Advertisement
ವಿಜಯಪುರ ಸಮೀಪದ ಬೂದಿಗೆರೆ ಗ್ರಾಮದ ದೇಶನಾರಾಯಣಸ್ವಾಮಿ ದೇವಾಲಯದ ಆವರಣ ದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
Related Articles
Advertisement
ಜೆಡಿಎಸ್‌ಗೆ ಅಧಿಕಾರ: ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿ ರುವ ಬಿಜೆಪಿ ಸರ್ಕಾರದಿಂದ ಈ ರಾಜ್ಯದ ಜನತೆಗೆ ಯಾವುದೇ ಉಪಯೋಗವಿಲ್ಲ. ಬಡವರು, ದೀನದಲಿತರು, ಅಲ್ಪಸಂಖ್ಯಾತರು, ಸೇರಿದಂತೆ ಎಲ್ಲಾ ಜಾತಿ ವರ್ಗದ ಜನರ ಏಳಿಗೆಗಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ.
ನನ್ನನ್ನು ಈ ಕ್ಷೇತ್ರದ ಶಾಸಕ ನಾಗಿ ಆಯ್ಕೆ ಮಾಡಿದ ದಿನದಿಂದಲೂ ಜಾತಿ, ಮತ, ಪಕ್ಷಬೇಧ ಮರೆತು, ಎಲ್ಲಾ ಹಳ್ಳಿಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ಅನ್ಯಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷದ ಬೇರು ಗಟ್ಟಿಯಾಗಿದೆ. ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ರಾಜ್ಯದಲ್ಲಿ 123 ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂದರು.
ಹಲವರು ಜೆಡಿಎಸ್‌ಗೆ:ಬಿಜೆಪಿಯಿಂದ ಬಿ.ಸಿ.ರವೀಂದ್ರ , ಕಾಂಗ್ರೆಸ್ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಶ್ರೀನಾಥ್‌ಗೌಡ, ಹನುಮಂತಪ್ಪ, ನಾರಾಯಣಸ್ವಾಮಿ, ತಿಪ್ಪಣ್ಣ , ಇಲಿ ಯಾಜ್ ಪಾಷಾ, ಫಯಾಜ್, ಲೋಕೇಶ್, ಎಜಾಜ್ ಸೇರಿದಂತೆ ಹಲವಾರು ಮಂದಿ ಜೆಡಿಎಸ್‌ಗೆ ಸೇರ್ಪಡೆಯಾದರು.
ವಿಧಾನಪರಿಷತ್ ಅಭ್ಯರ್ಥಿ ರಮೇಶ್‌ಗೌಡ , ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ , ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ರವೀಂದ್ರ, ಕಲ್ಯಾಣ್ ಕುಮಾರ್ ಬಾಬು , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು, ರಾಮಾಂಜನೇಯ ದಾಸ್, ರಮೇಶ್, ಆನಂದ್ ಕುಮಾರ್, ಮುನಿರಾಜು, ಮಹೇಂದ್ರ, ಬಾಬು, ಶಂಕರ್, ಮುರಳಿ, ಶ್ರೀಧರ್, ದಿನ್ನೂರು ಕೇಶವ ಯಲಿಯೂರು ಚಿಕ್ಕಣ್ಣ ಗ್ರಾಪಂ ಜೆಡಿಎಸ್ ಸದಸ್ಯರು, ಮುಖಂಡರು ಇದ್ದರು.
ಪಂಚರತ್ನ ಕಾರ್ಯಕ್ರಮ ಜಾರಿಗೆ ತರುವೆವು…
ದ್ರಾಕ್ಷಿ ಬೆಳೆಗಾರರು, ರಾಗಿ ಬೆಳೆಗಾರರು ಸೇರಿದಂತೆ ಹಲವಾರು ರೈತರು ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಬೆಳೆಗಳು ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರಿಗಳಿಗೂ ತೊಂದರೆಯಾಗಿದೆ. ಬೀದಿಬದಿ ವ್ಯಾಪಾರಿಗಳು ಕಷ್ಟಕ್ಕೆ ಒಳಗಾಗಿದ್ದು ಇವರೆಲ್ಲರ ನೆರವಿಗೆ ಬರಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ರಾಜ್ಯದಲ್ಲಿ ಹೃದಯ ವೈಶಾಲ್ಯತೆಯಿಂದ ಕೆಲಸ ಮಾಡುವವರಿಲ್ಲ. ನಮ್ಮ ಪಕ್ಷದಿಂದ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇವೆ. ಪ್ರತಿ ಕುಟುಂಬಕ್ಕೆ ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳನ್ನು ಮಾಡಲಿದ್ದೇವೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.