Advertisement

ಜೆಡಿಎಸ್‌ ಅಧಿಕಾರದಿಂದ ಆಳಂದಕ್ಕೆ ಮಂತ್ರಿ ಸ್ಥಾನ

09:47 AM Dec 02, 2017 | |

ಆಳಂದ: ಆಳಂದ ವಿಧಾನಸಭೆ ಕ್ಷೇತ್ರದಲ್ಲಿ ಹಿಂದಿನ ಇತಿಹಾಸ ನೋಡಿದರೆ ಪ್ರಾದೇಶಿಕ ಪಕ್ಷದಿಂದಲೇ ಅಧಿಕಾರಕ್ಕೆ
ಬಂದ ಶಾಸಕ ಬಿ.ಆರ್‌. ಪಾಟೀಲ ಮತ್ತು ಮಾಜಿ ಶಾಸಕ ಸುಭಾಷ ಗುತ್ತೇದಾರ ಭವಿಷ್ಯಕ್ಕೆ ಮಾರಕವಾಗಿರುವ ರಾಷ್ಟ್ರೀಯ ಪಕ್ಷಗಳಿಗೆ ಜೋತುಬಿದ್ದಿದ್ದು, ಬರುವ ಚುನಾವಣೆಯಲ್ಲಿ ಅವರ ಸೋಲು ಖಚಿತವಾಗಿದೆ ಎಂದು ಮಾಜಿ ಕೃಷಿ ಸಚಿವ ಬಂಡೆಪ್ಪ ಕಾಶೆಂಪುರ ಭವಿಷ್ಯ ನುಡಿದರು.

Advertisement

ತಾಲೂಕಿನ ಕಾಂಗ್ರೆಸ್‌ ಸಮಿತಿ ಬ್ಲಾಕ್‌ ಮಾಜಿ ಅಧ್ಯಕ್ಷ ಚಂದ್ರಕಾಂತ ಗದ್ದೆ, ಬಿಜೆಪಿ ಬಸವರಾಜ ಫುಲಾರ ಮತ್ತು ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅದಮ್ಮಸಾಬ ನಿಂಬಾಳ ಅವರನ್ನು ಜೆಡಿಎಸ್‌ ಮುಖಂಡ ಸೂರ್ಯಕಾಂತ ಕೊರಳ್ಳಿ ಸಮ್ಮುಖದಲ್ಲಿ ಪಕ್ಷಕ್ಕೆ ಸ್ವಾಗತಿಸಿಕೊಂಡು ಅವರು ಮಾತನಾಡಿದರು.

ಆಳಂದ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹಿಂದಿನಿಂದಲೂ ಮತದಾರು ಬಹುಮತ ನೀಡಿದ್ದಾರೆ. ಈಗಲೂ ಜೆಡಿಎಸ್‌
ಪಕ್ಷಕ್ಕೆ ಬೆಂಬಲಿಸಲು ಮತದಾರರು ಉತ್ಸುಕರಾಗಿದ್ದಾರೆ. ಎದುರಾಳಿಗಳು ಧೂಳಿಪಟವಾಗಲಿದ್ದಾರೆ. ಅಭ್ಯರ್ಥಿ
ಸೂರ್ಯಕಾಂತ ಕೊರಳ್ಳಿ ಅವರ ಗೆಲುವಿಗೆ ಶ್ರಮಿಸಿ ಕುಮಾರ ಸ್ವಾಮಿ ಅವರ ಕೈ ಬಲಬಡಿಸಿದರೆ, ಆಳಂದ ಕ್ಷೇತ್ರಕ್ಕೆ ಮಂತ್ರಿಸ್ಥಾನ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ಕ್ಷೇತ್ರದ ಜೆಡಿಎಸ್‌ ಸಂಭಾವ್ಯ
ಅಭ್ಯರ್ಥಿ ಸೂರ್ಯಕಾಂತ ಕೊರಳ್ಳಿ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿನಾಥ ಪಾಟೀಲ ಮದಗುಣಕಿ, ರಾಜ್ಯ
ಪ್ರಧಾನ ಕಾರ್ಯದರ್ಶಿ ಶ್ಯಾಮರಾವ್‌ ಸೂರನ್‌, ದಲಿತಪರ ಚಳವಳಿಯ ಮುಖಂಡ ಬಿ.ವಿ.ಚಕ್ರವರ್ತಿ, ಸಿದ್ದರಾಮ
ಪಾಟೀಲ ದಣ್ಣೂರ, ಚಂದ್ರಕಾಂತ ಘೋಡಕೆ ಹಾಗೂ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next