Advertisement

JEE Mains 2017: ಉದಯಪುರದ ಕಾಂಪೌಂಡರ್‌ ಮಗ ಟಾಪರ್‌, 360/360 ಅಂಕ

04:15 PM Apr 27, 2017 | Team Udayavani |

ಹೊಸದಿಲ್ಲಿ : 2017ರ JEE Mains ಪರೀಕ್ಷೆಯಲ್ಲಿ ರಾಜಸ್ಥಾನದ ಉದಯಪುರದ, ಕಾಂಪೌಂಡರ್‌ ಓರ್ವರ ಮಗನಾಗಿರುವ, ಕಲ್ಪಿತ್‌ ವೀರವಾಲ್‌ 360ರಲ್ಲಿ 360 ಅಂಕಗಳನ್ನು ಪಡೆದುಕೊಂಡು All India Rank No.1 ಪಡೆದ ಮಹೋನ್ನತ ಸಾಧನೆಯನ್ನು ದಾಖಲಿಸಿದ್ದಾರೆ. ಜೆಇಇ ಫ‌ಲಿತಾಂಶಗಳು ಇಂದು ಬಹಿರಂಗವಾಗಿವೆ.

Advertisement

ಸೆಂಟ್ರಲ್‌ ಬೋರ್ಡ್‌ ಆಫ್ ಸೆಕೆಂಡರಿ ಎಜ್ಯುಕೇಶನ್‌ (ಸಿಬಿಎಸ್‌ಇ) ಇದರ ಅಧ್ಯಕ್ಷರಾಗಿರುವ ಆರ್‌ ಕೆ ಚತುರ್ವೇದಿ ಅವರು ಉದಯಪುರದಿಂದ ನನಗೆ ಫೋನ್‌ ಮಾಡಿ  ನಾನು ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ ವಿಭಾಗದಲ್ಲಿ ಟಾಪರ್‌ ಆಗಿರುವುದಾಗಿ ತಿಳಿಸಿದ್ದಾರೆ; ಪರೀಕ್ಷೆಯಲ್ಲಿ 360ರಲ್ಲಿ 360 ಅಂಕಗಳನ್ನು ನಾನು ಪಡೆದಿರುವುದಾಗಿ ತಿಳಿಸಿ ಅಭಿನಂದಿಸಿದ್ದಾರೆ ಎಂದು ವೀರವಾಲ್‌ ಅವರು ಮಾಧ್ಯಮಕ್ಕೆ ತಿಳಿಸಿದರು. 

17ರ ಹರೆಯದ ವೀರವಾಲ್‌ ಅವರು ಎಂಡಿಎಸ್‌ ಪಬ್ಲಿಕ್‌ ಸ್ಕೂಲ್‌ನಿಂದ ಖಾಸಗಿಯಾಗಿ 12ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದು ಇದೀಗ ಅದರ ಫ‌ಲಿತಾಂಶವನ್ನು ಎದುರು ನೋಡುತ್ತಿದ್ದಾರೆ. 

“ಜೆಇಇ ಮೇನ್ಸ್‌ನಲ್ಲಿ ನಾನು ಟಾಪರ್‌ ಆಗಿರುವುದು ನನಗೆ ಅತ್ಯಂತ ಸಂತಸದ ವಿಷಯವಾಗಿದೆ. ಆದರೆ ನಾನಿದನ್ನು ಈಗ ಮಾಮೂಲಿಯಾಗಿ ಕಾಣುತ್ತಿದ್ದೇನೆ; ಕಾರಣ ನಾನೀಗ ಮುಂಧಿನ ತಿಂಗಳು ನಡೆಯಲಿರುವ  ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಯ ಮೇಲೆ ದೃಷ್ಟಿ ನೆಟ್ಟಿದ್ದೇನೆ’ ಎಂದು ವೀರವಾಲ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next