ಹೊಸದಿಲ್ಲಿ: ಜೆಇಇ-ಅಡ್ವಾನ್ಸ್ಡ್ ಫಲಿತಾಂಶ ರವಿ ವಾರಪ್ರಕಟಗೊಂಡಿದ್ದು, ಐಐಟಿ ದಿಲ್ಲಿ ವಲಯದ ವೇದ್ ಲಹೋತಿ 360ರ ಪೈಕಿ 355 ಅಂಕ ಗಳಿಸಿ ದೇಶದಲ್ಲೇ ಅಗ್ರ ಸ್ಥಾನ ಪಡೆದಿದ್ದಾರೆ. ಇನ್ನು, ಐಐಟಿ ಬಾಂಬೆ ವಲಯದ ದ್ವಿಜ ಧರ್ಮೇಶ್ಕುಮಾರ್ ಪಟೇಲ್ ಮಹಿಳಾ ಅಭ್ಯರ್ಥಿಗಳ ಪೈಕಿ ಟಾಪರ್ (332 ಅಂಕ) ಆಗಿದ್ದು, ಇವರು ದೇಶೀಯ ಮಟ್ಟದಲ್ಲಿ 7ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಐಐಟಿ ಮದ್ರಾಸ್ ಹೇಳಿದೆ. ರ್ಯಾಂಕ್ ಪಡೆದ ಟಾಪ್ 10 ಮಂದಿಯ ಪೈಕಿ ನಾಲ್ವರು ಐಐಟಿ ಮದ್ರಾಸ್ನವರು. ದಿಲ್ಲಿ ವಲಯದ ಆದಿತ್ಯ 2ನೇ ಸ್ಥಾನ, ಮದ್ರಾಸ್ ವಲಯದ ಭೋಗಲ್ಪಳ್ಳಿ ಸಂದೇಶ್ 3ನೇ ಸ್ಥಾನ ಪಡೆದಿದ್ದಾರೆ. ಟಾಪ್ 500 ಅಭ್ಯರ್ಥಿಗಳ ಪೈಕಿ 145 ಮಂದಿ ಐಐಟಿ ಮದ್ರಾಸ್ ವಲಯದವರಾಗಿದ್ದು, 136 ಮಂದಿ ಐಐಟಿ ಬಾಂಬೆ ಮತ್ತು 122 ಮಂದಿ ಐಐಟಿ ದಿಲ್ಲಿ ವಲಯದವರು. 7 ಮಂದಿ ವಿದೇಶಿ ಅಭ್ಯರ್ಥಿಗಳು ಹಾಗೂ 179 ಮಂದಿ ಸಾಗರೋತ್ತರ ಭಾರತೀಯ ನಾಗರಿಕರು ಕ್ವಾಲಿಫೈ ಆಗಿದ್ದಾರೆ. ಸೋಮವಾರ ದಿಂದ ಜಂಟಿ ಸೀಟು ಹಂಚಿಕೆ ಕೌನ್ಸೆಲಿಂಗ್ ಆರಂಭವಾಗಲಿದೆ.