Advertisement

ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವೇ ಗುರಿ

06:02 PM Jan 01, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲ್ಲಿಸುವುದೇ ತಮ್ಮ ಮುಖ್ಯ ಗುರಿ ಎಂದು ಶಿಡ್ಲ ಘಟ್ಟ ಜೆಡಿಎಸ್‌ ಮುಖಂಡ ಮೇಲೂರುಬಿ.ಎನ್‌.ರವಿಕುಮಾರ್‌ ತಿಳಿಸಿದರು.

Advertisement

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರಿನಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಗ್ರಾಪಂ ಚುನಾವಣೆಯಲ್ಲಿ 25 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಜೆಡಿಎಸ್‌ಬೆಂಬಲಿತರು 15 ಗ್ರಾಪಂಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ಮತದಾರರು ನೀಡಿದ್ದಾರೆ.

ನಾಲ್ಕು ಗ್ರಾಪಂಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆಲ್ಲಿಸಲು ಹಗಲಿರುಳು ಶ್ರಮಿಸುವುದಾಗಿ ಹೇಳಿದರು.

ಹಂಡಿಗನಾಳ ಜೆಡಿಎಸ್‌ ಮೇಲುಗೈ: ಶಿಡ್ಲಘಟ್ಟ ಕ್ಷೇತ್ರದ ಒಟ್ಟು 30 ಪಂಚಾಯಿತಿಗಳಲ್ಲಿ 460 ಜೆಡಿಎಸ್‌ ಬೆಂಬಲಿತರು ಸ್ಪರ್ಧಿಸಿದ್ದರು. ಅವರಲ್ಲಿ 268 ಮಂದಿಜಯ ಶೀಲರಾಗಿದ್ದಾರೆ. ಮಾಜಿ ಸಚಿವಹಾಗೂ ಹಾಲಿ ಶಾಸಕರ ಸ್ವಗ್ರಾಮ ಹಂಡಿಗಳ ಗ್ರಾಪಂ ಜೆಡಿಎಸ್‌ ಪಾಲಾಗಿರುವುದುಸಂತಸ ತಂದಿದೆ ಎಂದರು. ಗ್ರಾಪಂನಲ್ಲಿ ಗೆದ್ದವರು ಜನ ಸೇವೆ ಮಾಡಿ, ಮುಂಬ ರುವಚುನಾವಣೆಗಳಲ್ಲಿ ಜೆಡಿ ಎಸ್‌ ಗೆಲ್ಲಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಸಖ್ಯ ಬೇಕಾಗಿಲ್ಲ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆ  ಪಿಯ ಬಿ ಟೀಂ ಎಂದು ಅಪಪ್ರಚಾರಮಾಡಿ ದ್ದರಿಂದ ಶಿಡ್ಲಘಟ್ಟ ಕ್ಷೇತ್ರ ಸಹಿತರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದ್ದರಿಂದಜೆಡಿಎಸ್‌ ಅಭ್ಯರ್ಥಿಗಳು ಸೋಲುವಂತಾಯಿತು. ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಮಾಜಿ ಪ್ರಧಾನಮಂತ್ರಿ ಎಚ್‌.ಡಿ.  ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರ ಸ್ವಾಮಿ ಅವರು ರೈತ ಪರವಾಗಿಯೋಜನೆ ರೂಪಿಸಿ ಅನುಷ್ಠಾನಗೊಳಿಸಿರೈತಪರ ಸರ್ಕಾರವೆಂದು ಸಾಬೀತುಪಡಿಸಿ ದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂಸಾಮಾಜಿಕ ನ್ಯಾಯ ನೀಡಲು ಜೆಡಿಎಸ್‌ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದರು.

Advertisement

ಜನರ ವಿಶ್ವಾಸ: ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್‌ ಮುನಿಯಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮುಖಂಡಬಿ.ಎನ್‌.ರವಿಕುಮಾರ್‌ ಜನರಲ್ಲಿ ಬೆರೆತು, ವಿಶ್ವಾಸ ಗಳಿಸಿರುವುದಕ್ಕೆ ಈ ಚುನಾವಣೆಫಲಿತಾಂಶವೇ ನಿದರ್ಶನ. ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ಕ್ಷೇತ್ರದ ಜನತೆ ಜೆಡಿಎಸ್‌ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸುವರು ಎಂದರು.

ಒಳಒಪ್ಪಂದ: ಮುಖಂಡ ತಾದೂರು ರಘು ಮಾತನಾಡಿ, ಗ್ರಾಪಂ ಚುನಾವಣೆ ಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಪಕ್ಷದವರು ಒಳಒಪ್ಪಂದ ಮಾಡಿಕೊಂಡುಕೆಟ್ಟ ರಾಜಕಾರಣ ಮಾಡಿದ್ದಾರೆ. ಆದರೆಜೆಡಿಎಸ್‌ ಬೆಂಬಲಿತರು ಯಾರೊಂದಿಗೂಮೈತ್ರಿ ಮಾಡಿಕೊಳ್ಳದೆ ಮೇಲೂರು ರವಿಕುಮಾರ್‌ ನೇತೃತ್ವದಲ್ಲಿ ಚುನಾವಣೆಯಲ್ಲಿಜಯ ಸಾಧಿಸಿದ್ದಾರೆ ಎಂದರು.ಹಿರಿಯಮುಖಂಡ ನಂದನವನಂ ಶ್ರೀರಾಮರೆಡ್ಡಿ ಮಾತನಾಡಿ, ಚಿಲಕಲ ನೇರ್ಪು ಹೋಬಳಯಲ್ಲಿನ 6 ಗ್ರಾಪಂ ಗಳಲ್ಲಿ 5 ಜೆಡಿಎಸ್‌ ಪಾಲಾಗಿದೆ. ಜನರ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.

ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಹುಜಗೂರು ರಾಮಣ್ಣ, ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್‌, ಶಿಡ್ಲ ಘಟ್ಟ ತಾಪಂ ಅಧ್ಯಕ್ಷ ಎಂ.ಕೆ.ರಾಜಶೇಖರ್‌, ಜೆಡಿಎಸ್‌ ಮಾಜಿ ತಾಲೂಕು ಅಧ್ಯಕ್ಷಡಾ.ಧನಂಜಯರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾರಾಯಣಸ್ವಾಮಿ, ಗೋಪಾಲ್‌,ಮೇಲೂರು ಆರ್‌.ಎ.ಉಮೇಶ್‌, ಕೆ.ಎಸ್‌. ಮಂಜುನಾಥ್‌, ಮುಗಿಲಡಿಪಿ ನಂಜಪ್ಪ, ಹೊಸಪೇಟೆ ಶಶಿಕುಮಾರ್‌, ಮೇಲೂರು ಧಮೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next