Advertisement

ಯೋಧ ಹುತಾತ್ಮ,ಮಸೂದ್‌ ಅಳಿಯ ಸಹಿತ 3 JeM ಉಗ್ರರ ಹತ್ಯೆ

12:49 PM Nov 07, 2017 | Team Udayavani |

ಶ್ರೀನಗರ : ಪುಲ್ವಮಾದಲ್ಲಿ ಸೇನಾ ಪಡೆಗಳು ಸೋಮವಾರ ರಾತ್ರಿಯಿಂದ ಉಗ್ರರೊಂದಿಗೆ ನಡೆಸಿದ ಭೀಕರ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಜೈಷ್‌-ಎ-ಮೊಹಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನ ಸೋದರಳಿಯ ಸಹಿತ ಮೂವರು ಪ್ರಮುಖ ಉಗ್ರರನ್ನು ಹತ್ಯೆಗೈಯಲಾಗಿದೆ. 

Advertisement

ಹತ್ಯೆಗೀಡಾದ ಉಗ್ರರು ಮಸೂದ್‌ನ ಸೋದರಳಿಯ ತಲ್‌ಹಾ ರಶೀದ್‌ ಎನ್ನುವವನಾಗಿದ್ದು ಇನ್ನಿಬ್ಬರು ಸ್ಥಳೀಯ ಕಮಾಂಡರ್‌ಗಳಾಗಿದ್ದ ಮೊಹಮದ್‌ ಭಾಯಿ , ವಾಸಿಮ್‌ ಗನಾಯಿ ಎಂದು ಗುಪ್ತನಾಮ ಹೊಂದಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.

ಕಟ್ಟಡವೊಂದರಲ್ಲಿ ಉಗ್ರರು ಅಡಗಿದ್ದು ಖಚಿತ ಮಾಹಿತಿಯ ಮೇರೆಗೆ ಸೇನಾ ಪಡೆ ಕಾರ್ಯಾಚರಣೆಗಿಳಿದಿತ್ತು.

ಕೆಲದಿನಗಳ ಹಿಂದೆ ರಾಜಪೋರಾದ ಪೊಲೀಸ್‌ ಪೋಸ್ಟ್‌ ಮೇಲೆ ನಡೆದ ದಾಳಿಯಲ್ಲಿ ಹತ್ಯೆಗೀಡಾದ ಮೂವರ ಪಾತ್ರವಿತ್ತು ಎನ್ನಲಾಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next