Advertisement
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಜೆಡಿಎಸ್ ನಾಯಕ ಸ್ಥಾನ ತಮಗೇ ಸಿಗಲಿದೆ ಎಂದು ಜಿ.ಟಿ.ದೇವೇಗೌಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಏಕಾಏಕಿ ಸುರೇಶ್ ಬಾಬು ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿದ್ದು ವಿಧಾನಸಭೆಯಲ್ಲಿ ಸ್ಪೀಕರ್ ಖಾದರ್ ಅವರು ಈ ವಿಚಾರವನ್ನು ಪ್ರಕಟಿಸಿಯೂ ಬಿಟ್ಟರು.
ಆಪ್ತ ವಲಯದಲ್ಲಿ ಅಳಲು ತೋಡಿಕೊಂಡಿರುವ, ಜಿ.ಟಿ. ದೇವೇಗೌಡ, ನನಗೆ ಸಿಗಬೇಕಿದ್ದ ಸ್ಥಾನವನ್ನು ಸುರೇಶ್‌ಬಾಬುಗೆ ಕೊಡಲಾಗಿದೆ. ಪಕ್ಷದಲ್ಲಿ ನನಗೆ ಪದೇಪದೆ ಅನ್ಯಾಯ ಆಗುತ್ತಲೇ ಇದೆ. ಈ ಹಿಂದೆ ಪಕ್ಷ ತೊರೆಯಲು ಸಿದ್ಧನಾಗಿದ್ದೆ. ಆದರೆ ಬಲವಂತಕ್ಕೆ ಉಳಿದುಕೊಂಡೆ. ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ನೀಡಿದರು. ಇದರಿಂದ ಏನೂ ಪ್ರಯೋಜನವಿಲ್ಲ. ಪಕ್ಷದಲ್ಲಿ ಹಿರಿಯನಾದ ನನಗೆ ಜೆಡಿಎಲ್‌ಪಿ ನಾಯಕ ಸ್ಥಾನ ಸಿಗಬೇಕಿತ್ತು. ಮಾಜಿ ಸಚಿವ ಸಾ.ರಾ. ಮಹೇಶ್ ಕುತಂತ್ರದಿಂದ ನನಗೆ ಸ್ಥಾನ ತಪ್ಪಿದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Related Articles
ಇದೇ ಕಾರಣದಿಂದ ವಿಧಾನಸಭೆ ಕಲಾಪದಿಂದ ದೂರ ಉಳಿದಿದ್ದು ಮುಡಾ ನಿವೇಶನ ಹಂಚಿಕೆ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬಳಿ ದಾಖಲೆ ಇದೆ ಎಂದಿದ್ದ ಜಿಟಿಡಿ, ಕಲಾಪಕ್ಕೆ ಬಾರದೆ ಮುನಿಸಿಕೊಂಡು ಮೈಸೂರಿನಲ್ಲೇ ಉಳಿದಿದ್ದಾರೆ. ಮುಡಾ ವಿಚಾರವಾಗಿ ಸೋಮವಾರದಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದುಕೊಂಡಿರುವ ಮಿತ್ರಪಕ್ಷವೂ ಆಗಿರುವ ಅಧಿಕೃತ ವಿರೋಧ ಪಕ್ಷ ಬಿಜೆಪಿಗೆ ಸಾಥ್ ನೀಡಲಿದ್ದಾರೆಯೇ ಅಥವಾ ಕಲಾಪಕ್ಕೆ ಹಾಜರಾಗದೆ ಹಿಂದೆ ಸರಿಯುತ್ತಾರೆಯೇ ಎನ್ನುವ ಸಂಶಯ ಮೂಡಿದೆ.
Advertisement