Advertisement

ಹೈಕಕ್ಕೆ ಧರ್ಮಸಿಂಗ್‌ ಕೊಡುಗೆ ಅಪಾರ: ಶರಣಪ್ರಕಾಶ

11:35 AM Jul 28, 2019 | Naveen |

ಜೇವರ್ಗಿ: ಕರ್ನಾಟಕ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಹಿರಿಯ ಮುತ್ಸದ್ಧಿ ಮಾರ್ಗದರ್ಶಕರೂ ಆಗಿದ್ದರು. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸಂಭಾವಿತ ರಾಜಕಾರಣಿಯಾಗಿದ್ದರು ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಾಜಿ ಸಿಎಂ ಎನ್‌. ಧರಂಸಿಂಗ್‌ ಅವರ ದ್ವಿತೀಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಧರ್ಮಸಿಂಗ್‌ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಎಲ್ಲಾ ಪಕ್ಷದ ಮುಖಂಡರ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ಜಾತ್ಯತೀತ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಇಂತಹ ರಾಜಕಾರಣಿಗಳೇ ಅಪರೂಪ. ಹೈದ್ರಾಬಾದ ಕರ್ನಾಟಕ ಸಜ್ಜನ ರಾಜಕಾರಣಿಯಾಗಿದ್ದ ಅವರು ದೀನ, ದಲಿತ, ಹಿಂದುಳಿದವರ ಕಣ್ಮಣಿಯಾಗಿದ್ದರು. ಎಂಟು ಬಾರಿ ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ, ಕೊನೆಗೆ ಮುಖ್ಯಮಂತ್ರಿಯಾಗಿ ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಶಾಸಕ ಡಾ| ಅಜಯಸಿಂಗ್‌ ಮಾತನಾಡಿ, ನಮ್ಮ ತಂದೆ ನಮಗೆ ರಾಜಕೀಯ ಗುರುಗಳು, ಮಾರ್ಗದರ್ಶಕರೂ ಆಗಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಈ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವುದೇ ನನ್ನ ಉದ್ದೇಶ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಲಾಗುವುದು ಎಂದರು.

ಧರ್ಮಸಿಂಗ್‌ ಪತ್ನಿ ಪ್ರಭಾವತಿ ಧರಂಸಿಂಗ್‌, ವಿಧಾನಪರಿಷತ್‌ ಸದಸ್ಯ ವಿಜಯಸಿಂಗ್‌, ಶ್ವೇತಾ ಅಜಯಸಿಂಗ್‌, ಪ್ರಿಯದರ್ಶಿನಿ ಚಂದ್ರಸಿಂಗ್‌, ಶಿವಲಾಲಸಿಂಗ್‌, ವಿಧಾನಪರಿಷತ್‌ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ, ಕೃಷ್ಣಾಜಿ ಕುಲಕರ್ಣಿ, ಜೇವರ್ಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ಗೌಡಪ್ಪಗೌಡ ಪಾಟೀಲ ಆಂದೋಲಾ, ಕಾಶಿಂ ಪಟೇಲ ಮುದಬಾಳ, ನೀಲಕಂಠ ಅವುಂಟಿ, ಸುನೀಲ ಹಳ್ಳಿ, ಬೈಲಪ್ಪ ನೇದಲಗಿ, ಬಸವರಾಜ ಬೂದಿಹಾಳ, ಹಣಮಂತ್ರಾವ ಹೂಗಾರ, ಷಣ್ಮುಖಪ್ಪಗೌಡ ಹಿರೇಗೌಡ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಸಕ್ರೆಪ್ಪಗೌಡ ಹರನೂರ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ರವಿ ಕೋಳಕೂರ, ವಸಂತರಾವ ನರಿಬೋಳ, ಬಸವರಾಜ ಲಾಡಿ, ಶಮಿ ಹಾಷ್ಮಿ, ಮಹಿಮೂದ್‌ ನೂರಿ, ಭಗವಂತ್ರಾಯ ಗುಜಗೊಂಡ, ದೇವಿಂದ್ರಪ್ಪ ಮರತೂರ, ಶರಬು ಕಲ್ಯಾಣಿ, ಗುರು ಪಾಟೀಲ, ನಾಗಣಗೌಡ ಸೊನ್ನ ಹಾಗೂ ಮತ್ತಿತರರು ಭಾಗಿಯಾಗಿದ್ದರು.

Advertisement

ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಎಸ್‌.ಎಸ್‌.ಹುಲ್ಲೂರ, ಸಿಪಿಐ ಡಿ.ಬಿ. ಪಾಟೀಲ, ಜೇವರ್ಗಿ ಪಿಎಸ್‌ಐ ಶಿವಶಂಕರ ಸಾಹು ಮುಡಬೂಳ, ನೆಲೋಗಿ ಪಿಎಸ್‌ಐ ಸಿದ್ಧರಾಯ ಬಳ್ಳೂರಗಿ, ಯಡ್ರಾಮಿ ಪಿಎಸ್‌ಐ ಪುಲ್ಲಯ್ಯ ರಾಠೊಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next