Advertisement

ತೈಲ ಬೆಲೆ ಏರಿಕೆಖಂಡಿಸಿ ಜೆಡಿಎಸ್‌ ಪ್ರತಿಭಟನೆ

11:46 AM Jun 29, 2021 | Team Udayavani |

ರಾಮನಗರ: ತೈಲ ಬೆಲೆ ಏರಿಕೆ ಖಂಡಿಸಿ ನಗರದ ಐಜೂರು ವೃತ್ತದಲ್ಲಿ ಕೆಲಕಾಲ ಬೆಂಗಳೂರು – ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿದ ಜೆಡಿಎಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಖೀಯಾಗಿವೆ.ಕೋವಿಡ್‌ ಸೋಂಕಿನಿಂದಾಗಿ ಜನರಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಈ ಮಧ್ಯ ಕೇಂದ್ರ ಮತ್ತು ರಾಜ್ಯ ಸರ್ಕರಗಳ ಜನವಿರೋಧಿ ನೀತಿಗಳಿಂದಾಗಿ ಬೆಲೆ ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

100 ರೂ. ಗಡಿ ದಾಟಿದೆ ಪೆಟ್ರೋಲ್‌: ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್  ಬೆಲೆ ಲೀಟರ್‌ಗೆ 100 ರೂ. ಗಡಿ ದಾಟಿದೆ. ಡೀಸೆಲ್ ದರ ಇದಕ್ಕಿಂತ ಭಿನ್ನವಾಗೇನು ಇಲ್ಲ. ತೈಲ ಬೆಲೆ ಏರಿಕೆಯಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಇದರ ಪರಿಣಾಮ ಆಹಾರ ವಸ್ತುಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯೂ ಆಗಿದೆ. ಬಸ್‌, ಟ್ಯಾಕ್ಸಿ ಮತ್ತು ಆಟೋ ದರಗಳು ಏರಿಕೆಯಾದರೆ, ಅದರ ಹೊರೆಯನ್ನು ಜನಸಾಮಾನ್ಯರೇ ಹೊರಬೇಕಾಗಿದೆ ಎಂದು ಪ್ರತಿಭಟನಾಕಾರರು, ವಿದ್ಯುತ್‌ ಬೆಲೆ ಏರಿ ಸಿದ ರಾಜ್ಯ ಸರ್ಕಾರದ ವಿರುದ್ಧವೂ ಹರಿಹಾಯ್ದರು.

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಉತ್ತಮ ಬೆಲೆಗಳು ಸಿಗದಿದ್ದರಿಂದ ‌ ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವ ಬದಲಿಗೆ ರಸ್ತೆ ಬದಿಗಳಲ್ಲೇ ಸುರಿದು ಹೋಗುತ್ತಿದ್ದಾರೆ. ಇನ್ನೊಂದೆಡೆ ರಸಗೊಬ್ಬರದ ಬೆಲೆಯನ್ನು ಏರಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತ ವಿರೋಧಿ ನಿಲುವನ್ನು ತಾಳಿದೆ ಎಂದು ದೂರಿದರು.

ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ: ಕೋವಿಡ್‌ ಸೋಂಕಿನಿಂದ ದೇಶಾದ್ಯಂತ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಜನ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಇಂತಹ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆಗೆ ಅವಕಾಶ ನೀಡದೆ, ಜನ ಸಾಮಾನ್ಯರ ನಿತ್ಯದ ಬದುಕನ್ನು ರಕ್ಷಿಸಬೇಕಿತ್ತು. ಕೂಲಿಗಳು, ಕಾರ್ಮಿಕರು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ದೂರುಗಳ ಸೆರೆಮಾಲೆ ಹೆಣೆದ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆ ಇಳಿಸಿ ಎಂದು ರಾಜ್ಯ ಮತ್ತುಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದರು.

Advertisement

5 ಲಕ್ಷ ಪರಿಹಾರಕ್ಕೆ ಒತ್ತಾಯ ಕೋವಿಡ್‌ ಸೋಂಕಿನಿಂದಾಗಿ ಕುಟುಂಬದ ಮುಖ್ಯಸ್ಥರು, ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡು ಇಡೀ ಕುಟುಂಬ ಬೀದಿಪಾಲಾಗಿವೆ. ಅಲ್ಲದೇ ಎಷ್ಟೋ ಕುಟುಂಬಗಳಲ್ಲಿತಂದೆ- ತಾಯಿ ಮೃತಪಟ್ಟಿದ್ದು, ಮಕ್ಕಳ ಅನಾಥರಾಗಿದ್ದಾರೆ. ಕೋವಿಡ್‌ ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾಕಾರರು ನೀಡಿದ ಮನವಿಯನ್ನು ತಹ ಶೀಲ್ದಾರ್‌ ನರಸಿಂಹಮೂರ್ತಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಣ್ಣ, ನಗರಸಭೆ ಜೆಡಿಎಸ್‌ ಸದಸ್ಯರಾದ ಮಂಜುನಾಥ್‌ , ಸೈಯದ್‌ಮುನಿರ್‌ ಆಗಾ, ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಅಶ್ವತ್ಥ್ , ಜೆಡಿಎಸ್‌ ಮುಖಂಡರಾದಅಜಯ್‌ ದೇವೇಗೌಡ, ಪ್ರಮುಖರಾದ ಸಿ.ಎಸ್‌.ಜಯಕುಮಾರ್‌,ಕುಮಾರ್‌ ಗೂಳಿಗೌಡ, ಚಿಕ್ಕವೀರೇಗೌಡ, ಜೆ.ಮುಕುಂದರಾಜ್‌, ಗಜಫ‌ರ್‌ ಆಲಿ ಬೇಗ್‌, ಅತಾ ಉಲ್ಲಾ , ಕೃಷ್ಣ,ಚಂದ್ರಯ್ಯ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಮಹದೇವ ಮುಂತಾದವರು ಭಾಗವಹಿಸಿದ್ದರು.

‌ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದಕೇಂದ್ರ ಸರ್ಕಾರಸಾಕಷ್ಟು ಬಾರಿ ಪೆಟ್ರೋಲ್, ಡೀಸೆಲ್ ಬೆಲೆಏರಿಕೆ ಮಾಡಿದೆ. ಅಲ್ಲದೆ, ಅಡುಗೆ ಅನಿಲದರವನ್ನು ಪದೇ ಪದೇ ಹೆಚ್ಚಳ ಮಾಡಿದೆ.ಇದರಿಂದ ಜನಸಾಮಾನ್ಯರ ಬದುಕಿನಮೇಲೆ ಪರಿಣಾಮ ಬೀರಿದೆ. ಜನರನ್ನುಸಂಕಷ್ಟದಿಂದ ಪಾರು ಮಾಡುವ ಆಡಳಿತ ಸದ್ಯದ ಅಗತ್ಯ.ರಾಜಶೇಖರ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next