Advertisement

ಮೊಯ್ಲಿ ಕ್ಷೇತ್ರಕ್ಕೆ ಲಗ್ಗೆ ಹಾಕಲು ದಳ ತಂತ್ರ 

02:57 AM Mar 02, 2019 | Team Udayavani |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣಾದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗು ತ್ತಿದ್ದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತಹಗ್ಗಜಗ್ಗಾಟ ಮುಂದುವರಿದಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕಾಗಿ ದಳಪತಿಗಳು ತಮ್ಮ ಪಟ್ಟುಸಡಿಲಿಸದೆ ಕೂತಿರುವುದು ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Advertisement

ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ.ಪ್ರಸ್ತುತ, ವೀರಪ್ಪ ಮೊಯ್ಲಿ ಕ್ಷೇತ್ರದ ಸಂಸದ. 1977 ರಿಂದ 2014ರ ವರೆಗೆ ನಡೆದಿರುವ ಒಟ್ಟು 11ಲೋಕಸಭಾ ಚುನಾವಣೆಗಳ ಪೈಕಿ 10ರಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. 1996ರಲ್ಲಿ ಒಮ್ಮೆ ಮಾತ್ರ ಟಿಕೆಟ್‌ ಕೈ ತಪ್ಪಿದ್ದಕ್ಕೆ ಆರ್‌.ಎಲ್‌.ಜಾಲಪ್ಪ ಅವರು ಜನತಾದಳದಿಂದ ಸ್ಪರ್ಧಿಸಿ,ಗೆಲುವು ಸಾಧಿಸಿದ್ದರು. ಇದೀಗ ಜೆಡಿಎಸ್‌ಪಟ್ಟಿಯಲ್ಲಿರುವ 12 ಕ್ಷೇತ್ರಗಳ ಪೈಕಿಚಿಕ್ಕಬಳ್ಳಾಪುರವೂ ಇದ್ದು, ಈ ಕ್ಷೇತ್ರಕ್ಕೂ ಅದು ಪಟ್ಟು ಹಿಡಿದಿರುವುದು ಕಾಂಗ್ರೆಸ್‌ ನಾಯಕರನ್ನು ಚಿಂತೆಗೀಡು ಮಾಡಿದೆ.

ಒಕ್ಕಲಿಗ ಮತಗಳ ಮೇಲೆ ದಳದ ಕಣ್ಣು: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಹಿಂದ ವರ್ಗದ ಮತಗಳು ಗೆಲು ವಿಗೆ ನಿರ್ಣಾಯಕ.ಆ ಕಾರಣಕ್ಕಾಗಿ ಇಲ್ಲಿ ಎಂ.ವಿ.ಕೃಷ್ಣಪ್ಪ, ಪ್ರಸನ್ನಕು ಮಾರ್‌, ಆರ್‌,ಎಲ್‌.ಜಾಲಪ್ಪ ಅವ ರಂತಹ ಹಿಂದುಳಿದ ವರ್ಗದ ನಾಯಕರು ಸಂಸದರಾಗಿ ಈ ಕ್ಷೇತ್ರದಿಂದ ಆರಿಸಿ ಹೋಗಿದ್ದಾರೆ. ಆದರೆ, ಕ್ಷೇತ್ರದಲ್ಲಿರುವ ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌, ಈ ಬಾರಿ ಶತಾಯ ಗತಾಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ರಾಜಕೀಯ ರಣತಂತ್ರ ರೂಪಿಸಿ, ಕ್ಷೇತ್ರ ಬಿಟ್ಟು ಕೊಡುವಂತೆ ಮೈತ್ರಿ ಪಕ್ಷವಾದ ಕಾಂಗ್ರೆಸ್‌ನ ಬೆನ್ನು ಬಿದ್ದಿದೆ.

ಅಲ್ಲದೆ, ಕಳೆದ ಒಂದೆರಡು ವಿಧಾನಸಭಾ ಚುನಾವಣೆಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಗಿಂತ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿರುವ ಜೆಡಿಎಸ್‌ನ್ನು, ತಮ್ಮ ಪಕ್ಷದ ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ ದೇವೇಗೌಡ ಅವರು ಕಾರ್ಯತಂತ್ರ ರೂಪಿಸಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಕ್ಕಲಿಗರ ಮತ ಸೆಳೆಯಲೆಂದೇ ಸುಪ್ರೀಂಕೋಟ್‌ ನಿವೃತ್ತ ನ್ಯಾ.ವಿ.ಗೋಪಾಲಗೌಡರನ್ನು ಅಥವಾ ಸ್ವತ: ದೇವೇಗೌಡರೇ ಕಣಕ್ಕೆ ಇಳಿಯುವ ಸಾಧ್ಯತೆಇದೆ ಎಂಬುದು ಪಕ್ಷದ ಮೂಲಗಳ ಹೇಳಿಕೆ.

5 “ಕೈ’, 2 ದಳ, 1 ಕಮಲ: ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ಕಾಂಗ್ರೆಸ್‌ತೆಕ್ಕೆಯಲ್ಲಿದ್ದರೆ, ದೇವನಹಳ್ಳಿ ಹಾಗೂ ನೆಲಮಂಗಲ ಕ್ಷೇತ್ರಗಳು ಜೆಡಿಎಸ್‌ ವಶದಲ್ಲಿದೆ. ಉಳಿದಂತೆ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಮಾತ್ರ ಕಮಲದ ವಶದಲ್ಲಿದೆ.

Advertisement

2014ರಲ್ಲಿ ಮೊಯ್ಲಿಯವರು, ಬಿಜೆಪಿಯ ಮಾಜಿ ಸಚಿವ ಹೊಸಕೋಟೆ ಬಿ.ಎನ್‌.ಬಚ್ಚೇಗೌಡರ ವಿರುದ್ಧ ವಿಜಯದ ನಗೆ ಬೀರಿದರೆ,ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಆದರೆ, ಮೊಯ್ಲಿ ಗಳಿಸಿದ್ದು, 9,520 ಅಲ್ಪಮತಗಳ ಅಂತರದ ಪ್ರಯಾಸದ ಜಯ. ಹೀಗಾಗಿ, ಮೈತ್ರಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ತಮಗೆಬಿಟ್ಟು ಕೊಟ್ಟರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಜೆಡಿಎಸ್‌ ನಾಯಕರದು. ಆದರೆ, ಮೊಯ್ಲಿ ಮಾತ್ರ ತಾವೇ ಇಲ್ಲಿನ ಅಭ್ಯರ್ಥಿ ಎನ್ನುತ್ತಾ ಓಡಾಡುತ್ತಿದ್ದಾರೆ. ಇನ್ನು, ಬಿಜೆಪಿಗೆ ಬಹುತೇಕ ಬಚ್ಚೇಗೌಡರೇ ಅಭ್ಯರ್ಥಿ. 

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಂಸದರಾದ ಎಂ.ವೀರಪ್ಪ ಮೊಯ್ಲಿಯವರೇಅಭ್ಯರ್ಥಿ ಆಗಬೇಕು. ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಇದ್ದರೂ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

●ಡಾ.ಕೆ.ಸುಧಾಕರ್‌,ಚಿಕ್ಕಬಳ್ಳಾಪುರ ಶಾಸಕ.

1996ರಲ್ಲಿ ಆರ್‌.ಎಲ್‌.ಜಾಲಪ್ಪನವರು ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ನಷ್ಟೇ ಜೆಡಿಎಸ್‌ ಕೂಡ ಪ್ರಬಲವಾಗಿದೆ. ಕ್ಷೇತ್ರವನ್ನು ಬಿಟ್ಟು ಕೊಟ್ಟರೆ ನಾವು ಗೆದ್ದು ತೋರಿಸುತ್ತೇವೆ.●ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕ, ಚಿಕ್ಕಬಳ್ಳಾಪುರ

●ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next