Advertisement
11 ಕ್ಷೇತ್ರಗಳನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 5 ಕ್ಷೇತ್ರಗಳಲ್ಲಿ ಜಯಭೇರಿ ಬಾರಿದ್ದ ಜೆಡಿಎಸ್ ಪಕ್ಷವು ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಉತ್ತಮ ಸಾಧನೆ ಮಾಡಿತ್ತು. ಅಲ್ಲದೇ ಸೋತಿರುವ ಕ್ಷೇತ್ರಗಳಲ್ಲೂ ಮತಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಒಕ್ಕಲಿಗರ ಪ್ರಾಬಲ್ಯವಿರುವ ಈ ಭಾಗದಲ್ಲಿತನ್ನದೇ ಆದ ಭದ್ರಕೋಟೆಯನ್ನು ಕಟ್ಟಿಕೊಂಡಿದ್ದ ತೆನೆ ಹೊತ್ತ ಮಹಿಳೆಯ ಚಿಹ್ನೆಯ ಜ.ದಳ ಇದೀಗ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಕಾರ್ಯಕರ್ತರಲ್ಲಿ ಗೊಂದಲ: ಜಿಟಿಡಿ ಮತ್ತು ಸಾರಾ ನಡುವಿನ ಮುಸುಕಿನ ಗುದ್ದಾಟದ ಪರಿಣಾಮಜಿಲ್ಲೆಯ ಜಿಡಿಎಸ್ ಕಾರ್ಯಕರ್ತರು ಮತ್ತುಸ್ಥಳೀಯ ಮುಖಂಡರಲ್ಲಿ ಗೊಂದಲ ಏರ್ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು, ಕಾರ್ಯಕರ್ತರು ಯಾವ ಬಣದಲ್ಲಿ
ಗುರುತಿಸಿಕೊಳ್ಳುವುದು ಎಂಬ ಗೊಂದಲಕ್ಕೀಡಾಗಿದ್ದಾರೆ. ಅಲ್ಲದೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜಿಟಿಡಿ ಕಡೆಗಣನೆ ಬಗ್ಗೆ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದರೆ. ಇನ್ನೂ ಕೆಲವರು ಗ್ರಾಪಂ ಚುನಾವಣೆಯಿಂದ ವಿಮುಖರಾಗಿ ತಟಸ್ಥರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಪ್ರಬಲವಾಗಿ ಬೆಳೆದಿದ್ದಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ದೈಹಿಕವಾಗಿಯಷ್ಟೇ ಜೆಡಿಎಸ್‌ನಲ್ಲಿ: ಜಿಲ್ಲೆಯಲ್ಲಿ ಪಕ್ಷದ ಪ್ರಭಾವಿ ಮುಖಂಡರಾಗಿರುವ ಜಿ.ಟಿ. ದೇವೇಗೌಡ ವರಿಷ್ಠರ ನಿರ್ಲಕ್ಷ್ಯ, ಸಾರಾ ಮಹೇಶ್ ಅವರೊಂದಿಗಿನ ಮುಸುಕಿನ ಗದ್ದಾಟದಿಂದ ಬೇಸತ್ತುಈಗಾಗಲೇ ಮಾನಸಿಕವಾಗಿ ಪಕ್ಷದಿಂದ ಹೊರಗಿದ್ದು,ದೈಹಿಕವಾಗಿಯಷ್ಟೇ ಪಕ್ಷದಲ್ಲಿ ಉಳಿದಿದ್ದಾರೆ. ತಮ್ಮ ಮುಂದಿನ ರಾಜಕೀಯ ಭವಿಷ್ಯ ಗಮನ ದಲ್ಲಿರಿಸಿಕೊಂಡು ಬಿಜೆಪಿ ಅಥವಾ ಕಾಂಗ್ರೆಸ್ ಸೇರುವಬಗ್ಗೆ ತೀರ್ಮಾನಿಸಿದಂತಿದೆ.
ಕುಸಿಯುತ್ತಿರುವ ಸ್ಥಾನ :
11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಐದು ಸ್ಥಾನಗಳಲ್ಲಿಜೆಡಿಎಸ್ ಗೆಲುವು ಸಾಧಿಸಿತ್ತು. ಹುಣಸೂರು ಕ್ಷೇತ್ರದ ಶಾಸಕರಾಗಿದ್ದ ಎಚ್.ವಿಶ್ವನಾಥ್ ರಾಜೀ ನಾಮೆಯಿಂದ ಜೆಡಿಎಸ್ ಶಾಸಕರ ಸಂಖ್ಯೆ 4ಕ್ಕೆ ಇಳಿದಿದೆ. ಇದೀಗ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯಅವರನ್ನೇಸೋಲಿಸಿ ಜ ಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದ ಜಿ.ಟಿ.ದೇವೇಗೌಡ ಅವರು ಪಕ್ಷ ಚಟುವಟಿಕೆಗಳಿಂದ ದೂರವಿದ್ದು, ತಾಂತ್ರಿಕ ವಾಗಿಯಷ್ಟೇ ಜೆಡಿಎಸ್‌ನಲ್ಲಿ
ಉಳಿದುಕೊಂಡಿದ್ದಾರೆ. ಒಂದು ವೇಳೆ ಜಿಟಿಡಿ ಪಕ್ಷ ತೊರೆದರೆ ಮೈಸೂರು ನಗರ ಭಾಗಗಳು ಹಾಗೂ ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವಸಾಧ್ಯತೆಇದೆ.ಕೆ.ಆರ್.ನಗರದಲ್ಲಿಕಡಿಮೆ ಅಂತರದಿಂದ ಗೆದ್ದಿರುವ ಸಾ.ರಾ.ಮಹೇಶ್ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗುತ್ತಿದೆ.ಅಲ್ಲಿ ರವಿಶಂಕರ್ ಹಾಗೂ ದೊಡ್ಡಸ್ವಾಮೇಗೌಡರುಪಕ್ಷದ ಹಿಡಿತ ಸಾಧಿಸಿ, ಈಗಿನಿಂದಲೇ ಮುಂದಿನವಿಧಾನ ಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ಪಿರಿಯಾಪಟ್ಟಣ, ತಿ.ನರಸೀಪುರದಲ್ಲಿ ಜೆಡಿಎಸ್ ಗೆದ್ದಿದ್ದು, ಆ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಯಾರ ರೀತಿ ವಿದ್ಯಮಾನಗಳುಬೇಕಾದರೂಜರುಗಬಹುದು.ಅಲ್ಲದೇಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದಲ್ಲಿ ಬೇರೂರುತ್ತ ಹಿಡಿತ ಸಾಧಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಜೆಡಿಎಸ್ ತನ್ನ ಸ್ಥಾನಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ
ಪಕ್ಷಕ್ಕೆ ಮುಳುವಾದ ವರಿಷ್ಠರ ನಡೆ… :
ಆರಂಭದಿಂದ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಗೆಲ್ಲುವಅಭ್ಯರ್ಥಿಗೆ ಟಿಕೆಟ್ ನೀಡದೆ, ತಮ್ಮ ಸಂಬಂಧಿಗೆನೀಡಿದ್ದು, ಎಚ್.ಡಿ.ಕೋಟೆಯಲ್ಲಿ ಪಕ್ಷದ ಶಾಸಕ ಚಿಕ್ಕಮಾದು ಮೃತರಾದ ಬಳಿಕ ಅವರ ಮಗನಿಗೆಟಿಕೆಟ್ ನೀಡದೆ ಮತ್ತೂಬ್ಬರಿಗೆ ಮಣೆ ಹಾಕಿದ್ದು ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಿಗೆ ಕಾರಣವಾಯಿತು. ಪ್ರಸ್ತುತ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವಜಿಟಿಡಿಯವರನ್ನುಕಡೆಗಣಿಸಿರುವುಸು ಅಲ್ಲದೆ, ಪಕ್ಷದಲ್ಲಿ ಇದ್ದರೆ ಇರಿ, ಇಲ್ಲವಾದರೆ ಹೊರ ನಡೆಯಿರಿ ಎಂಬ ಪರೋಕ್ಷ ಸಂದೇಶರವಾನಿಸಿರುವುದು ಮುಂಬರುವ ಚುನಾವಣೆಯಲ್ಲಿ ಇರುವಕ್ಷೇತ್ರಗಳನ್ನು ಜೆಡಿಎಸ್ ಕಳೆದುಕೊಳ್ಳುವ ಸಾಧ್ಯತೆ ಇದೆ.
– ಸತೀಶ್ ದೇಪುರ