Advertisement

ಜೆಟ್ ಏರ್ ವೇಸ್ ಮಾಜಿ ಅಧ್ಯಕ್ಷ ಗೋಯಲ್ ನಿವಾಸದ ಮೇಲೆ ಇ.ಡಿ. ಶೋಧಕಾರ್ಯ

10:02 AM Aug 24, 2019 | Nagendra Trasi |

ನವದೆಹಲಿ: ಹಣ ದುರುಪಯೋಗ ಮತ್ತು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್ ಅವರ ಮುಂಬೈ, ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದೆಹಲಿ, ಮುಂಬೈ ಸೇರಿದಂತೆ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಏತನ್ಮಧ್ಯೆ ನರೇಶ್ ಗೋಯಲ್ ಗೆ ವಿದೇಶಕ್ಕೆ ತೆರಳಲು ದೆಹಲಿ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ಗೋಯಲ್ ಕೋರ್ಟ್ ಗೆ ಮಾಹಿತಿ ನೀಡಿದ್ದರು.

ಜೆಟ್ ಏರ್ ವೇಸ್ ಸುಮಾರು 8ಸಾವಿರ ಕೋಟಿ ಸಾಲದಲ್ಲಿದೆ. ತೀವ್ರ ನಷ್ಟದಿಂದಾಗಿ ಏಪ್ರಿಲ್ 17ರಂದು ಜೆಟ್ ಏರ್ ವೇಸ್ ನ ಎಲ್ಲಾ ವಿಮಾನ ಹಾರಾಟ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಕಂಪನಿ ಘೋಷಿಸಿತ್ತು. ಸಾಲ ಹಾಗೂ ನಷ್ಟದಿಂದ ತತ್ತರಿಸಿದ್ದ ಗೋಯಲ್ ಮತ್ತು ಪತ್ನಿ ಜೆಟ್ ಏರ್ ವೇಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2019ರ ಮೇನಲ್ಲಿ ದೇಶ ಬಿಟ್ಟು ವಿದೇಶಕ್ಕೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಜೆಟ್ ಏರ್ ವೇಸ್ ನ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಹಾಗೂ ಪತ್ನಿಯನ್ನು ವಲಸೆ(ಇಮಿಗ್ರೇಶನ್) ಇಲಾಖೆ ಅಧಿಕಾರಿಗಳು ತಡೆದಿದ್ದರು. ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next