Advertisement

ಎಚ್‌ಡಿಕೆ ಕೇಂದ್ರಕ್ಕೆ ಹೋದರೆ ನಾನೇ ಸಿಎಂ ಅಭ್ಯರ್ಥಿ: ಇಬ್ರಾಹಿಂ

08:18 PM Nov 21, 2022 | Team Udayavani |

ಹುಬ್ಬಳ್ಳಿ: ನನಗೂ ಸಿಎಂ ಆಗಬೇಕು ಎನ್ನುವ ಆಸೆಯಿದೆ. ಆದರೆ, ಮುಂದಿನ ಸಿಎಂ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಎಂದು ನಿರ್ಧಾರವಾಗಿದೆ. ಒಂದು ವೇಳೆ ಎಚ್‌ಡಿಕೆ ಕೇಂದ್ರಕ್ಕೆ ಹೋದರೆ ನಾನೇ ಸಿಎಂ ಅಭ್ಯರ್ಥಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಕೇಶವ ಕೃಪಾ ಹಾಗೂ ಬಸವ ಕೃಪಾ ನಡುವೆ ಸಿಕ್ಕು ಒದ್ದಾಡುತ್ತಿದ್ದಾರೆ. ಅವರು ಕೂಡ ನಮ್ಮ ಪಕ್ಷದಿಂದ ಹೋದವರು. ಮರಳಿ ಬಂದರೆ ಸ್ವಾಗತಿಸುತ್ತೇವೆ. ತಂದೆ ಮುತ್ಸದ್ಧಿತನ ಮಗ ಬಸವರಾಜ ಬೊಮ್ಮಾಯಿ ಅವರಲ್ಲಿ ಕಾಣುತ್ತಿಲ್ಲ. ಅಧಿಕಾರಕ್ಕಾಗಿ ಸಿದ್ಧಾಂತ ಬದಲಾಯಿಸಿಕೊಂಡಿದ್ದಾರೆ. ಬಸವರಾಜ ಹೊರಟ್ಟಿ ಹಾಗೂ ಎನ್‌.ಎಚ್‌.ಕೋನರಡ್ಡಿ ಟಿಕೆಟ್‌ ಕೊಡುವ ಸ್ಥಾನದಲ್ಲಿದ್ದರು. ಇಂದು ಬೇಡುವ ಹಂತಕ್ಕೆ ಇಳಿದಿದ್ದಾರೆ. ದುರವಸ್ಥೆಗೆ ಬೇಸತ್ತು ಹೊರಟ್ಟಿ ಮನಸ್ಸು ಬದಲಾಯಿಸಬಹುದು. ಮತದಾರರ ಮಾಹಿತಿ ಕಳ್ಳತನ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷದಿಂದ ಆಗಿದೆ. ಚುನಾವಣಾ ಆಯೋಗ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next