Advertisement
ಸ್ಥಳೀಯವಾಗಿ ಬಹುತೇಕ ಸ್ಥಳೀಯ ಸಂಸ್ಥೆಗಳು ಜೆಡಿಎಸ್ ಪಾಲಾಗಿದ್ದು ಇದೀಗ ಮನ್‌ಮುಲ್ನಲ್ಲಿ ಅಧಿಕಾರ ಹಿಡಿಯುವ ಸ್ಪಷ್ಟ ಸಾಧ್ಯತೆಗಳಿರುವುದರಿಂದ ಜೆಡಿಎಸ್ ತನ್ನ ಬೇರುಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ.
Related Articles
Advertisement
ಹಿಂದಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ ಕದಲೂರು ರಾಮಕೃಷ್ಣ ಈ ಬಾರಿ ಪರಾಭವಗೊಂಡಿದ್ದಾರೆ. ನಿರ್ದೇಶಕರಾಗಿದ್ದ ಶೀಳನೆರೆ ಅಂಬರೀಶ್, ಮಂಡ್ಯದ ಬಿಳಿದೇಗಲು ಚಂದ್ರ ಸೋಲನ್ನಪ್ಪಿದ್ದರೆ, ಕೆ.ಆರ್.ಪೇಟೆಯ ಕೆ.ರವಿ, ಶ್ರೀರಂಗಪಟ್ಟಣದ ಬೋರೇಗೌಡ, ಮಳವಳ್ಳಿ ವಿ.ಎಂ.ವಿಶ್ವನಾಥ್, ಮಂಡ್ಯದಿಂದ ಯು.ಸಿ.ಶಿವಕುಮಾರ್‌ಅವರು ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಎನ್.ಲಕ್ಷ್ಮೀನಾರಾಯಣ ಕೇವಲ 2 ಮತಗಳ ಅಂತರದಿಂದ ಸೋಲನುಭವಿಸಿದ್ದರೆ, ಮದ್ದೂರಿನಿಂದ ಸ್ಪರ್ಧಿಸಿದ್ದ ಕದಲೂರು ರಾಮಕೃಷ್ಣ 5 ಮತ ಹಾಗೂ ಮಂಡ್ಯ ತಾಲೂಕಿನಿಂದ ಸ್ಪರ್ಧಿಸಿದ್ದ ಕಾಳೇಗೌಡ 6 ಮತಗಳ ಅಂತರದಿಂದ ಪರಾಭವಗೊಂಡಿರುವುದು ವಿಶೇಷ. ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಸಹ ಪರಾಭವಗೊಂಡಿದ್ದಾರೆ.
ಹಿಂದಿನ ಆಡಳಿತ ಮಂಡಳಿ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಪಾರುಪತ್ಯ ಸಾಧಿಸಿತ್ತು. ಜೆಡಿಎಸ್ ಕೇವಲ 5 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಎನ್.ಚಲುವರಾಯಸ್ವಾಮಿ ಹಾಗೂ ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರಿದ್ದರಿಂದ ಮೂವರು ನಿರ್ದೇಶಕರು ಜೆಡಿಎಸ್ ತೊರೆದಿದ್ದರು.