Advertisement

ಸುಮಲತಾ ವಿರುದ್ಧ ಜೆಡಿಎಸ್‌ ಅಭಿವೃದ್ಧಿ ಮಂತ್ರ

02:01 AM Feb 24, 2019 | |

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯಕ್ಕೆ ಮೈತ್ರಿ ಸರ್ಕಾರದಿಂದ ಭರಪೂರ ಕೊಡುಗೆ ಹರಿದುಬರಲಾರಂಭಿಸಿದೆ. ಮೊನ್ನೆಯಷ್ಟೇ ಜಿಲ್ಲೆಗೆ 5000 ಕೋಟಿ ರೂ.ಗಳಅನುದಾನ ಘೋಷಿಸಿದ್ದ ಸಿಎಂ ಕುಮಾರಸ್ವಾಮಿ,ಶನಿವಾರ ಕಾವೇರಿ ಹೋರಾಟ ಸಂದರ್ಭದಲ್ಲಿ ಜಿಲ್ಲೆಯ ರೈತರ ಮೇಲೆ ಹೂಡಿದ್ದ ಪ್ರಕರಣಗಳನ್ನು ವಾಪಸ್‌ ಪಡೆಯುವುದಕ್ಕೆ ನಿರ್ಧರಿಸಿ ಹೋರಾಟಗಾರರನ್ನು ಖುಷಿಪಡಿಸಿದ್ದಾರೆ.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರು ಜಿಲ್ಲೆಯ ಬಗ್ಗೆ ಇಷ್ಟೊಂದು ಪ್ರೀತಿ-ಮಮಕಾರ ತೋರುತ್ತಿರುವುದರ ಹಿಂದೆ ರಾಜ ಕಾರಣವಿರುವ ಬಗ್ಗೆ ಜನಮಾನಸ ದೊಳಗೆ ಅನುಮಾನ ಗಳನ್ನು ಮೂಡಿಸಿದೆ. ಸುಮಲತಾ ಚುನಾವಣಾ ಸ್ಪರ್ಧೆಯಿಂದ ಉಂಟಾಗಿರುವ ಭಯ, ಅಂಬರೀಶ್‌ ಕುಟುಂಬದ ವಿರುದ್ಧ ಆಡಿದ ದುಡುಕಿನ ಮಾತುಗಳಿಂದ ಪಕ್ಷದ ವರ್ಚಸ್ಸಿಗೆಉಂಟಾಗಿರುವ ಹಾನಿಯನ್ನು ಸರಿಪಡಿಸಿಕೊಂಡು ಪುತ್ರನ ಲೋಕಸಭಾ ಚುನಾವಣಾ ಪ್ರವೇಶಕ್ಕೆ ಸಿಎಂ ವೇದಿಕೆ ಸಿದಟಛಿಪಡಿಸುತ್ತಲೇ ಜಿಲ್ಲೆಯ ಜನರ ಪ್ರೀತಿ- ಒಲವು ಗಳಿಸಲು ಮುಂದಾಗಿದ್ದಾರೆಯೇ ಎಂಬ ಸಂಶಯಗಳು ಕಾಡುತ್ತಿವೆ.

ಮಂಡ್ಯ ಜಿಲ್ಲೆಯನ್ನೇ ಕೇಂದ್ರೀಕರಿಸಿಕೊಂಡು ಸಿಎಂ ಘೋಷಿಸು ತ್ತಿರುವ ಯೋಜನೆಗಳು, ಜನಪರ
ವಾದ ನಿಲುವುಗಳಿಗೆ ಹಲವರಿಂದಮೆಚ್ಚುಗೆ ವ್ಯಕ್ತವಾಗುತ್ತಿರುವಂತೆಯೇ, ಇದೆಲ್ಲವೂ ರಾಜಕೀಯ ಗಿಮಿಕ್‌ ಎಂದು ಹಲವರು ಟೀಕಿಸುತ್ತಲೂ ಇದ್ದಾರೆ.

ಜೆಡಿಎಸ್‌ ತಂತ್ರ: ಸುಮಲತಾ ವಿರುದ್ಧ ರಾಜ ಕೀಯ ನಡೆ ಅನುಸರಿಸದೆ ಜಿಲ್ಲೆಗೆ ಅಭಿವೃದ್ಧಿ
ಯೋಜನೆಗಳನ್ನು ಕೊಡುಗೆ ನೀಡುವುದು ಹಾಗೂ ಕಾವೇರಿ ಹೋರಾಟಗಾರರ ಮೇಲಿನ ಕೇಸ್‌ ವಾಪಸ್‌ ಪಡೆಯುವ ವಿಚಾರಗಳ ಮೂಲಕ ಭಾವನಾತ್ಮಕವಾಗಿ ಜನರನ್ನು ಆಕರ್ಷಿಸುವ ಚಾಣಾಕ್ಷ ನಡೆಯನ್ನು ಸಿಎಂ ತೋರ್ಪಡಿಸುತ್ತಿದ್ದಾರೆ.ಈ ಮೂಲಕ ಸುಮಲತಾ ಅವರ ಜನಪ್ರಿಯತೆ ಕುಗ್ಗಿಸುವುದು ಜೆಡಿಎಸ್‌ ತಂತ್ರವಾಗಿದೆ.

ಕೇಸ್‌ ವಾಪಸ್‌: ನಿಖೀಲ್‌ ಅವರನ್ನು ಮಂಡ್ಯ ಲೋಕ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವುದು
ಕುಮಾರಸ್ವಾಮಿ ಅವರ ಏಕೈಕ ಅಜೆಂಡಾ. ಅದಕ್ಕಾಗಿ ಜಿಲ್ಲೆಗೆ ಅಭಿವೃದ್ಧಿ ಯೋಜನೆಗಳ ಸುರಿಮಳೆಗರೆದಿ ದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಪ್ರಗತಿದಾಯಕ ಯೋಜನೆಗಳನ್ನು ಪ್ರವಾಹದಂತೆ ಹರಿಸುತ್ತಿದ್ದಾರೆ. ಈ ನಡುವೆಯೇ, ಕಾವೇರಿ ಹೋರಾಟಗಾರರ ಮೇಲಿನ
ಕೇಸ್‌ ವಾಪಸ್‌ ಪಡೆದಿದ್ದಾರೆ.

Advertisement

ನೇರವಾಗಿ ವಿರೋಧಿಸುವ ಧೈರ್ಯವಿಲ್ಲ: ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ
ಸ್ಪರ್ಧಿಸುವುದು ಬಹುತೇಕ ಖಚಿತ. ಇದನ್ನು ಜೆಡಿಎಸ್‌ ಕೂಡ ಚೆನ್ನಾಗಿ ಅರಿತುಕೊಂಡಿದೆ. ಅಂಬರೀಶ್‌ ಜೊತೆ ವಿಶ್ವಾಸದ ರಾಜಕಾರಣ ಮಾಡಿಕೊಂಡು ಬಂದಿದ್ದ ಜೆಡಿಎಸ್‌ಗೆ ಈಗ ಸುಮಲತಾ ಅವರನ್ನು ನೇರವಾಗಿ ವಿರೋಧಿಸುವ ಧೈರ್ಯವಿಲ್ಲ. ವಿರೋಧ ಮಾಡುವುದಕ್ಕೆ ವಿಷಯಗಳೂ ಇಲ್ಲ. ಇದೇ ಕಾರಣದಿಂದ ಸುಮಲತಾ ಬಗ್ಗೆ ಜನರಿಗಿರುವ ಪ್ರೀತಿ, ಅನುಕಂಪ, ಜನಪ್ರಿಯತೆಯನ್ನು ನಿಧಾನವಾಗಿ ಕುಗ್ಗುವಂತೆ ಮಾಡಿ ಜಿಲ್ಲೆಯ ಜನರೆದುರು ಅಭಿವೃದ್ಧಿಯ ಚಿತ್ರಣವನ್ನು ತೋರಿಸುತ್ತಾ ಜೆಡಿಎಸ್‌ ಪರವಾಗಿ ಒಲಿಸಿಕೊಳ್ಳುವುದಕ್ಕೆ ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳು ಜೆಡಿಎಸ್‌ಗೆ ಯಾವ ರೀತಿ ಅನುಕೂಲವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಸಿಎಂ ಮಹದಾಸೆಗೆ ಆಘಾತ
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರೇ ಇದ್ದು, ಮೂವರು ಸಚಿವರಿದ್ದಾರೆ. ಚುನಾವಣಾ ಗೆಲುವು ಜೆಡಿಎಸ್‌ಗೆ ಸುಲಭದ ತುತ್ತೂ ಆಗಿತ್ತು. ಆದರೆ, ಸುಮಲತಾ ಚುನಾವಣಾ ಸ್ಪರ್ಧೆ ವಿಷಯ ಮುಂಚೂಣಿಗೆ ಬರುತ್ತಿದ್ದಂತೆ ಅವರ ವಿರುದಟಛಿ ಕೇಳಿಬಂದ ಅಪಸ್ವರದ ಮಾತುಗಳು ಜೆಡಿಎಸ್‌ ಪಾಲಿಗೆ ಮುಳುವಾದವು. ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಿಕೊಡುವ ಸಿಎಂ ಮಹದಾಸೆಗೆ ಆಘಾತ ಮೂಡಿಸಿತು.

ಮಂಡ್ಯ ಮಂಜುನಾಥ್‌ 

Advertisement

Udayavani is now on Telegram. Click here to join our channel and stay updated with the latest news.

Next