Advertisement

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ

06:25 PM Oct 27, 2024 | Team Udayavani |

ಯಾದಗಿರಿ: ಶಿವರಾಮೇಗೌಡ ಕೃತಜ್ಞತೆ ಹೀನರಿದ್ದಾರೆಂದು ನನಗೆ ಅನಿಸುತ್ತಿದೆ. ಸೋತು ಸುಣ್ಣವಾದ ಶಿವರಾಮೇಗೌಡರಿಗೆ ದೇವೇಗೌಡರ ಕುಟುಂಬ ಸಂಸತ್ತಿಗೆ ಕಳಿಸಿದೆ, ಆ ಋಣ ನಿಮಗೆ ಇಲ್ಲ ಎಂದು ಶಾಸಕ ಶರಣಗೌಡ ಕಂದಕೂರ ಕಿಡಿ‌ಕಾರಿದರು.

Advertisement

ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತೆಂಬ ಎಲ್‌.ಆರ್‌. ಶಿವರಾಮೆಗೌಡ ಹೇಳಿಕೆ ವಿಚಾರ ಕುರಿತು ಯಾದಗಿರಿಯಲ್ಲಿ‌ ಶಾಸಕ ಶರಣಗೌಡ ಕಂದಕೂರ ಮಾತನಾಡಿ ಹಿಂದೆ ಶಿವರಾಮೇಗೌಡ ಸುಮಲತಾರಿಗೆ ಅವಹೇಳನ ಮಾಡಿದ್ದಕ್ಕೆ ನಿಖಿಲ್ ಸೋಲಾಯ್ತು, ಶಿವರಾಮೇಗೌಡರು ಕಾಂಗ್ರೆಸ್ ಗೆ ಬಂದು ಸಿ.ಪಿ.ಯೋಗೇಶ್ವರ್‌ ಸೋಲಿಸುವ ಎಲ್ಲ ಬೆಳವಣಿಗೆಯೂ ಆಗುತ್ತಿದೆ ಎಂದು ಟೀಕಿಸಿದರು. ಸಿಪಿವೈ ಸೋಲಿಸಲು ವ್ಯವಸ್ಥಿತ ಸಂಚು ರೂಪಿಸುತ್ತಿದ್ದು, ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡರು ಸಂಸತ್ತಿಗೆ ಹೇಗೆ ಹೋಗುತ್ತಿದ್ದರು. ಕಾಂಗ್ರೆಸ್ ನಲ್ಲಿದ್ದಾಗ ಬಿಜೆಪಿ, ಜೆಡಿಎಸ್ ಗೆ ಬೈಯೋದು ಅವರಿಗೆ ಚಟ ಎಂದರು.

ಸಿದ್ದರಾಮಯ್ಯ ಇರೋವರೆಗಷ್ಟೇ ಕಾಂಗ್ರೆಸ್‌ ಸರಕಾರ: 
ಕಾಂಗ್ರೆಸ್ ನ ಎಷ್ಟು ಮಂದಿ ಶಾಸಕರು ವಿಜಯೇಂದ್ರ, ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆಂಬುದು ಗೊತ್ತಾ, ಕಾಂಗ್ರೆಸ್ ನವರು 8 ಮಂದಿ ಶಾಸಕರಿಗೆ ಆಪರೇಷನ್ ಮಾಡಿದ್ರೆ ಎನ್‌ಡಿಎಯವರು 20 ಮಂದಿಗೆ ಆಪರೇಷನ್ ‌ಮಾಡ್ತಾರೆ. ಕಾಂಗ್ರೆಸ್ ನ ಶಾಸಕರು ಅವರಾಗಿ ಅವರೇ ಬಂದರೇ ಸೇರಿಸಿಕೊಳ್ಳೋಣ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ‌ಕೆಲಸ ಆಗುತ್ತಿಲ್ಲ, ಅನೇಕ ಮಂದಿ ಕುಮಾರಸ್ವಾಮಿ, ವಿಜಯೇಂದ್ರ ಸಂಪರ್ಕದಲ್ಲಿರಬಹುದು. ಅನೇಕ ಬಾರಿ ಅಭಿವೃದ್ಧಿ ಕಾಮಗಾರಿ ಆಗುತ್ತಿಲ್ಲ ಅಂತ ಸರ್ಕಾರ ಬಿದ್ದಿರುವ ಉದಾಹರಣೆಗಳಿವೆ. ಸಿದ್ದರಾಮಯ್ಯ ಎಲ್ಲಿಯವರೆಗೆ ಇರುತ್ತಾರೋ ಅಲ್ಲಿವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ.  ಅವರು ಕೆಳಗಿಳಿದ್ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಕೊನೆ ಮೊಳೆ ಹೊಡೆಯುತ್ತಾರೆ ಎಂದರು.

ವಕ್ಫ್‌ ಆಸ್ತಿ ಅಂತ ಯಾಕೆ ಬಂತು?
ವಿಜಯಪುರ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಆಸ್ತಿ ಸಾಬೀತುಪಡಿಸಲು‌ ಹುನ್ನಾರ ನಡೆಯುತ್ತಿದೆ. ಆ ರೈತರಿಗೆ ಯಾರು ಪರಿಹಾರ ಕೊಡಬೇಕು.? ಕಷ್ಟಕ್ಕೆ ಸ್ಪಂದನೆ ಮಾಡಬೇಕೆಲ್ಲವೇ, ವಕ್ಫ್‌ ಆಸ್ತಿ ಅಂತ ಯಾಕೆ ಬಂತು ಈ ಬಗ್ಗೆ ತನಿಖೆಯಾಗಬೇಕು. ಅಧಿಕಾರಿಗಳ ಲೋಪವಾ..? ತಾಂತ್ರಿಕ ದೋಷನಾ..? ಪ್ರಭಾವಿಗಳ ಕೈವಾಡವಾ..? ವಿಚಾರಿಸಬೇಕು. ವಕ್ಫ್‌ ಆಸ್ತಿ ಸಾವಿರಾರು ಎಕರೆ ಇದೆ ಅಂತ ಸರ್ಕಾರ ಹೇಳುತ್ತದೆ. ವಕ್ಫ್‌ನವರು ಇದ್ದ ಆಸ್ತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ  ಎಂದು ಟೀಕಿಸಿದರು. ಯಾದಗಿರಿಯಲ್ಲೂ  ವಕ್ಪ್ ಆಸ್ತಿಯ ಪ್ರಭಾವಿಗಳು ಲೂಟಿ ಮಾಡಿದ್ದಾರೆ. ಮೊದಲು ಆ ಆಸ್ತಿಯ ವಕ್ಫ್‌ನವರು ಉಳಿಸಿಕೊಳ್ಳಲಿ. ಯಾದಗಿರಿ ಜಿಲ್ಲಾಡಳಿತ ಭವನದ ಸುತ್ತಲಿನ ವಕ್ಫ್‌ ಆಸ್ತಿಯನ್ನೇ ಕಬಳಿಕೆ ಮಾಡಿದ್ದಾರೆ ಎಂದು ಕಂದಕೂರ ಬಾಂಬ್ ಸಿಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next