Advertisement
ಒಬ್ಟಾತ ಪಾಲಿಸಿದಾರರು ಹತ್ತು ವರ್ಷದ ಅವಧಿಯಲ್ಲಿ ಸುಮಾರು 49 ಸಾವಿರ ರೂಪಾಯಿಗಳನ್ನು ಕಟ್ಟಿ ಕೊನೆಗೂ ಎಲ್‌ಐಸಿಯಿಂದ ಕೇವಲ 42 ಸಾವಿರ ರೂಪಾಯಿ ಪಡೆದು 8 ಸಾವಿರ ರುಪಾಯಿಗಳ ನಿವ್ವಳ ನಷ್ಟ ಅನುಭವಿಸಿದ್ದಾರಂತೆ. ಆ ಸುದ್ದಿ ಓದಿದ “ಸರಳ ಜೀವನ’ವನ್ನೇ ಅವಲಂಬಿಸಿರುವ ಹಲವಾರು ಪಾಲಿಸಿದಾರರು ತಾವು ಮೋಸ ಹೋದೆವೋ ಎಂಬ ಆತಂಕದಿಂದ ನನಗೆ ಇ-ಮೈಲ್ ಕಳುಹಿಸಿದ್ದಾರೆ. ಒಂದು ಕಾಲದಲ್ಲಿ ಅತ್ಯಂತ ಗರಿಷ್ಠ ಮಾರಾಟವಾಗಿರುವ ಈ ಪಾಲಿಸಿ ಸರಿ ಸುಮಾರು ಎಲ್ಲಾಕುಟುಂಬಗಳಲ್ಲೂ ಒಂದಾದರೂ ಇದ್ದೀತು. ಅಂತಹ ಸಂದರ್ಭದಲ್ಲಿ ಜೀವನ್ ಸರಳ್ ಪಾಲಿಸಿಯ ಬಗ್ಗೆ ಒಂದಿಷ್ಟು ವಸ್ತುನಿಷ್ಟ ವಿಶ್ಲೇಷಣೆ ಅತ್ಯಗತ್ಯ.
ಗಿರುತ್ತದೆ. ಅವುಗಳಲ್ಲಿ ವ್ಯತ್ಯಾಸ ಇರುವುದು ಸೌಲಭ್ಯಗಳಲ್ಲಿ ಮಾತ್ರ. ಟೋಪಿ ರಿಟರ್ನ್ ಕೊಡುವ ಅಥವಾ ಜನತೆಗೆ ಮೋಸ ಮಾಡಿ ಬೆಳಗ್ಗೆದ್ದು ಓಡಿ ಹೋಗುವ ಯಾವುದೇ ಪಾಲಿಸಿಯು ಸರಕಾರಿ ಸ್ವಾಮ್ಯದ ಎಲ್ಲೆ„ಸಿಯ ಜೋಳಿಗೆಯಲ್ಲಿ ಇರುವುದಿಲ್ಲ. ಪ್ರತಿ ಯೊಬ್ಬನೂ ಪಾಲಿಸಿಯ ಫೀಚರ್ಸ್ ಅನುಸರಿಸಿ ಅವರವರ ಭಾವಕ್ಕೆ, ಭಕುತಿಗೆ ಮತ್ತು ಅಗತ್ಯಕ್ಕೆ ಹೊಂದುವ ಪಾಲಿಸಿಯನ್ನು ಆಯ್ದುಕೊಳ್ಳುವುದು ಅಗತ್ಯ. ಎಂಡೋಮೆಂಟ್ ಪಾಲಿಸಿ ನೀಡುವ ಸೌಕರ್ಯಗಳನ್ನು ಮನಿ ಬ್ಯಾಕ್ ನೀಡುವುದಿಲ್ಲ; ಹೋಲ್ ಲೈಫ್ ಪಾಲಿಸಿ ಕೊಡುವ ಸವಲತ್ತುಗಳನ್ನು ಜೀವನ್ ಆನಂದ್ ನೀಡಲಾರದು. ಅದರ ಅರ್ಥ ಅವುಗಳ ಪ್ರತಿಫಲಗಳಲ್ಲಿ ವ್ಯತ್ಯಾಸ ಇದೆ ಎಂದಲ್ಲ. ವ್ಯತ್ಯಾಸವಿರುವುದು ಸೌಲಭ್ಯಗಳಲ್ಲಿ ಮಾತ್ರ. ಎಲ್‌ಐಸಿಯ ಮುಖ್ಯ ಉದ್ದೇಶ ಜೀವ ವಿಮೆ. ಅಕಸ್ಮಾತ್ತಾಗಿ ವ್ಯಕ್ತಿ ತೀರಿಕೊಂಡರೆ ಅವಲಂಬಿತರಿಗೆ ಆಧಾರವಾಗಿ ವಿಮಾ ಮೊತ್ತ ಕೈಸೇರುತ್ತದೆ. ಆದರೆ, ಆ ಜೀವ ವಿಮೆಗೂ ಒಂದು ವೆಚ್ಚ ಇದೆ ಎನ್ನುವುದನ್ನು ಅನೇಕರು ಗಮನಿಸುವುದೇ ಇಲ್ಲ. ಕಟ್ಟಿದ ಒಟ್ಟು ಮೊತ್ತವಿಡೀ ಬ್ಯಾಂಕಿನ ಠೇವಣಿಯಂತೆ ಇಂತಿಷ್ಟು ಶೇಕಡಾ ಪ್ರತಿಫಲ ನೀಡಬೇಕೆಂದು ಆಶಿಸುತ್ತಾರೆ. ಇದು ಸರಿಯಲ್ಲ. ವಿಮೆಯ ಮಹತ್ವ ಮೃತ ಹೊಂದಿದವರ ಕುಟುಂಬಸ್ಥರಿಗೆ ಮಾತ್ರ ಅರಿವಿರುತ್ತದೆ. ವಿಮಾ ಅವಧಿ ಕಳೆದು ಬದುಕಿ ಉಳಿದ ಜನ ಅಷ್ಟು ದಿನ ಎಲ್‌ಐಸಿ ನೀಡಿದ ವಿಮಾ ಭದ್ರತೆಯನ್ನು ಮರೆಯುತ್ತಾರೆ. ಮೊತ್ತ ಮೊದಲು ಈ ಮನೋಸ್ಥಿತಿ ಬದಲಾಗಬೇಕು.
Related Articles
Advertisement
ಜೀವನ್ ಸರಳ್ ಒಂದು ವಿಭಿನ್ನ ರೀತಿಯ ಪಾಲಿಸಿ. ಇದು ಹೂಡಿಕೆಯುಳ್ಳ ಎಂಡೋಮೆಂಟ್ ನಮೂನೆಯ ಹಾಗೂ ಯಾವುದೇ ಹೂಡಿಕೆಯಿಲ್ಲದ ಟರ್ಮ್ ಪ್ಲಾನುಗಳ ಒಂದು ವಿಶೇಷ ಮಿಶ್ರಣ. ಇದರಲ್ಲಿ ಹೂಡಿಕೆ ಇದ್ದರೂ ಅದರ ಅಂಶ ಅತಿ ಕಡಿಮೆ. ಕಡಿಮೆ ಪ್ರೀಮಿಯಂ ದುಡ್ಡಿಗೆ ಅತಿ ಹೆಚ್ಚು ವಿಮಾ ಸೌಲಭ್ಯ ನೀಡುವುದೇ ಈ ಪಾಲಿಸಿಯ ಮುಖ್ಯ ಉದ್ದೇಶ. ಕಟ್ಟಿದ ದುಡ್ಡಿನ ಬಹುಪಾಲು ವಿಮಾ ವೆಚ್ಚಕ್ಕಾಗಿಯೇ ಹೋಗುತ್ತದೆ ಎನ್ನುವುದನ್ನು ಜನತೆ ಮರೆಯಬಾರದು. ಈ ಪಾಲಿಸಿಯನ್ನು ವಿಮಾ ಸೌಲಭ್ಯದ ದೃಷ್ಟಿಯಿಂದ ನೋಡಿ ಖರೀದಿಸಬೇಕು. ಹೂಡಿಕೆಯ ಅಂಶ ಅತ್ಯಂತ ಕಡಿಮೆ ಇರುವ ಕಾರಣ ಪ್ರತಿಫಲದ ಮೊತ್ತವೂ ಕಡಿಮೆಯೇ ಇರುವುದು ಸಹಜ. ಆದರೆ ಈ ಕಾರಣಕ್ಕಾಗಿಯೇ ಹಲವು ಸಂದರ್ಭಗಳಲ್ಲಿ ಕಟ್ಟಿದ ದುಡೂx ವಾಪಾಸು ಸಿಗುವುದಿಲ್ಲ ಎನ್ನುವುದು ಸತ್ಯ ಆದರೆ ಅದರ ಹಿಂದಿನ ಕಾರಣ ತರ್ಕಬದ್ಧವಾಗಿದೆ.
ಉದಾ: ರೂಪಾಯಿ ಒಂದು ಲಕ್ಷದ ವಿಮಾ ಸೌಲಭ್ಯವಿದ್ದು ಕಟ್ಟಿದ ದುಡ್ಡು ವಾಪಾಸು ಸಿಗುವ ಒಂದು ಎಂಡೋಮೆಂಟ್ ಪಾಲಿಸಿ ಮಾಡಿಸಿದ್ದರೆ ತಿಂಗಳಾ 956 ಪ್ರೀಮಿಯಂ ಕಟ್ಟಬೇಕಿತ್ತು. ಅದೇ ವಿಮಾ ಮೊತ್ತಕ್ಕೆ ಜೀವನ್ ಸರಳ್ ನಲ್ಲಿ ಕೇವಲ 408 ಕಟ್ಟುವ ಕಾರಣ ಅದರ ಬಹುಪಾಲು ಹಣ ವಿಮಾ ವೆಚ್ಚಕ್ಕೇ ಸಲ್ಲುತ್ತದೆ, ಹೂಡಿಕೆಗೆ ಕಡಿಮೆ ಸಲ್ಲುತ್ತದೆ ಅನ್ನುವುದು ಸ್ವಯಂವೇದ್ಯ. ವಿಮೆಯ ಮಹತ್ವ ಮತ್ತು ವೆಚ್ಚವನ್ನು ಅರಿತುಕೊಳ್ಳದೆ ಕೇವಲ ವಾಪಸಾತಿಯನ್ನು ಮಾತ್ರ ನೋಡುತ್ತಾ ಹೋದರೆ ಪಾಲಿಸಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡುವುದು ಸಹಜ.
ನಾವು ಕಟ್ಟುವ ಪ್ರೀಮಿಯಂ ಮೊತ್ತ, ಅದರಲ್ಲಿ ಸಿಗುವ ವಿಮೆಯ ಮೊತ್ತ ಮತ್ತದರ ವೆಚ್ಚ, ಉಳಿಯುವ ಹೂಡಿಕೆಯ ಮೊತ್ತ – ಈ ನಾಲ್ಕೂ ವಿಚಾರಗಳನ್ನು ಸಮಗ್ರವಾಗಿ ನೋಡಿದರೆ ಮಾತ್ರ ಒಂದು ಪಾಲಿಸಿಯ ಮೌಲ್ಯಮಾಪನ ಸಾಧ್ಯ. ಕೇವಲ ಕಟ್ಟಿದ ದುಡ್ಡು ವಾಪಾಸು ಬಂದಿಲ್ಲ ಎನ್ನುವ ಏಕೈಕ ಕಾರಣಕ್ಕೆ ಒಂದು ವಿಮಾ ಪಾಲಿಸಿಯನ್ನು ಅಪಾರ್ಥ ಮಾಡಿಕೊಳ್ಳಬಾರದು. ಶುದ್ಧ ವಿಮೆಯಾದ ಟರ್ಮ್ ಪ್ಲಾನುಗಳಲ್ಲಿ ಪ್ರತಿಫಲ ಶೂನ್ಯ! ಅಲ್ಲಿ ಕಟ್ಟಿದ ದುಡ್ಡಿನ ಒಂದು ಪೈಸೆಯೂ ವಾಪಾಸು ಬರುವುದಿಲ್ಲ. ಆದರೂ ಅದೊಂದು ಶ್ರೇಷ್ಟ ವಿಮಾ ಯೋಜನೆಯೇ ಆಗಿದೆ ಎಂದು ನಾನು ಹಲವು ಬಾರಿ ಇಲ್ಲಿ ಚರ್ಚಿಸಿದ್ದೇನೆ. ಅಲ್ಲದೆ ಹೂಡಿಕೆಯ ದೃಷ್ಟಿ ಮಾತ್ರ ಇರುವವರು ವಿಮಾ ಪಾಲಿಸಿಗಳಲ್ಲಿ ದುಡ್ಡು ಹಾಕಬಾರದು.
ಇನ್ನೂ ಒಂದು ಮಾತು ಏನೆಂದರೆ ಈ ಪಾಲಿಸಿಯಲ್ಲಿ ಲಾಯಲ್ಟಿ ಬೋನಸ್ ಆರಂಭವಾಗುವುದೇ 10 ವರ್ಷಗಳ ಬಳಿಕ. ಹಾಗಾಗಿ 10 ವರ್ಷದ ಪಾಲಿಸಿಗಳಿಗೆ ಕನಿಷ್ಟ ಪ್ರತಿಫಲ ಸಿಕ್ಕಿ ದೀರ್ಘಕಾಲಕ್ಕೆ ಹೋದಂತೆಲ್ಲಾ ಪ್ರತಿಫಲ ಜಾಸ್ತಿಯಾಗುತ್ತಾ ಹೋಗುತ್ತದೆ.
ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಒಂದೇ ಪಾಲಿಸಿಯಲ್ಲಿ ಡೆತ್ ಬೆನಿಫಿಟ್ ಮತ್ತು ಮೆಚೂÂರಿಟಿ ಬೆನೆಫಿಟ್ ಎಂಬ ಎರಡು ವಿಭಿನ್ನ ಪರಿಕಲ್ಪನೆಗಳನ್ನು ಜೀವನ್ ಸರಳ್ ಪಾಲಿಸಿಯ ಮೂಲಕ ಎಲ್ಲೆ„ಸಿಯು ಪರಿಚಯಿಸಿತು.
ಡೆತ್ ಬೆನಿಫಿಟ್ ಅಡಿಯಲ್ಲಿ ಎಲ್ಲಾ ವಯಸ್ಸಿನವರಿಗೂ ಯಾವುದೇ ತಾರತಮ್ಯವಿಲ್ಲದೆ ಮಾಸಿಕ ಪ್ರೀಮಿಯಂನ 250 ಪಾಲು ವಿಮಾ ಸೌಲಭ್ಯ ನೀಡುವ ಜೊತೆ ಜೊತೆಗೆ ಲಾಯಲ್ಟಿ ಬೋನಸ್ ನೀಡುವ ಕಡಿಮೆ ಪ್ರೀಮಿಯಂ ಚಾರ್ಜ್ ಮಾಡುವ, ಅದೂ ಅಲ್ಲದೆ ಕಟ್ಟಿದ ಪ್ರೀಮಿಯಂ ಅನ್ನು (ಮೊದಲ ವರ್ಷದ್ದು ಬಿಟ್ಟು) ಸಂಪೂರ್ಣವಾಗಿ ಹಿಂದಿರುಗಿಸುವ, ಅದೂ ಅಲ್ಲದೆ ಪಾಲಿಸಿಯನ್ನು ಅರ್ಧಕ್ಕೆ ನಿಲ್ಲಿಸುವುದಿದ್ದರೆ ಸರೆಂಡರ್ ಮೊತ್ತವನ್ನೂ ಗಣನೀಯವಾಗಿ ಶೇ.100ವರೆಗೆ ಹೆಚ್ಚಿಸಿ ಪಾಲಿಸಿದಾರರಿಗೆ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಏಕೈಕ ಪಾಲಿಸಿ ಜೀವನ್ ಸರಳ್. ನಡುವಯಸ್ಸು ದಾಟಿದವರಿಗೆ ದೀರ್ಘಕಾಲದ ಗರಿಷ್ಠ ವಿಮಾ ಸೌಲಭ್ಯಕ್ಕೆ ಹೇಳಿ ಮಾಡಿಸಿದ ಪಾಲಿಸಿ ಜೀವನ್ ಸರಳ್.
ಏತನ್ಮಧ್ಯೆ, ಎಲ್ಐಸಿಯು ಈ ಪಾಲಿಸಿಯನ್ನು ಹಿಡಿದುಕೊಂಡು ಕಾನೂನಾತ್ಮಕವಾಗಿ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದೆ. ಪಾಲಿಸಿ ಬಾಂಡ್ ಪ್ರಿಂಟ್ ಹೊಡೆಯುವ ಹೊತ್ತಿಗೆ ಡೆತ್ ಬೆನಿಫಿಟ್ ಮತ್ತು ಮೆಚ್ಯೂರಿಟಿ ಬೆನಿಫಿಟ್‌ಗಳನ್ನು ಪ್ರತ್ಯೇಕವಾಗಿ ನಮೂದಿಸದೆ ಮೆಚ್ಯೂರಿಟಿ ಬೆನಿಫಿಟ್ ಅಡಿಯಲ್ಲಿ ಡೆತ್ ಬೆನಿಫಿಟ್ ಅನ್ನೇ (250 ಪಾಲಿನ) ನಮೂದಿಸಿ ಅಂತಿಮವಾಗಿ ಪಾಲಿಸಿದಾರರಿಗೆ ಮೆಚ್ಯೂ ರಿಟಿ ಸಂದರ್ಭದಲ್ಲಿ ಆ ಪ್ರತಿಫಲ ಕೊಡಲಾರದೆ ಕೇಸು ತಗಲಾಕಿಸಿಕೊಂಡು ಕೋರ್ಟ್ ಕಚೇರಿ ಅಲೆದಾಡುತ್ತಿದೆ. ಈ ಪಾಯಿಂಟ್ ಹಿಡಿದುಕೊಂಡು ಹಲವರು ನನಗೆ ಇ-ಮೈಲ್ ಕಳುಹಿಸಿ ಪಾಲಿಸಿಯ ಬಗ್ಗೆ ವಿವರಣೆ ನೀಡುವಂತೆ ಕೋರಿಕೊಂಡಿದ್ದಾರೆ.