Advertisement
ಜೀನ್ಸ್‌ನಿಂದ ಜಾಕೆಟ್‌ಗಳವರೆಗೆ ಎಲ್ಲರೂ ಡೆನಿಮ್ ಅನ್ನು ಇಷ್ಟಪಡುತ್ತೇವೆ. ಡೆನಿಮ್ ಟೈಮ್‌ಲೆಸ್ ಫ್ಯಾಶನ್‌ಗಳಲ್ಲಿ ಒಂದಾಗಿದೆ.
Related Articles
ತನ್ನ ಹಲವು ವಿಭಿನ್ನ ವಿನ್ಯಾಸಗಳು ಮತ್ತು ಗುಣಮಟ್ಟಗಳಿಂದ ಡೆನಿಮ್ ಯುವ ಜನತೆಯ ನೆಚ್ಚಿನ ಆಯ್ಕೆಯಾಗಿದೆ. ಡೆನಿಮ್ ಜೀನ್ಸ್‌ಗಳಿಗಿರುವ ಗತ್ತೇ ಅಂತಹದ್ದು. 80ರ ದಶಕದಿಂದಲೂ ವಿಶೇಷ ಮಾದರಿಯ ಜೀನ್ಸ್ ಜಾಕೆಟ್‌ಗಳು ಮತ್ತು ಸುದೃಢ ಜೀನ್ಸ್ ಬಾಟಂಗಳಿಗೆ ತನ್ನದೇ ಆದ ಮೌಲ್ಯವನ್ನು ಹೊಂದಿದೆ.
Advertisement
ಡೆನಿಮ್ ಜೀನ್ಸ್‌ನಲ್ಲಿ ವೈವಿಧ್ಯಗಳು
ಸ್ಲಿಟ್ ಜೀನ್ಸ್
ಸ್ಲಿಟ್ ಜೀನ್ಸ್ ಫ್ಯಾಶನ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಸ್ಲಿಟ್ ಜೀನ್ಸ್‌ನಲ್ಲಿ ಸ್ಲಿಮ್-ಟ್ರೆಂಡ್‌ಗಳು ಬಹುತೇಕ ಸಾಮಾನ್ಯವಾಗಿದೆ. ಸ್ಲಿಮ್ ಜೀನ್ಸ್, ವಿಂಟೇಜ್ ಫಿಟ್ ಜೀನ್ಸ್ ಮತ್ತು ಅಗಲ ಕಾಲಿನ ಜೀನ್ಸ್, ಸೈಡ್ ಸ್ಲಿಟ್ ಅಥವಾ ಫ್ರಂಟ್ ಸ್ಲಿಟ್ ಮೊದಲಾದ ವೈವಿಧ್ಯವೂ ಇದರಲ್ಲಿದೆ. ಸ್ಲಿಟ್ ಜೀನ್ಸ್ ಪ್ರಸ್ತುತ ಡೆನಿಮ್ ಅತ್ಯಧಿಕ ಮಾರುಕಟ್ಟೆ ಇರುವ ವಿನ್ಯಾಸವಾಗಿದೆ. ಡಿಸ್ಟ್ರೋಯಿಡ್ ಜೀನ್ಸ್
ಹಿರಿಯರಿಗೆ ಇದು ಅಷ್ಟು ಇಷ್ಟವಾಗಲಿಕ್ಕಿಲ್ಲ. ಮೊಣಕಾಲು ಹರಿದಿರುವ ಪ್ಯಾಂಟ್‌ಗಳನ್ನು ಧರಿಸಿ ಮದುವೆ ಸಮಾರಂಭದಲ್ಲೂ ಭಾಗವಹಿಸುವಷ್ಟು ಟ್ರೆಂಡ್ ಸೆಟ್ ಮಾಡಿವೆ ಈ ಡ್ರೆಸ್ಟ್ರೋಯಿಡ್ ಜೀನ್ಸ್‌ಗಳು.
ಮೊಣಕಾಲು ಹರಿದಿರುವ ಮಾದರಿ, ಇಲ್ಲವೇ ಬಣ್ಣವನ್ನು ಆಸಿಡ್ ಬಳಸಿ ಗಾಢವಾಗಿ ಉಜ್ಜಿ ನೂಲುಗಳು ಎದ್ದು ಕಾಣುವಂತೆ ಮಾಡಿರುವುದು ಯುವಕರನ್ನು ಬೇಗ ಸೆಳೆಯುತ್ತಿದೆ ಆದರೆ ಹೆತ್ತವರ ಮತ ಇದಕ್ಕೆ ಅಷ್ಟಾಗಿ ಸಿಕ್ಕಿಲ್ಲ. ಡಿಸ್ಟ್ರೋಯಿಡ್ ಜೀನ್ಸ್‌ಗಳು ಬ್ಲೇಜರ್, ಚೆಕ್ಸ್ ಶರ್ಟ್‌ಗಳೊಂದಿಗೆ ಉತ್ತಮ ಮ್ಯಾಚಿಂಗ್ ಆಗಿದೆ. ಕಸೂತಿ ಜೀನ್ಸ್
ಮಹಿಳಾ ವಿನ್ಯಾಸಕರು ಯಾವಾಗಲೂ ಡೆನಿಮ್ ಕ್ಲಾಸಿಕ್‌ಗಳಲ್ಲಿ ತಮ್ಮ ಕಸೂತಿ ಕಲೆಯನ್ನು ಪ್ರದರ್ಶಿಸಿ ಹೆಣ್ಣು ಮಕ್ಕಳಲ್ಲೂ ಡೆನಿಮ್ ಪ್ರೀತಿ ಮೂಡಿಸುತ್ತಿದ್ದಾರೆ. ಕಸೂತಿ ಜೀನ್ಸ್ ಯುವತಿರ ನೆಚ್ಚಿನ ಆಯ್ಕೆಯಲ್ಲಿ ಒಂದಾಗಿದೆ.
ಇಂದಿನ ಪೀಳಿಗೆಯ ಯುವತಿಯರು ಹೆಚ್ಚಿನ ಜೀನ್ಸ್‌ಗಳಲ್ಲಿ ಕಸೂತಿ ಕಲೆಯನ್ನು ಬಯಸುತ್ತಾರೆ. ಕಸೂತಿ ಜೀನ್ಸ್ ಅನ್ನು ಸರಳ ಟೀಸ್, ಟಾಪ್ಸ್, ಟೀ ಶರ್ಟ್, ಶರ್ಟ್ ಧರಿಸಬಹುದಾಗಿದೆ. ಬೂಟ್ಕಟ್ ಜೀನ್ಸ್
90ರ ದಶಕದ ಜನಪ್ರಿಯ ಶೈಲಿ ಮತ್ತೆ ಬಂದಿದೆ. ಬೂಟ್ಕಟ್ ಜೀನ್ಸ್ ಸೊಂಟ ಮತ್ತು ತೊಡೆಯ ವರಗೆ ಸ್ಲಿಮ್ ಆಗಿದ್ದು ಪಾದದ ಮಣಿಗಂಟಿನಲ್ಲಿ ಅಗಲವಾಗಿರುತ್ತದೆ. ಈ ಜೀನ್ಸ್‌ಗಳು ಯಾವುದೇ ಸಂದರ್ಭದಲ್ಲಿ ಧರಿಸಲು ಸೂಕ್ತವಾಗಿದೆ. ಟಾರ್ಟನ್ ಬ್ಲೇಜರ್, ಮುದ್ರಿತ ಸ್ಕಾರ್ಫ್ ಹೊಂದಿರುವ ಶರ್ಟ್‌ಗಳಿಗೆ ಮ್ಯಾಚಿಂಗ್ ಆಗಿ ಧರಿಸಿದರೆ ಹೊಸ ಮೆರುಗು ಸಿಗುತ್ತದೆ. ಕಫ್ಡ್ ಜೀನ್ಸ್
ಕ್ಲೀನ್ ಮತ್ತು ಗರಿಗರಿಯಾದ ಕಫ್ಡ್ ಜೀನ್ಸ್ ಕ್ಲಾಸಿಕ್ ನೋಟವನ್ನು ನೀಡುತ್ತದೆ. ಉದ್ದವಾದ ಜೀನ್ಸ್ ಅನ್ನು ಕತ್ತರಿಸದೆ ಅದನ್ನು ಮೇಲಕ್ಕೆ ಮಡಚಲಾಗಿರುತ್ತದೆ. ಕ್ಯಾನ್‌ವಾಶ್ ಶೂಗಳೊಂದಿಗೆ ಈ ಜೀನ್ಸ್‌ಗಳು ನಿಮ್ಮ ಸೌಃದರ್ಯ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಮತ್ತೂಂದು ವಿಶೇಷವೆಂದರೆ ಈ ಬಗೆಯ ಜೀನ್ಸ್‌ಗಳನ್ನು ಪುರುಷ, ಮಹಿಳೆಯರು ಯಾರು ಉಟ್ಟರೂ ಸೊಗಸೇ. ಇಂತಹ ಜೀನ್ಸ್‌ಗಳಿಗೆ ಮ್ಯಾಚಿಂಗ್ ಆಗಿ ನೀಲಕೈ ಚೆಕ್ಸ್ ಶರ್ಟ್‌ಗಳು, ಬ್ಲೇಜರ್‌ಗಳು, ಫಿಟ್ಟಿಂಗ್ ಇರುವ ಟಿ ಶರ್ಟ್‌ಗಳನ್ನು ಬಳಸಬಹುದು. ಅಪ್‌ಶಾರ್ಟ್
ಅಪ್‌ಶಾರ್ಟ್ ಜೀನ್ಸ್‌ಗಳು ತಮ್ಮ ವಾರ್ಡ್‌ರೋಬ್‌ನಲ್ಲಿ ಇರಬೇಕೆಂದು ಪ್ರತಿಯೊಬ್ಬ ಫ್ಯಾಶನ್ ಪ್ರಿಯರೂ ಬಯಸುತ್ತಾರೆೆ. ಇದು ಪ್ರಸ್ತುತ ಹೆಚ್ಚಿನವರ ಅಚ್ಚು ಮೆಚ್ಚಿನ ದಿರಿಸಾಗಿದೆ. ಅದಕ್ಕೆ ಕಾರಣವೇನೆಂದರೆ ಯಾವುದಕ್ಕಾದರೂ ಸುಲಭದಲ್ಲಿ ಮ್ಯಾಚಿಂಗ್ ಮಾಡಲು ಸಾಧ್ಯವಾಗಿರುವುದು. ಟಿ ಶರ್ಟ್, ಶರ್ಟ್‌ಗಳಿಗೆ ಉತ್ತಮ ಸಂಯೋಜನೆಯಾಗಿದೆ. ಈ ಡೆನಿಮ್ ಜೀನ್ಸ್ ಜಗತ್ತಿನಾದ್ಯಂತ ಫ್ಯಾಶನ್ ಉದ್ಯಮವನ್ನು ಆಳುತ್ತಿದೆ. ಪ್ರತಿ ಕಾಲಘಟ್ಟಕ್ಕೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳುತ್ತ ಡೆನಿಮ್ ಪ್ರತಿ ಸಲವೂ ಆಯ್ಕೆಗೆ ಇಷ್ಟದ ಸಂಗತಿಯಾಗಿದೆ.