ಕೋಲಾರ: ನಮ್ಮ ಮಕ್ಕಳನ್ನು ಕರೆದುಕೊಂಡು ಮದುವೆಯಾಗಿ ಅಧಿಕಾರದ ಪಟ್ಟ ಕಟ್ಟಿದ್ದಾರೆ. ಜೆಡಿಎಸ್‌ನವರಿಗೆ ನಾಚಿಕೆಯಾಗಬೇಕು. ಜೆಡಿಎಸ್ ಅಧಿಕಾರದಲ್ಲಿ ಇದೆ ಎಂದು ಹೇಳಿಕೊಳ್ಳಲು ನೈತಿಕತೆಯಿಲ್ಲ ಎಂದು ಮಾಜಿ ಶಾಸಕ ಆರ್. ವರ್ತೂರು ಪ್ರಕಾಶ್ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 18 ಪಂಚಾಯಿತಿಗಳಿವೆ. ಆ ಪೈಕಿ ವರ್ತೂರು ಪ್ರಕಾಶ್ ಬಣ 12, ಜೆಡಿಎಸ್ 5 ಹಾಗೂ ಒಂದು ಪಂಚಾಯಿತಿಯಲ್ಲಿ ಪಕ್ಷೇತರರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಬೆಂಬಲಿತರಿಗೆ ಬಹುಮತ ಬಂದಿಲ್ಲ. ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಯಾವುದೇ ಗ್ರಾ.ಪಂನಲ್ಲಿ ಜೆಡಿಎಸ್‌ಗೆ ಬಹುಮತ ಬಂದಿಲ್ಲ. ಅಮ್ಮನ ಲ್ಲೂರು ಗ್ರಾಪಂನಲ್ಲಿ ವರ್ತೂರು ಪ್ರಕಾಶ್ ಬಣದ ಅಧ್ಯಕ್ಷರು ಆಯ್ಕೆಯಾಗಿದ್ದಾರೆ.
ಲೇವಡಿ: ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಎರಡೂ ಪಕ್ಷದ ಅಭ್ಯರ್ಥಿ ಗಳಿಗೆ ಸಮ ಮತ ಬಂದಿದೆ. ನಂತರ ಲಾಟರಿಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನವರು ಬಲವಂತವಾಗಿ ಹೂವಿನ ಹಾರ ಹಾಕಿ ನಮ್ಮವರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಸದಸ್ಯರನ್ನು ಸೆಳೆದು ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಿದ್ದಾರೆ. ಹೊನ್ನೇನಹಳ್ಳಿ ಪಂಚಾಯಿತಿಯಲ್ಲಿ ನಮ್ಮವರನ್ನು ಆಯ್ಕೆ ಮಾಡಿ ಮಾರ್ಜೇನಹಳ್ಳಿ ಪಂಚಾ ಯಿತಿಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಎಲ್ಲ ಸದ ಸ್ಯರು ಸೇರಿ ಸರ್ವಾನುಮತದಿಂದ ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಒಳ್ಳೆ ವಾತಾವರಣ ಸೃಷ್ಟಿಯಾಗಿದ್ದು, ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ವರ್ತೂರು ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ, ಪಕ್ಷ ಸಂಘಟನೆ ಮಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.