ಶಹಾಬಾದ: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 234153 ಕೋಟಿ ರೂ. ಬಜೆಟ್ ಮಂಡನೆಯನ್ನು ಯಶಸ್ವಿಯಾಗಿ ಮಂಡಿಸಿದ್ದಕ್ಕೆ ಜೆಡಿಎಸ್ ವತಿಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಮಾತನಾಡಿ, ಪ್ರಾದೇಶಿಕತೆ ಹಂಗಿಲ್ಲದ ಕರುನಾಡ ಬಜೆಟ್ ಮಂಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದರು.
ರೈತರಿಗೆ ರೈತ ಸಿರಿ, ಸಾಲ ಪರಿಹಾರ ಆಯೋಗದ ರಚನೆ, ಜಲಧಾರೆ ಯೋಜನೆ, ಅಹಿಂದಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ವಿದ್ಯೆಗೆ ಕೌಶಲ್ಯದ ಕೊಡುಗೆ, ಎಚ್ಕೆಆರ್‌ಡಿಬಿಗೆ 1550 ಕೋಟಿ ರೂ., ಜಯದೇವ ಹೃದ್ರೋಗ ಆಸ್ಪತ್ರೆ 300 ಹಾಸಿಗೆಗೆ 125 ಕೋಟಿ ರೂ., ಮಹಾನಗರ ಪಾಲಿಕೆಗೆ 150 ಕೋಟಿ ರೂ., ಕೌಶಲ್ಯ ತರಬೇತಿ ಕೇಂದ್ರ, ಚಿತ್ತಾಪುರ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ನಾಡಿಗೆ ನೀಡಿದ್ದಾರೆ ಎಂದರು.
ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ್ ರಾಜಾ, ರಾಮಕುಮಾರ ಸಿಂಘ, ಸೋಮಶೇಖರ ನಂದಿಧ್ವಜ, ಮೆಹಬೂಬ, ಯುಸೂಫ್ ಸಾಹೇಬ, ಮಲ್ಲಿಕಾರ್ಜುನ ಹಳ್ಳಿ, ಮ.ಖದೀರ್ ಸಾಬ, ನವನಾಥ ಕುಸಾಳೆ, ಸುನೀಲ ಚವ್ಹಾಣ, ವೆಂಕಟೇಶ ದಂಡಗುಲಕರ್, ಸುಭಾಷ ಸಾಕ್ರೆ, ಹೀರಾ, ಮೋತಿ ಪವಾರ, ಜಬ್ಟಾರ್ ಇತರರು ಇದ್ದರು.