Advertisement

ಜೆಟ್‌ ಏರ್‌ ವೇಸ್‌ ಗೆ ಸಾಲದ ಕುಣಿಕೆ: ಅಸಲು, ಬಡ್ಡಿ ಪಾವತಿ ವಿಳಂಬ

05:27 AM Jan 02, 2019 | Team Udayavani |

ಹೊಸದಿಲ್ಲಿ : ಅಪಾರ ಪ್ರಮಾಣದ ಸಾಲದ ಹೊರೆಯಿಂದ ನಲುಗುತ್ತಿರುವ 25 ವರ್ಷ ಹಳೆಯ ಜೆಟ್‌ ಏರ್‌ ವೇಸ್‌, ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ ಭಾರತೀಯ ಬ್ಯಾಂಕುಗಳ ಕೂಟಕ್ಕೆ ಸಾಲ ಮರುಪಾವತಿ ವಿಳಂಬಿಸಿರುವುದಾಗಿ ವರದಿಯಾಗಿದೆ.

Advertisement

ಪರ್ಯಾಪ್ತ ನಗದು ಕೊರತೆಯಿಂದಾಗಿ ಜೆಟ್‌ ಏರ್‌ ವೇಸ್‌ ತನ್ನ ಬ್ಯಾಂಕ್‌ ಸಾಲಗಳ ಅಸಲು ಮತ್ತು ಬಡ್ಡಿ ಕಂತಿನ ಪಾವತಿಯನ್ನು ವಿಳಂಬಿಸಿದ್ದು ಪ್ರಕೃತ ಅದು ಬ್ಯಾಂಕ್‌ ಕೂಟದೊಂದಿಗೆ ಮಾತುಕತೆ ನಡೆಸುತ್ತಿದೆ. 2018ರ ಡಿ.31ರ ಪಾವತಿ ಗಡುವನ್ನು ಕಾಯ್ದುಕೊಳ್ಳಲು  ಜೆಟ್‌ ಏರ್‌ ವೇಸ್‌ ವಿಫ‌ಲವಾಗಿದೆ ಎಂದು ಹೇಳಿಕೆ ತಿಳಿಸಿದೆ. 

ಪರ್ಯಾಪ್ತ ನಗದು ಕೊರತೆಯ ಪರಿಣಾಮವಾಗಿ ಜೆಟ್‌ ಏರ್‌ ವೇಸ್‌ ತನ್ನ ಪೈಲಟ್‌ ಗಳು ಮತ್ತು ಸಿಬಂದಿಗಳಿಗೆ ತಿಂಗಳ ಸಂಬಳವನ್ನು ಕೂಡ ಸರಿಯಾಗಿ ಪಾವತಿಸುತ್ತಿಲ್ಲ. ದುರ್ಬಲ ರೂಪಾಯಿ, ಕಚ್ಚಾ ತೈಲ ಬೆಲೆ, ವಿಮಾನ ಯಾನ ಸಂಸ್ಥೆಗಳ ನಡುವಿನ ದರ ಪೈಪೋಟಿ ಇವೇ ಮೊದಲಾದ ಹಲವಾರು ಕಾರಣಗಳಿಗೆ ಜೆಟ್‌ ಏರ್‌ ವೇಸ್‌ ನಷ್ಟ ಹಾಗೂ ಸಾಲದ ಒತ್ತಡಕ್ಕೆ ಗುರಿಯಾಗಿದೆ. 

ಜೆಟ್‌ ಮತ್ತು ಅದರ ಎರಡನೇ ಅತೀ ದೊಡ್ಡ ಶೇರು ದಾರ ಸಂಸ್ಥೆಯಾಗಿರುವ ಎತಿಹಾದ್‌ ಏರ್‌ ವೇಸ್‌ ಪ್ರಕೃತ ಬ್ಯಾಂಕ್‌ ಕೂಟದೊಂದಿಗೆ ಮಾತುಕತೆ ನಡೆಸುತ್ತಿದ್ದು ಬಿಕ್ಕಟ್ಟಿನಿಂದ ಪಾರುಗೊಳಿಸುವ ಡೀಲ್‌ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಡೀಲ್‌ ನ ಭಾಗವಾಗಿ ಅಬುದಾಬಿ ಮೂಲದ ಏರ್‌ಲೈನ್‌ ಸಂಸ್ಥೆ ತನ್ನ ಶೇರು ಪಾಲುದಾರಿಕೆಯನ್ನು ಶೇ.24ಕ್ಕೆ ಏರಿಸುವ ಪ್ರಸ್ತಾವವೂ ಚರ್ಚೆಯಲ್ಲಿದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next