Advertisement

ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್‌ ಪ್ರತಿಭಟನೆ

01:24 PM Apr 19, 2022 | Team Udayavani |

ಸೇಡಂ: ದೇಶದಲ್ಲಿ ಧರ್ಮಾಂಧತೆ ಬಿತ್ತಿ, ಜನರ ಕಣ್ಣಿಗೆ ಮಣ್ಣೆರಚುವ ಮೂಲಕ ಬಿಜೆಪಿ ಸರ್ಕಾರ ಲೂಟಿ ತಂತ್ರ ಅನುಸರಿಸುತ್ತಿದೆ ಎಂದು ಜೆಡಿಎಸ್‌ ಮುಖಂಡ ಬಾಲರಾಜ ಗುತ್ತೇದಾರ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣದಲ್ಲಿ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಾಗೂ ಪಾದಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು.

ಜನರ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿರುವ ಬಿಜೆಪಿ ಸರ್ಕಾರ ಹಿಜಾಬ್‌, ಹಲಾಲ್‌ ವಿಷಯಗಳನ್ನು ಮುನ್ನೆಲೆಗೆ ತಂದು ಬೆಲೆ ಏರಿಕೆ ಮಾಡುವ ಮೂಲಕ ದೇಶವನ್ನು ಲೂಟಿ ಮಾಡುತ್ತಿದೆ. ದಿನೇದಿನೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಲಾಗುತ್ತಿದೆ. ಎಲ್‌ಪಿಜಿ. ಗ್ಯಾಸ್‌ ಬೆಲೆ ಜಾಸ್ತಿ ಮಾಡಲಾಗಿದೆ. ಹೊಗೆ ಮುಕ್ತ ಭಾರತದ ಹೆಸರಲ್ಲಿ ಗ್ಯಾಸ್‌ ನೀಡಿ, ಈಗ ಮತ್ತೆ ಹೊಗೆ ಒಲೆಯತ್ತ ಬಡ ಜನರು ವಾಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ನೀಡಲಾಗುತ್ತಿರುವ ವೇತನದಲ್ಲಿ ಯಾವುದೇ ರೀತಿಯ ಏರಿಕೆಯಾಗಿಲ್ಲ. ಆದರೆ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೀಗಾದರೆ ಬದುಕು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸಬಕಾ ಸಾಥ್‌ ಸಬಕಾ ವಿಕಾಸ್‌ ಎಂಬ ಧ್ಯೇಯವಾಕ್ಯದೊಂದಿಗೆ ಜನರ ಮನಸ್ಸಿಗೆ ಮಂಕು ಬೂದಿ ಎರಚಿಸಿದ ಬಿಜೆಪಿ ಸರ್ಕಾರ ಈಗ ಸಬಕಾ ಸಾಥ್‌ ಸಬಕಾ ವಿನಾಶ್‌ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಕ್ಬಾಲಖಾನ್‌, ಕಾರ್ಯಾಧ್ಯಕ್ಷ ಶಿವರಾಮರೆಡ್ಡಿ, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೀರಬಟ್ಟಿ, ಶಂಕರ ಕಟ್ಟಿ ಸಂಗಾವಿ, ಜೆಡಿಎಸ್‌ ಮಾಜಿ ಅಧ್ಯಕ್ಷ ಜಗನ್ನಾಥರೆಡ್ಡಿ ಗೊಟೂರ, ಶಿವಪುತ್ರಪ್ಪ ಮೋಘಾ, ವಿಜಯಕುಮಾರ ಕುಲಕರ್ಣಿ ಮಾತನಾಡಿದರು.

ಆರ್‌.ಆರ್‌. ಪಾಟೀಲ, ಮಲ್ಲಿಕಾರ್ಜುನ ಮುತ್ಯಾಲ, ಹಸನಪ್ಪ ಮೇತ್ರೆ, ಚಾಂದಪಾಶಾ, ಯುವ ಘಟಕ ಅಧ್ಯಕ್ಷ ಪ್ರವೀಣ ಕೆರಿ, ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾವತಿ ಗೊಬ್ಬೂರ್‌, ಭೀಮಶಪ್ಪ ಬಳ್ಳಾರಂ, ಹಮೀದ್‌, ವಿಜಯಕುಮಾರ ಕುಲಕರ್ಣಿ, ಯಶ್ವಂತ ಹಲಚೇರಾ, ಸುರೇಶ ಬಂಡೆ, ಸಿದ್ಧಯ್ಯಸ್ವಾಮಿ, ಖಾಸಿಂ ಅಲಿ ಯಾನಾಗುಂದಿ, ಮಹಾದೇವಿ ಹಲಕರ್ಟಿ, ಖನೀಜ್‌ ಫಾತಿಮಾ, ರೆಹಮತ್‌ ಬೇಗಂ, ರಾಜಶ್ರೀ ಕೊರವಿ, ಬಿಸ್ಮಿಲ್ಲಾ ಬೇಗಂ, ಹಣಮಂತರೆಡ್ಡಿ ಚಂದಾಪುರ ಹಾಗೂ ಇತರರು ಇದ್ದರು.

ಇದಕ್ಕೂ ಮುನ್ನ ಚಿಂಚೋಳಿ ರಸ್ತೆಯ ಜೆಡಿಎಸ್‌ ಕಚೇರಿಯಿಂದ ಕಲಬುರಗಿ ಕ್ರಾಸ್‌, ಬಸ್‌ ನಿಲ್ದಾಣ, ಚೌರಸ್ತಾ ಮಾರ್ಗವಾಗಿ ಸಹಾಯಕ ಆಯುಕ್ತರ ಕಚೇರಿ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ನಂತರ ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next