ಶಿವಮೊಗ್ಗ: ಪೆಟ್ರೋಲ್, ಡೀಸೆಲ್, ವಿದ್ಯುತ್, ರಸಗೊಬ್ಬರ ಹಾಗೂ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾ ಧಿಕಾರಿಗಳಕಚೇರಿ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿಮನವಿ ಸಲ್ಲಿಸಲಾಯಿತು.
ಕೊರೊನಾ ಸೋಂಕಿನ ಮೊದಲ ಹಾಗೂ 2ನೇ ಅಲೆ ನಿಯಂತ್ರಿಸಲು ದೇಶ ಮತ್ತುರಾಜ್ಯಾದ್ಯಂತ ವಿಧಿಸಲಾದ ಲಾಕ್‌ಡೌನ್‌ನಿಂದ ಜನ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರ, ರೈತರ ಮತ್ತು ಕೂಲಿ ಕಾರ್ಮಿಕರ ಹಾಗೂ ದೀನ ದಲಿತರ ಪಾಲಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ತಕ್ಷಣ ಅವಶ್ಯಕ ವಸ್ತುಗಳ ಬೆಲೆ ಇಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ದುಡಿಮೆ ಇಲ್ಲದೆಕಂಗಾಲಾಗಿವೆ. ಕುಟುಂಬದ ಮುಖ್ಯಸ್ಥರು, ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದು, ಇಡೀ ಕುಟುಂಬ ಬೀದಿ ಪಾಲಾಗಿವೆ.ಅಲ್ಲದೇ ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿ ಮೃತಪಟ್ಟಿದ್ದು, ಎಳೆ ಮಕ್ಕಳುಅನಾಥರಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿರೈತರು ತಾವು ಬೆಳೆದ ಆಹಾರ ಸಾಮಗ್ರಿ, ತರಕಾರಿ ಮತ್ತು ಹಣ್ಣು ಹಂಪಲು ಕಟಾವು ಮಾಡಿ ಅದನ್ನು ಸಾಗಿಸಲು ಮತ್ತು ಮಾರಾಟ ಮಾಡಲು ವರ್ತಕರಿಗೆ ತಲುಪಿಸಲಾಗದೆ ಫಸಲನ್ನು ಕೊಳೆಯಲು ಬಿಟ್ಟುನಿರ್ಗತಿಕರಾಗಿದ್ದಾರೆ. ಇತಂಹ ಸಮಯದಲ್ಲಿಬೆಲೆ ಏರಿಕೆ ಇವರೆಲ್ಲರ ಜೀವನ ಅಸ್ತವ್ಯಸ್ಥಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೈಲ ಬೆಲೆ ಏರಿಕೆಯಿಂದ ರಾಜ್ಯದ ಜನ ನರಳುತ್ತಿರುವ ಸಮಯದಲ್ಲಿ ರಾಜ್ಯಸರಕಾರ ವಿದ್ಯುತ್ ದರ ಏರಿಕೆ ಮಾಡಿದೆ. ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪುನರ್ ವಿಮರ್ಶಿಸಿ ದರ ಏರಿಕೆ ಹಿಂಪಡೆಯಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮುಖ್ಯಸ್ಥರು ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅಂತಹ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರಘೋಷಿಸಿದ್ದು, ಇದನ್ನು ಯಾವುದೇ ಷರತ್ತು ಮತ್ತು ತಾರತಮ್ಯವಿಲ್ಲದೇ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಾನಗರಪಾಲಿಕೆ ಸದಸ್ಯ ನಾಗರಾಜ ಕಂಕಾರಿ, ಮಾಜಿ ಸದಸ್ಯ ಎಚ್.ಪಾಲಾಕ್ಷಿ, ಮುಖಂಡರಾದ ಎಚ್.ಆರ್.ತ್ಯಾಗರಾಜ್, ಕೆ.ಸಿದ್ದಪ್ಪ, ರಿಚರ್ಡ್‌ಕ್ವಾಡ್ರಸ್, ಎಸ್.ಕೆ. ಭಾಸ್ಕರ್, ಎಚ್.ಕೆ.ಅಬ್ದುಲ್ ವಾಜೀದ್, ಪರಶುರಾಮ್,ಎಸ್.ವಿ. ರಾಜಮ್ಮ, ಎಂ.ಎಸ್.ಸತೀಶ್, ಮಂಜುನಾಥ ನವುಲೆ, ಕವಿತಾ ಶ್ರೀನಿವಾಸ್ ಇನ್ನಿತರರು ಭಾಗವಹಿಸಿದ್ದರು.