Advertisement

JDS candidate ಚೋಪ್ರಾಗೆ ಸೇರಿದ ರೂ. 42 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳು ವಶ

10:28 PM Apr 19, 2023 | Team Udayavani |

ಸವದತ್ತಿ: ಜೆಡಿಎಸ್ ಅಭ್ಯರ್ಥಿ ಸೌರಭ ಆನಂದ ಚೋಪ್ರಾ ಅವರ ಭಾವಚಿತ್ರವಿರುವ ಹೊಲಿಗೆ ಯಂತ್ರಗಳನ್ನು ಸಂಗ್ರಹಿಸಿಟ್ಟ ಗೋದಾಮಿನ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿ ಎಫ್‍ಎಸ್‍ಟಿ (ಫ್ಲೈಯಿಂಗ್ ಸ್ಕಾಡ್) ಪೊಲೀಸ್ ಹಾಗೂ ಜಿಎಸ್‍ಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

Advertisement

ಇಲ್ಲಿನ ಎಸ್‍ಬಿಆಯ್ ಎದುರಿಗೆ ಇರುವ ಸಂಭವ ಎಂಟರ ಪ್ರೈಸಿಸ್‍ನಲ್ಲಿ ಮಂಗಳವಾರ ತಡರಾತ್ರಿಯವರೆಗೆ ದಾಳಿ ನಡೆಸಿ ಸುಮಾರು ರೂ. 42 ಲಕ್ಷ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ರೂ. 23.84 ಲಕ್ಷದ ಮೌಲ್ಯದ 1012 ಹೊಲಿಗೆ ಯಂತ್ರ, ರೂ. 4.56 ಲಕ್ಷ ಮೌಲ್ಯದ 1200 ಹೊಲಿಗೆ ಯಂತ್ರಗಳ ಪೋಷ್ಟಕಗಳು, ರೂ. 11.27 ಲಕ್ಷ ಮೌಲ್ಯದ ಕಬ್ಬಿದ ಸ್ಟ್ಯಾಂಡ, ರೂ. 3.24 ಲಕ್ಷ ಬೆಲೆಯುಳ್ಳ 2160 ಟಿಫಿನ್ ಬಾಕ್ಸ್ ಸೇರಿ ಒಟ್ಟು 42.92 ಲಕ್ಷ ರೂಪಾಯಿಯ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡಲು ದಾಸ್ತಾನು ಮಾಡಿದ ಹೊಲಿಗೆ ಯಂತ್ರ, ಕಬ್ಬಿಣದ ಸ್ಟ್ಯಾಂಡ ಹಾಗೂ ಟಿಫಿನ ಬಾಕ್ಸಗಳ ಕುರಿತು ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‍ಸಿ ನಂ. 06/2023 ಕಲಂ:171(ಇ), 171(ಎಫ್) ಆಯ್‍ಪಿಸಿ ಸೆಕ್ಷನ್ ಆಧಾರಿತ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next