Advertisement

ಬೂತ್‌ ಮಟ್ಟದಿಂದ ಜೆಡಿಎಸ್‌ ಸಂಘಟನೆ

03:30 PM Mar 12, 2022 | Team Udayavani |

ಗುಡಿಬಂಡೆ: ಜೆಡಿಎಸ್‌ ಪಕ್ಷ ಬಡವರ, ಜನಪರ, ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುವಂತಹ ಪಕ್ಷವಾಗಿದ್ದು, ಗುಡಿಬಂಡೆ- ಬಾಗೇಪಲ್ಲಿ ಕ್ಷೇತ್ರ ದಲ್ಲಿ ಬೂತ್‌ ಮಟ್ಟದಿಂದಲೇ ಪಕ್ಷದ ಬಲವರ್ಧನೆಗೆ ಶ್ರಮ ವಹಿಸುವುದಾಗಿ ಜೆಡಿ ಎಸ್‌ ಪಕ್ಷದ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಪಿ.ನಾರಾಯಣ್‌ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವನ್ನು ಬಲಪಡಿಸುವ ಅಗತ್ಯತೆ ಹೆಚ್ಚಾಗಿದೆ. ಪಕ್ಷವನ್ನು ಗ್ರಾಮಿಣ ಮಟ್ಟದಿಂದಲೇ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇನೆ. ಈಗಾಗಲೇ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಅವರ ಸಮಸ್ಯೆ ಗಳಿಗೂ ಸಹ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಿರಂತರವಾಗಿ ಕ್ಷೇತ್ರದ ಕಾರ್ಯಕರ್ತರೊಂದಿಗೆ

ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಬಗೆಹರಿಸುವ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ ಎಂದರು. ಬಳಿಕ ಜೆಡಿಎಸ್‌ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ಜೆಡಿಎಸ್‌ ಪಕ್ಷದ ಕೆಲ ಮುಖಂಡರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಯಾರೇ ಕ್ಷೇತ್ರಕ್ಕೆ ಬಂದರೂ ಸ್ಥಳೀಯ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡಬೇ ಕಿದೆ. ಆದರೆ ಕೆಲ ನಾಯಕರು ನಮ್ಮನ್ನು ಕಡೆಗಣಿಸಿದ್ದು ಸರಿಯಲ್ಲ. ಇನ್ನೂ ನಾವೇಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಪಕ್ಷದಿಂದ ಯಾರೇ ವ್ಯಕ್ತಿಯನ್ನು ಚುನಾವನೆಗೆ ಕಳುಹಿಸಿದರೇ ಅವರ ಪರವಾಗಿಯೇ ಕೆಲಸ ಮಾಡುತ್ತೇವೆ ಎಂದರು.

ಜೆಡಿಎಸ್‌ ಪಕ್ಷದ ಮುಖಂಡ ಭಾಸ್ಕರ ರೆಡ್ಡಿ, ಪಪಂ ಮಾಜಿ ಅಧ್ಯಕ್ಷ ಅಪ್ಸರ್‌ ಬಾಷ, ಸದಸ್ಯ ರಾಜಣ್ಣ, ಪಾಪಿರೆಡ್ಡಿ, ವೆಂಕಟರೆಡ್ಡಿ, ಬಾಗೇಪಲ್ಲಿ ನೂರುಲ್ಲಾ, ಮುನೀರ್‌ ಅಹ್ಮದ್‌, ರವಿ, ಶ್ರೀನಿವಾಸ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next