Advertisement

ಜೆಡಿಎಸ್‌ ಗೆಲುವಿಗೆ ಬಿರುಸಿನ ಪ್ರಚಾರ

01:16 PM Aug 25, 2018 | |

ಸಿಂಧನೂರು: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಬಿರುಸಿನ ಪ್ರಚಾರ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನೆ-ಮೀನುಗಾರಿಕೆ ಖಾತೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು. 

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಿರಿಯ ಮುಖಂಡರ ನೇತೃತ್ವದಲ್ಲಿ ತಂಡ ರಚಿಸಿ ಪ್ರಚಾರದ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಸಿಂಧನೂರಿಗೆ ದೊಡ್ಡ ಸುವರ್ಣ ಅವಕಾಶವಿದೆ. ನಗರದ ಜನರು ಕಾಂಗ್ರೆಸ್‌ ಪಕ್ಷದ ಮುಖಂಡರ ಬಣ್ಣದ ಮಾತಿಗೆ ಮರುಳಾಗದೆ ಜೆಡಿಎಸ್‌ ಅಭ್ಯರ್ಥಿಗಳಿಗೆ ಮತ ನೀಡಿ ನಿಮ್ಮ ಕನಸು ನನಸು ಮಾಡಿಕೊಳ್ಳಿ. ಪ್ರಣಾಳಿಕೆಯಲ್ಲಿ ಹೇಳಿದಂತೆ ರಸ್ತೆ, ಕುಡಿಯುವ ನೀರು, ಚರಂಡಿ ಬಡಜನರಿಗೆ ನಿವೇಶನ ಮತ್ತು ಮನೆ ಕಲ್ಪಿಸಿಕೊಡಲಾಗುವುದು. ಜೆಡಿಎಸ್‌ಗೆ ಮತ ನೀಡಿ ನಗರಸಭೆ ಆಡಳಿತ ನೀಡಿದರೆ ನಗರದ ಜನರ ಕನಸ ನನಸು-ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದರೆ ಬರಿ ಗೊಂದಲದಲ್ಲಿರಬೇಕಾಗುತ್ತದೆ ಎಂದರು. ವಿಧಾನಸಭೆ ಚುನಾವಣೆಯಲ್ಲಿ ತಾಲೂಕು-ನಗರದ ಜನರು ನನಗೆ ಮತ ನೀಡಿದ್ದರಿಂದ ನಾನು ಸಚಿವನಾಗುವ ಅವಕಾಶ ದೊರೆತ್ತಿದ್ದು, ನಗರಸಭೆಯಲ್ಲೂ ಜೆಡಿಎಸ್‌ಗೆ ಅಧಿ ಕಾರಕ್ಕೆ ಬಂದರೆ ಅಭಿವೃದ್ಧಿ ಕೆಲಸಗಳಾಗುತ್ತವೆ. ಜೆಡಿಎಸ್‌ಗೆ ಮತ ನೀಡುವಂತೆ ನಗರದ ಜನರಿಗೆ ಮನವಿ ಮಾಡಿದರು.

ನಗರದ ಸುಕಾಲಪೇಟೆಯಲ್ಲಿ ಬಡವರಿಗಾಗಿ ಖರೀದಿಸಿದ ನಿವೇಶನದ ಭೂಮಿ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ ನೀಡಿದ್ದಾರೆ. ಚುನಾವಣೆ ನಂತರ ಭೂಮಿ ಖರೀದಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ವಾರ್ಡ್‌ 27-28ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದು, ಸಂಬಂಧಿಕರು ಎಂಬ ಕಾರಣಕ್ಕೆ ಇಬ್ಬರು ಅಭ್ಯರ್ಥಿಗಳಿಗೆ ನಾಮಪತ್ರ ವಾಪಾಸ್‌ ಪಡೆಯುವಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು ಒತ್ತಡ ಹಾಕಿದರು. ಇದರಿಂದ ನಾಮಪತ್ರ ವಾಪಸ್‌ ಪಡೆದಿದ್ದರಿಂದ ವಾರ್ಡ್‌ ನಂ. 27-28ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದರು. 

Advertisement

ಕೆಲವು ತಾಂತ್ರಿಕ ಕಾರಣಗಳಿಂದ ನೀರಾವರಿ ಇಲಾಖೆ ಗ್ಯಾಂಗ್‌ಮ್ಯಾನ್‌ ಗಳ ಬೇಡಿಕೆ ಈಡೇರಿಸಲು ಸಮಸ್ಯೆ
ಉಂಟಾಗಿದೆ. ಮುಂದಿನ ದಿನಮಾನದಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷರನ್ನಾಗಿ ಎಂ.ಡಿ. ನದೀಮುಲ್ಲಾ ಅವರು ಆಯ್ಕೆ ಮಾಡಿದರು.

ಜೆಡಿಎಸ್‌ ಮುಖಂಡರಾದ ಲಿಂಗಪ್ಪ ದಢೇಸಗೂರು, ಅಶೋಕಗೌಡ ಗದ್ರಟಗಿ, ಜಿಲಾನಿ ಪಾಷಾ, ಬಸವರಾಜ ನಾಡಗೌಡ, ಹಾಜಿ ಮಸ್ತಾನ್‌, ಶರಣಬಸವ ಗೊರೇಬಾಳ, ಪ್ರಿಯಾಂಕ ನಾಯಕ, ವೀರೇಶ ಶರಬಯ್ಯ, ಮೈಹಿಬೂಬ್‌, ರಸೂಲ್‌ಸಾಬ, ಸಾಯಿರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next