Advertisement

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

07:29 PM Sep 27, 2022 | Team Udayavani |

ಸೈದಾಪುರ: ಅಡಿಗಲ್ಲು ಸಮಾರಂಭದ ಬ್ಯಾನರ್  ನಲ್ಲಿ ತಮ್ಮ ನಾಯಕರ ಭಾವಚಿತ್ರ ಇಲ್ಲದಿದ್ದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಾಯಕರ ಸಮ್ಮುಖದಲ್ಲಿಯೇ ಕೈ-ಕೈ ಮಿಲಾಯಿಸಿದ ಘಟನರ ನಡೆದಿದೆ.

Advertisement

ಸಾವೂರು ಗ್ರಾಮದಲ್ಲಿ 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ ಅಪೇಂಡಿಕ್ಸ್-ಇ ಯೋಜನೆ ಅಡಿಯಲ್ಲಿ ಗುರುಮಠಕಲ್ ತಾಲ್ಲೂಕಿನ ಯಾದಗಿರಿ-ಸೈದಾಪುರ ರಸ್ತೆ ಕಿ.ಮೀ 10.9 ರಿಂದ 20ರವರೆಗಿನ ಆಯ್ದ ಭಾಗಗಳಲ್ಲಿನ ರಸ್ತೆ ಸುಧಾರಣೆ ಕಾಮಾಗಾರಿ (5 ಕೋಟಿ ರೂ) ಮತ್ತು ಕೆಕೆಆರ್  ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ಮಲ್ಹಾರ ಗ್ರಾಮದಿಂದ ಲಿಂಗೇರಿ ಗ್ರಾಮದವರೆಗೆ  (84 ಲಕ್ಷ ರೂ) ರಸ್ತೆ ಸುಧಾರಣೆ ಕಾಮಾಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ  ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾರಮಾರಿಯಾಗಿದೆ.

ಈ ಕಾರ್ಯಕ್ರಮಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರು ಮತ್ತು ಸ್ಥಳೀಯ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಆಗಮಿಸಿದರು. ಈ ವೇಳೆ ವೇದಿಕೆಯ ಮೇಲೆ ಹಾಕಲಾದ ಬ್ಯಾನರ್ ನಲ್ಲಿ ಕೇವಲ ಶಾಸಕರ ಭಾವಚಿತ್ರ ಹಾಕಿರುವುದು ನೋಡಿ ಬಿಜೆಪಿ ಕಾರ್ಯಕರ್ತರು ಆ ಬ್ಯಾನರ್ ನಲ್ಲಿ  ಶಾಸಕರು ವೇದಿಕೆಗೆ ಆಗಮಿಸುವ ಮುನ್ನವೇ ಕಿತ್ತು ಹಾಕಿದರು. ಇದರಿಂದ ಜೆಡಿಎಸ್ ಕಾರ್ಯಕರ್ತರು ಉದ್ರಿಕ್ತಗೊಂಡು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಇಳಿದರು. ಈ ವೇಳೆ ಇಬ್ಬರ ನಡುವೆ ಗುದ್ದಾಟ ಮತ್ತು ಪರಸ್ಪರ ಕುರ್ಚಿ ಎಸೆದಾಡಿದರು. ಇದರಿಂದ ಕೆಲ ಸಮಯ ಉದ್ವಘ್ನ ವಾತವರಣ ನಿರ್ಮಾಣವಾಯಿತು. ಇದನ್ನು ತಿಳಿ ಗೊಳಿಸಲು ಪೊಲೀಸರು ಹರಸಾಹಸ ಪಟ್ಟರು. ನಂತರ ಇಬ್ಬರು ನಾಯಕರು ವೇದಿಕೆ ಮೇಲೆ ಕುಳಿತುಕೊಂಡು ಅಡಿಗಲ್ಲು ಸಮಾರಂಭವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಬ್ಯಾನರ್‍ನಲ್ಲಿ ಭಾವಚಿತ್ರ ಹಾಕುವುದು ನನಗೆ ಸಂಬಂಧಿಸಿದಲ್ಲ, ಅಧಿಕಾರಿಗಳು ಆಯೋಜಿಸಿದ್ದಾರೆ. ಆದರೆ ಇಲ್ಲಿನ ಕೆಲವರು ಬ್ಯಾನರ್‍ನ್ನು ಕಿತ್ತಿ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿಯವರು  ಗ್ರಾಮಗಳಲ್ಲಿ ದ್ವೇಷದ ವಾತವರಣ ನಿರ್ಮಾಣ ಮಾಡುವುದು ಸರಿಯಲ್ಲ.-ನಾಗನಗೌಡ ಕಂದಕೂರು, ಶಾಸಕರು

ಜೆಡಿಎಸ್ ಮತ್ತು ಬಿಜೆಪಿಯ ನಾಯಕರುಗಳು ಮತಕ್ಷೇತ್ರದ  ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನಹರಿಸದೆ, ವೈಯಕ್ತಿಕ ಒಣ ಪ್ರತಿಷ್ಠೆಗಾಗಿ ಬಡಿದಾಡಿಕೊಳ್ಳುತ್ತಿರುವುದು ರ್ದುದೈವದ ಸಂಗತಿಯಾಗಿದೆ. -ಶರಣಪ್ಪ ಮಾನೇಗಾರ, ಕಾಂಗ್ರೆಸ್ ಮುಖಂಡ

Advertisement

ಮತ ಕ್ಷೇತ್ರದಲ್ಲಿ ಶಿಷ್ಟಚಾರ ಮರೆತು ಅನೇಕ ಕಾರ್ಯಕ್ರಮಗಳು ಜರಗುತ್ತಿವೆ. ಈ ಕಾರ್ಯಕ್ರಮದಲ್ಲಿ ಬೆರೆ ಕಡೆಯಿಂದ ಜನ ಕರೆಸಿ ವ್ಯವಸ್ಥಿತವಾಗಿ ಅಡೆ-ತಡೆ ಉಂಟುಮಾಡಿದ್ದಾರೆ. ಹಾಗೂ ನಮ್ಮ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಇಷ್ಟಾದರು ನಮ್ಮ ಕಾರ್ಯಕರ್ತರು ಯಾವುದೆ ಅಡೆತಡೆಯುಂಟು ಮಾಡಿಲ್ಲ.  ಶಾಸಕರು ಮತ್ತು ಅವರ ಸುಪುತ್ರರು ದಬ್ಬಾಳಿಕೆ-ದೌರ್ಜನ್ಯಕ್ಕೆ ಇಂದಿನ ಕಾರ್ಯಕ್ರಮ ಹಿಡಿದ ಕೈಗನ್ನಡಿಯಾಗಿದೆ.– ಬಾಬುರಾವ್ ಚಿಂಚನಸೂರು, ವಿಧಾನ ಪರಿಷತ್ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next