Advertisement
ಶೆರ್ಲಾಕ್ ಹೋಮ್ಸ್ ಮತ್ತು ವಾಟ್ಸನ್ ನಿಮಗೆ ಗೊತ್ತಿರಬಹುದು. ಒಮ್ಮೆ ಹೀಗಾಯಿತು. ಇಬ್ಬರೂ ಪರ್ವತವೊಂದಕ್ಕೆ ಟ್ರೆಕಿಂಗ್ ಹೋಗಿದ್ದರು. ರಾತ್ರಿ ಟೆಂಟ್ ಹೂಡಿ ನಿದ್ರಿಸಿದರು. ನಡುರಾತ್ರಿ ಶೆರ್ಲಾಕ್ ಹೋಮ್ಸ್, ವಾಟ್ಸನ್‌ನನ್ನು ತಟ್ಟಿ ಎಬ್ಬಿಸಿದ. “ನಿನಗೇನು ಕಾಣಿಸುತ್ತಿದೆ’ ಎಂದು ಪ್ರಶ್ನಿಸಿದ. ವಾಟ್ಸನ್ ಕಣ್ಣುಜ್ಜಿ ಕೊಂಡು ಮಿನುಗುವ ತಾರೆ ಗಳಿರುವ ವಿಶಾಲ ಆಕಾಶ ಕಾಣಿಸುತ್ತಿದೆ’ ಎಂದ. “ಅದರ ಬಗ್ಗೆ ನಿನಗೇನನಿಸುತ್ತದೆ’ ಎಂಬುದು ಶೆರ್ಲಾಕ್ ಹೋಮ್ಸ್‌ನ ಪ್ರಶ್ನೆ. “ನಾಳೆಗಳು ನಮ್ಮ ಪಾಲಿಗೆ ಹೀಗೆ ಮಿನುಗುವ ಸುಂದರ ದಿನಗಳಾಗಿ ರುತ್ತವೆ’ ಎಂದು ವಾಟ್ಸನ್ ಹೇಳಿದ.
ಬದುಕನ್ನು ಅದು ಇರುವಂತೆ ಪರಿಗ್ರಹಿಸಿ ದರೆ ಮಾತ್ರ ಬದುಕಿನಲ್ಲಿ ಯಶಸ್ವಿಯಾಗಿ ಮುನ್ನಡೆಯುವುದು ಸಾಧ್ಯ. ನಾಳೆಗಳ ಬಗ್ಗೆ ಕನಸು ಕಟ್ಟಿಕೊಳ್ಳಬಾರದು ಎಂದಲ್ಲ. ಆದರೆ ನಮ್ಮ ಇಂದಿನ ಗ್ರಹಿಕೆ ಸರಿಯಾಗಿರಬೇಕು. ಇತರರಿಗಿಂತ ವೇಗವಾಗಿ ಮುಂದಕ್ಕೆ ಸಾಗುವುದು ಯಶಸ್ಸು ಎಂದುಕೊಳ್ಳುತ್ತೇವೆ. ಆದರೆ ನಾವು ವೇಗವಾಗಿದ್ದು, ನಮ್ಮ ಗ್ರಹಿಕೆ ಸರಿಯಿಲ್ಲದಿದ್ದರೆ ಕಲ್ಲಿಗೋ ಗೋಡೆಗೋ ಢಿಕ್ಕಿ ಹೊಡೆಯುವುದು ಖಚಿತ.
Related Articles
Advertisement
ಇದನ್ನೂ ಓದಿ :ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ವೈಫಲ್ಯಗಳನ್ನು ಅನು ಭವಿಸುವವರಲ್ಲಿ ಎಷ್ಟೋ ಮಂದಿ ಒಳ್ಳೆಯ ವಿದ್ಯಾರ್ಹತೆ ಹೊಂದಿ ರುತ್ತಾರೆ, ಬುದ್ಧಿವಂತರಾಗಿರುತ್ತಾರೆ, ಹಣವೂ ಇರುತ್ತದೆ. ಆದರೂ ಸರಿಯಾದ ಸಮಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸೋಲುತ್ತಾರೆ. ಯಶಸ್ಸನ್ನು ಬಿತ್ತಿ ಬೆಳೆದು ಫಲ ಉಣ್ಣುವವರು ಸಾಧಾರಣ ಬುದ್ಧಿಮತ್ತೆಯವರಾಗಿ ರಬಹುದು. ಆದರೆ ಅವರ ವಾಸ್ತವದ ಗ್ರಹಿಕೆ ಸ್ಪಷ್ಟವಾಗಿರುತ್ತದೆ.
ಹಾಗಾಗಿ ನಾವು ಕೇವಲ ಯಶಸ್ಸಿಗಾಗಿ ಕಾತರಿಸಬಾರದು. ಬದಲಾಗಿ ನಮ್ಮ ಗ್ರಹಿಕೆ, ಸಾಮರ್ಥ್ಯ, ಸ್ಪರ್ಧಾತ್ಮಕತೆಗಳನ್ನು ಅತ್ಯುಚ್ಚ ಮಟ್ಟಕ್ಕೆ ಎತ್ತರಿಸಿಕೊಳ್ಳಬೇಕು. ಆಗ ನಾವು ಏನೇ ಮಾಡಿದರೂ ಯಶಸ್ಸು ಒಲಿಯುತ್ತದೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎನ್ನುತ್ತಾರಲ್ಲ, ಹಾಗೆ.
( ಸಾರ ಸಂಗ್ರಹ)