Advertisement

2025ಕ್ಕೆ ದೇಶದಿಂದ 70 ಸಾವಿರ ಕೋಟಿ ಉತ್ಪನ್ನ ರಫ್ತು: ಜೆಫ್ ಬೆಜೋಸ್‌

09:54 AM Jan 17, 2020 | Hari Prasad |

ಹೊಸದಿಲ್ಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದಿಂದ 70, 852 ಕೋಟಿ ರೂ. (10 ಬಿಲಿಯನ್‌ ಡಾಲರ್‌) ಮೊತ್ತದ ‘ಮೇಕ್‌ ಇನ್‌ ಇಂಡಿಯಾ’ ಉತ್ಪನ್ನಗಳನ್ನು ಅಮೆಜಾನ್‌ ಇಂಡಿಯಾ ರಫ್ತು ಮಾಡಲಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಡಿಜಿಟಲ್‌ ಟಚ್‌ ಕೊಡುವ ನಿಟ್ಟಿನಲ್ಲಿ 7 ಸಾವಿರ ಕೋಟಿ ರೂ. (1 ಬಿಲಿಯನ್‌ ಅಮೆರಿಕನ್‌ ಡಾಲರ್‌) ಮೊತ್ತವನ್ನು ಹೂಡಿಕೆ ಮಾಡುವುದಾಗಿ ಅಮೆರಿಕದ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಸಿಇಒ ಜೆಫ್ ಬೆಜೋಸ್‌ ಬುಧವಾರ ತಿಳಿಸಿದ್ದಾರೆ.

Advertisement

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಅವರು ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾದರು. ಅಮೆರಿಕ ಮತ್ತು ಭಾರತ ನಡುವಿನ ಮೈತ್ರಿಯೇ 21ನೇ ಶತಮಾನದ ಪ್ರಧಾನ ಅಂಶ ಎಂದು ಹೇಳಿದ್ದಾರೆ.

ಅಮೆಜಾನ್‌ ಜಗತ್ತಿನ ಇತರ ಭಾಗಗಳಲ್ಲಿ ಅನುಸರಿಸುತ್ತಿರುವ ‘ಗಾತ್ರ’ (ಸೈಜ್‌), ‘ವ್ಯಾಪ್ತಿ’ (ಸ್ಕೋಪ್‌), ‘ಪ್ರಮಾಣ’, (ಸ್ಕೇಲ್‌) ಸೂತ್ರವನ್ನು ಭಾರತದಲ್ಲಿಯೂ ಅನುಸರಿಸಲಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಸಿದಂತೆ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ 70, 852 ಕೋಟಿ ರೂ. ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಲಿದೆ ಎಂದಿದ್ದಾರೆ.

ವಿದೇಶಿ ನೇರ ಹೂಡಿಕೆಯಲ್ಲಿ ಇ-ಕಾಮರ್ಸ್‌ ಜಾಲತಾಣಗಳು ನಿಯಮ ಉಲ್ಲಂಘಿಸಿದ ದೂರಿನ ಬಗ್ಗೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ತನಿಖೆಗೆ ಆದೇಶ ನೀಡಿರುವ ಬೆನ್ನಲ್ಲೇ ಬೆಜೋಸ್‌ ಪ್ರವಾಸ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next