Advertisement

ಮದುಮಗಳಿಗೆ ಒಡವೆಗಳೇ ವೈಯ್ಯಾರ : ಚೆಂದನೆಯ ಆಭರಣ ಆಯ್ಕೆಗೆ ಇಲ್ಲಿವೆ ಕೆಲವು ಟಿಪ್ಸ್

05:20 PM Apr 14, 2021 | Team Udayavani |

ಮದುವೆ ಸಮಾರಂಭದಲ್ಲಿ ಎಲ್ಲರ ಕಣ್ಣುಗಳು ಮದುಮಗಳ ಮೇಲೆಯೇ ನೆಟ್ಟಿರುತ್ತವೆ. ಅದರಲ್ಲೂ ಹೆಂಗಳೆಯರು ಹಸೆಮಣೆ ಏರುತ್ತಿರುವ ಚಲುವೆಯ ಉಡುಗೆ-ತೊಡುಗೆ, ಆಕೆ ಧರಿಸಿರುವ ಆಭರಣಗಳ ಬಗ್ಗೆಯೇ ಗುಸು-ಗುಸು,ಪಿಸು-ಪಿಸು ಮಾತನಾಡುತ್ತಿರುತ್ತಾರೆ.

Advertisement

ವಿವಾಹ ಸಮಾರಂಭದಲ್ಲಿ ಅಂದ-ಚೆಂದದ ಒಡವೆಗಳು ಮದುಮಗಳ ಸೌಂದರ್ಯದ ಮೆರೆಗು ಹೆಚ್ಚುವಂತೆ ಮಾಡುತ್ತವೆ ಎನ್ನುವುದು ಎಲ್ಲರೂ ಒಪ್ಪುವಂತಹ ಮಾತು. ಹೀಗಾಗಿ ಮದುವೆ ಮುಂಚೆಯೇ ಹಲವು ಜುವೆಲ್ಲರಿ ಅಂಗಡಿಗಳಿಗೆ ಅಲೆದು, ಅಳೆದು ತೂಗಿ, ಹಲವಾರು ಡಿಸೈನ್‍ಗಳನ್ನು ಪರಿಶೀಲಿಸಿ, ಕೊನೆಗೆ ಎಲ್ಲರಿಗೂ ಇಷ್ಟವಾಗುವಂತಹ ಆಭರಣಗಳನ್ನು ಖರೀದಿಸಲಾಗುತ್ತದೆ.

ಆಭರಣಗಳ ಆಯ್ಕೆಗೆ ಕೆಲವೊಂದು ಟಿಪ್ಸ್ ಇಲ್ಲಿವೆ ನೋಡಿ :

ಆಭರಣಗಳ ಆಯ್ಕೆಯಲ್ಲಿ ಎಡವಿದ್ರೆ ನಿಮ್ಮ ಸಂಪೂರ್ಣ ಲುಕ್ ಹಾಳಾಗಿ ಹೋಗುತ್ತೆ. ಆಭರಣಗಳ ಆಯ್ಕೆ ಸರಿಯಾಗಿದ್ರೆ ನಿಮ್ಮ ವ್ಯಕ್ತಿತ್ವಕ್ಕೂ ಹೊಸದೊಂದು ಕಳೆ ಬರುತ್ತೆ. ಅದ್ರಲ್ಲೂ ಮದುಮಗಳಿಗಂತೂ ಆಭರಣವೇ ಭೂಷಣ.

ಬಂಗಾರ, ಪಚ್ಚೆ, ಹಸಿರು ರತ್ನದ ಆಭರಣಗಳು ವಧುವಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ನಿಮ್ಮ ಮದುವೆಯ ಉಡುಪು ಕೆಂಪು ಬಣ್ಣದ್ದಾಗಿದ್ದರೆ ಈ ಆಭರಣಗಳು ಅದಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತವೆ.

Advertisement

ರಿಸೆಪ್ಷನ್ ನ ಸುಂದರ ಸಂಜೆಗಾಗಿ ಮದುಮಗಳಿಗೆ ವೈಟ್ ಗೋಲ್ಡ್ ಆಭರಣಗಳಿದ್ದರೆ ಚೆನ್ನ. ಸುತ್ತ ಮುತ್ತ ವಜ್ರ, ಮಧ್ಯದಲ್ಲಿ ದೊಡ್ಡದೊಂದು ಪಚ್ಚೆ ಇರುವ ಹಾರ ಆ ಸಮಾರಂಭಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಕಾಕ್ಟೈಲ್ ರಿಂಗ್ ಗಳನ್ನು ಕೂಡ ಧರಿಸಬಹುದು.

ನೀಲಿ ಬಣ್ಣದ ಧಿರಿಸಿಗೆ ಹಸಿರು ಬಣ್ಣದ ಆಭರಣಗಳು ಸೂಟ್ ಆಗುತ್ತವೆ. ನೀಲಿ ಬಣ್ಣದ ರತ್ನಗಳಿರುವ ಹಸಿರು ಆಭರಣ ಕೂಡ ಚೆನ್ನ. ನೀಲಿ ಹಾಗೂ ಹಸಿರು ಬಣ್ಣದ ಕಾಂಬಿನೇಷನ್ ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ.

ಹಸಿರು ಬಣ್ಣದ ರತ್ನಗಳಿರುವ ಆಭರಣ, ಕೆಂಪು, ಗುಲಾಬಿ, ಹಳದಿ ಮತ್ತು ನೀಲಿ ಬಣ್ಣದ ಸೀರೆ ಅಥವಾ ಇತರ ಮದುವೆ ಧಿರಿಸಿನ ಮೇಲೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ನೀಲಿ ರತ್ನಾಭರಣ ಕಪ್ಪು ಬಣ್ಣದ ಉಡುಪಿಗೂ ಚೆನ್ನಾಗಿ ಕಾಣುತ್ತದೆ. ಆಭರಣಕ್ಕೆ ತಕ್ಕಂತಹ ಉಡುಪುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಆಗ ಮಾತ್ರ ಮದುವೆಯ ಲುಕ್ ಪರ್ಫೆಕ್ಟ್ ಎನಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next