Advertisement

ಕಾಂಗ್ರೆಸ್‌ ಪರ ಮತ ಪ್ರಚಾರ ಮಾಡಿದ ಎಚ್.ಡಿ.ಕೆ ಪರಮಾಪ್ತ ಭೋಜೇಗೌಡ: ವಿಡಿಯೋ ವೈರಲ್

12:57 PM May 01, 2023 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್‌ ಪರ ಎಚ್.ಡಿ. ಕುಮಾರಸ್ವಾಮಿ ಪರಮಾಪ್ತ ಜೆಡಿಎಸ್ ಎಂ.ಎಲ್.ಸಿ ಆಗಿರುವ ಎಸ್.ಎಲ್. ಭೋಜೇಗೌಡ ಅವರು ಬಹಿರಂಗ ಪ್ರಚಾರ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಜೆಡಿಎಸ್ ಎಂ.ಎಲ್.ಸಿ. ಎಸ್.ಎಲ್. ಭೋಜೇಗೌಡ ಕಾಂಗ್ರೆಸ್ ಪರ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿದ್ದು, ಸಿಟಿ ರವಿ ವಿರುದ್ದ ಹರಿಹಾಯ್ದಿದ್ದಾರೆ.

ಗ್ರಾಮದ ದೇವರಕಟ್ಟೆ ಮುಂದೆ ಕೂತು ಮತ ಪ್ರಚಾರ ಮಾಡಿರುವ ಅವರು, “ಶಾಸಕ ಸಿ.ಟಿ. ರವಿ ಸೋಲಿಸಲು ನೀವೆಲ್ಲ ಕಾಂಗ್ರೆಸ್ ಗೆ  ಮತ ಹಾಕಿ. ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ ಅಂತಾರೆ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತಾ ಇಷ್ಟುದ್ದ ಬೆಳೆದವನನ್ನ ನೀವು ಕಟ್ ಮಾಡಬೇಕು ಎಂದು ನೆರೆದಿದ್ದ ಕೈ ಕಾರ್ಯಕರ್ತರಿಗೆ ಹೇಳಿದರು.

ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದರೆ ಸಿದ್ದರಾಮಯ್ಯನಿಗೆ ಅವಮಾನ ಮಾಡಿದವನಿಗೆ ಬುದ್ಧಿ ಕಲಿಸಿ. ಹಾಲುಮತದ ಕುಟುಂಬದಲ್ಲಿ ನೀವೆಲ್ಲ ಹುಟ್ಟಿದ್ರೆ ಸಿದ್ದರಾಮಯ್ಯನವರ ಗೌರವ ಉಳಿಸಿ. ಇಲ್ಲದಿದ್ರೆ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ಗ್ರಾಮಸ್ಥರ ಜೊತೆಗೆ ಭೋಜೇಗೌಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next