Advertisement

ಜೆಡಿಎಸ್‌ ಕೆಲ ಮುಖಂಡರಿಂದ ನನಗೆ ಸೋಲು

11:28 AM Jun 24, 2019 | Suhan S |

ಮಾಲೂರು: ಪಕ್ಷ ನಿಷ್ಠೆ ಮರೆತ ಕೆಲ ಜೆಡಿಎಸ್‌ ಮುಖಂಡರಿಂದ ಸೋಲು ಅನುಭವಿಸುವಂತಾಯಿತು ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

Advertisement

ಲೋಕಸಭೆ ಮತ್ತು ಪುರಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಮತದಾರು ಹಾಗೂ ನೂತನ ಸದಸ್ಯರನ್ನು ಅಭಿ ನಂದಿಸಲು ಪಟ್ಟಣದ ವಿಶ್ವನಾಥ ಕಲ್ಯಾಣ ಮಂಟಪ ದಲ್ಲಿ ತಾಲೂಕು ಕಾಂಗ್ರೆಸ್‌ ಸಮಿತಿ ಅಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಫ‌ಲ ಅನುಭವಿಸುತ್ತಾರೆ: ಜೆಡಿಎಸ್‌ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಮಾತಿಗೆ ಮನ್ನಣೆ ನೀಡದ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು ಪಕ್ಷ ದ್ರೋಹ ಮಾಡಿದ್ದರ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಮತಗಳು ಸಿಗದೇ ಸೋಲುವಂತಾಯಿತು. ಇದರ ಫಲವನ್ನು ಮುಂದಿನ ದಿನಗಳಲ್ಲಿ ಅವರು ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಉತ್ತರ ನೀಡಬೇಕು: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ನಡೆಯುವ ಎಲ್ಲಾ ಕೋಮು ಪ್ರಚೋ ದನೆಗಳು, ದಲಿತ, ಮುಸ್ಲಿಮರ ಮೇಲಿನ ದಬ್ಟಾಳಿಗೆಗೆ ಜೆಡಿಎಸ್‌ನ ಕೆಲವು ಮುಖಂಡರು ಹೊಣೆಯಾಗಲಿ ದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಮತದಾರನಿಗೆ ಕೋಲಾರದ ಜೆಡಿಎಸ್‌ ಶಾಸಕ ಹಾಗೂ ಮಾಲೂರು ಕ್ಷೇತ್ರದ ಮಾಜಿ ಶಾಸಕರು ನೇರವಾಗಿ ಉತ್ತರಿಸ ಬೇಕಾಗುತ್ತಿದೆ ಎಂದು ನೇರ ಆರೋಪ ಮಾಡಿದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ತಪ್ಪು ಮಾಹಿತಿ: ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಶ್ರಮದಿಂದ ಪುರಸಭೆ ಚುನಾವಣೆ ಯಲ್ಲಿ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಲೋಕಸಭಾ ಚುನಾವಣೆಗಳಲ್ಲಿಯೂ ಪಕ್ಷದ ಕಾರ್ಯ ಕರ್ತರು ಶ್ರಮವಹಿಸಿದ್ದಾರೆ. ಕಳೆದ 26 ವರ್ಷಗಳಲ್ಲಿ ತಾವು ಕೈಗೊಂಡಿರುವ ಅನೇಕ ಕಾಮಗಾರಿಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಕ್ಷೇತ್ರದ ಮತದಾರರ ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಹೇಳಿದರು.

Advertisement

ಜಿಲ್ಲೆಯ ಕೆಲವು ಜೆಡಿಎಸ್‌ ಮುಖಂಡರು ಯಾವುದೇ ಮಾತಿಗೆ ಬಲಿಯಾಗದೆ, ಮೈತ್ರಿ ಧರ್ಮದ ಆಧಾರದ ಮೇಲೆ ಕೆಲಸ ಮಾಡಿದ್ದು, ಅಂತಹ ಮುಖಂಡರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬೂತ್‌ಮಟ್ಟದಿಂದ ಸಂಘಟಿಸುವುದಾಗಿ ತಿಳಿಸಿದ ಅವರು, ಪಕ್ಷವನ್ನು ಗೆಲ್ಲಿಸುವುದು ಗೊತ್ತು ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ 12 ಸದಸ್ಯರು ಗೆಲುವು ಸಾಧಿಸಿದ್ದು, ಇದಕ್ಕೆ ಕಾರಣರಾದ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿದ ಪ್ರತಿಯೊಬ್ಬ ಮತದಾರನಿಗೆ ಧನ್ಯವಾದ ಹೇಳಿದರು.ಇದೇವೇಳೆ ಸಂಸದ ಎಸ್‌.ಮುನಿಸ್ವಾಮಿ ಸಭೆಗಳಲ್ಲಿ ಮಾತನಾಡುವಾಗ ತಮ್ಮ ಸ್ಥಾನಕ್ಕೆ ಧಕ್ಕೆಯಾಗ ದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಕ್ಷ ದ್ರೋಹಕ್ಕೆ ಶಿಸ್ತು ಕ್ರಮ: ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಮಾತನಾಡಿ, ಕಾಂಗ್ರೆಸ್‌ ಕೆಲವು ಮುಖಂಡರು ಪಕ್ಷ ದ್ರೋಹ ಬಗೆದ ಕಾರಣ ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸೋಲು ಕಾಣುವಂತಾಗಿದೆ. ಪಕ್ಷ ವಿರೋಧಿ ನೀತಿ ಅನುಸರಿಸಿದವರ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದರು.

ಮುಖಂಡರಾದ ಸಿ.ಲಕ್ಷ್ಮೀ ನಾರಾಯಣ್‌, ಚನ್ನ ರಾಯಪ್ಪ, ಸಿ.ರಾಜಣ್ಣ, ಟಿ. ಮುನಿಯಪ್ಪ, ಎಂ.ಎನ್‌.ಗುಂಡಪ್ಪ, ರಾಮ್‌ಪ್ರಸಾದ್‌, ಅಂಜನಿಸೋಮಣ್ಣ, ರಘುನಾಥ್‌, ಹನುಮಂತಪ್ಪ, ಪಿ.ವೆಂಕಟೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next