ಚನ್ನಪಟ್ಟಣ: ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 31 ಸ್ಥಾನಗಳ ಪೈಕಿ ಜೆಡಿಎಸ್ 16 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳಬಹುಮತ ಪಡೆದುಕೊಂಡಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ.
ಮೊದಲ ವಾರ್ಡ್‌ನಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ಗೆಲುವಿನ ಪಯಣ ಆರಂಭಿಸಿತು. ಕಾಂಗ್ರೆಸ್‌ಮೊದಲ ಸುತ್ತಿನಲ್ಲೇ 17ನೇ ವಾರ್ಡ್‌ನಲ್ಲಿ ಗೆಲುವುಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದರೆ, ಬಿಜೆಪಿ ಗೆಲುವಿನ ಖಾತೆಗೆ 6ನೇ ವಾರ್ಡ್ ಫಲಿತಾಂಶದ ವರೆಗೆ ಕಾಯ ಬೇಕಾಯಿತು. ನಗರದ 31 ವಾರ್ಡ್‌ಗಳ ಮತಗಟ್ಟೆಯ ಎರಡು ಕೊಠಡಿಗಳಲ್ಲಿ ಏಣಿಕ ಆರಂಭಿಸಲಾಯಿತು. ಮೊದಲ 15 ವಾರ್ಡ್‌ಗಳು ಒಂದು ಕೊಠಡಿಯಲ್ಲಿ, 16 ರಿಂದ 31ನೇ ವಾರ್ಡ್ ವರಗಿನ ಮತಯಂತ್ರಗಳನ್ನು ಇನ್ನೊಂದು ಕೊಠಡಿಯಲ್ಲಿ ಏಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು.
ಮಾಜಿಗಳಲ್ಲಿ ಗೆದ್ದವರು, ಬಿದ್ದವರು: ಈ ಬಾರಿಯನಗರಸಭಾ ಚುನಾವಣೆಯಲ್ಲಿ 2ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಗರಸಭಾ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಇತ್ತ 22ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಅಧ್ಯಕ್ಷ ಜಭಿವುಲ್ಲಾಖಾನ್ ಘೋರಿ ಪರಾಜಿತಗೊಂಡಿದ್ದಾರೆ. ಇನ್ನು 26ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಗರಸಭಾ ಮಾಜಿ ಸದಸ್ಯ ಬೋರಲಿಂಗಯ್ಯ,19ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದ ಜಕಿ ಅಹ್ಮದ್ ಪರಾಜಿತಗೊಂಡಿದ್ದಾರೆ. ಇನ್ನು 9ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸದಸ್ಯ ವಿಠಲೇನಹಳ್ಳಿ ಕೃಷ್ಣೇಗೌಡ ಪರಾಭವಗೊಂಡಿದ್ದಾರೆ.
17ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಗರಸಭಾ ಮಾಜಿ ಉಪಾಧ್ಯಕ್ಷ ವಾಸೀಲ್ ಆಲಿಖಾನ್, 18ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದ ಲಿಯಾಖತ್ ಆಲಿಖಾನ್ ಗೆಲುವು ಸಾಧಿಸಿದ್ದಾರೆ.
ನಗರಸಭಾ ಮಾಜಿ ಸದಸ್ಯ ಉಮಾಶಂಕರ್ ಪತ್ನಿ ರೇಖಾ ಉಮಾಶಂಕರ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವನಂಬಿಕೆ ಇರಿಸಿಕೊಂಡಿದ್ದ ಒಂದನೇ ವಾರ್ಡ್ ಮತ್ತು 12ನೇ ವಾರ್ಡ್ ಜೆಡಿಎಸ್ ಪಾಲಾಗಿದೆ. ಇನ್ನು 8ನೇ ವಾರ್ಡ್‌ನ ಅಭ್ಯರ್ಥಿ ಸರ್ವಮಂಗಳ ಲೋಕೇಶ್ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಾಲಿಗೆ ಈ ಮೂರು ವಾರ್ಡ್ ಗಳಲ್ಲಿನ ಪರಾ ಜಯ ಗೆಲುವಿನ ವೇಗವನ್ನು ತಗ್ಗಿಸಿದೆ.