Advertisement
ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರ ಜತೆಗೂಡಿ ಬಂದು ಮತದಾನ ಮಾಡಿದರು. ಜಮೀರ್ ಅಹಮದ್ ನೇತೃತ್ವದಲ್ಲಿ ಐವರು ಭಿನ್ನಮತೀಯ ಶಾಸಕರು ಮೊದಲಿಗೆ ಮತ ಚಲಾವಣೆ ಮಾಡಿದರು. ಅನಂತರ ಇಕ್ಬಾಲ್ ಅನ್ಸಾರಿ ವಿಳಂಬವಾಗಿ ಬಂದು ಮತದಾನ ಮಾಡಿದರು. ಮತದಾನ ಅನಂತರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ನಿರ್ಣಯದಂತೆ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ 32 ಶಾಸಕರು ಮತ ಚಲಾವಣೆ ಮಾಡಿದ್ದೇವೆ ಎಂದರು. ಸಿ.ಟಿ. ರವಿ, ಜೆಡಿಎಸ್‌ನ ಕೆಲವರು ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ರೀತಿ ಯಾರೂ ಪಕ್ಷದ ತೀರ್ಮಾನ ಉಲ್ಲಂಘಿಸಿಲ್ಲ. ಪಕ್ಷದ ಶಾಸಕರು ದೇವೇಗೌಡರ ತೀರ್ಮಾನಕ್ಕೆ ಬದ್ಧರಾಗಿ ಸಹಮತದಿಂದಲೇ ಮೀರಾಕುಮಾರ್ ಅವರಿಗೆ ಮತ ಚಲಾವಣೆ ಮಾಡಿದ್ದಾರೆ ಎಂದರು.