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ರೈಲಿನ ಮೂಲಕ ಊರಿಗೆ ತೆರಳಿದರು.
Advertisement
ಬೆಂಗಳೂರಿನಿಂದ ಝಾರ್ಖಂಡ್‌ಗೆ ರೈಲು ಇದೆ ಎಂಬ ತಪ್ಪು ಮಾಹಿತಿಯನ್ನ ನುಸರಿಸಿ ಮೇ 12ರ ರಾತೋರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ನಡೆದು ಹೊರಟಿದ್ದ ಕಾರ್ಮಿಕರ ಮನವೊಲಿಸಿ ಊರಿಗೆ ರೈಲಿನಲ್ಲಿ ಕಳುಹಿಸಿಕೊಡುವ ಭರವಸೆ ನೀಡಿ ಬಂಟರ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಶುಕ್ರವಾರ ಸಂಜೆ ಶಾಸಕ ರಾಜೇಶ್ ನಾಯ್ಕ… ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಉಸ್ತುವಾರಿಯಲ್ಲಿ ಒಟ್ಟು 897 ಕಾರ್ಮಿಕರನ್ನು 18 ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು.