Advertisement

ಬಿಜೆಪಿ ವಿರುದ್ಧ ಜೆಡಿಯು ನಾಯಕ ಶರದ್‌ ಟ್ವಿಪಹಾರ

08:30 AM Jul 31, 2017 | Team Udayavani |

ಪಾಟ್ನಾ: ಆರ್‌ಜೆಡಿ ಜತೆ ಮೈತ್ರಿ ಸರಕಾರ ನಡೆಸುತ್ತಿದ್ದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ದಿಢೀರನೆ ಎನ್‌ಡಿಎ ಜತೆ ಸಖ್ಯ ಬೆಳೆಸಿ ಬಿಹಾರದಲ್ಲಿ ರಾಜಕೀಯ ಭೂಕಂಪ ಸೃಷ್ಟಿಸಿದ ಬೆನ್ನಲ್ಲೇ ಮತ್ತೂಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಅತ್ತ ನಿತೀಶ್‌ ಹೊಸದಾಗಿ ಬಿಜೆಪಿ ಜತೆ ಸೇರಿ ಸರಕಾರ ರಚಿಸಿರುವ ಸಂಭ್ರಮದಲ್ಲಿದ್ದರೆ, ಇತ್ತ ಜೆಡಿಯು ಸಹಸ್ಥಾಪಕ ಶರದ್‌ ಯಾದವ್‌ ಅವರಲ್ಲಿನ ಅಸಮಾಧಾನ ಸ್ಫೋಟಗೊಂಡಿದೆ.

Advertisement

ತಮ್ಮ ಪಕ್ಷ ಬಿಜೆಪಿಯೊಂದಿಗೆ ಸರಕಾರ ರಚಿಸಿರುವ ನಡುವೆಯೇ, ಜೆಡಿಯು ನಾಯಕ ಶರದ್‌ ಯಾದವ್‌ ರವಿವಾರ ಸರಣಿ ಟ್ವೀಟ್‌ಗಳನ್ನು ಮಾಡಿ ಎನ್‌ಡಿಎ ಸರ್ಕಾ ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಿದೇಶದಲ್ಲಿರುವ ಕಪ್ಪುಹಣವೂ ವಾಪಸಾಗಲಿಲ್ಲ, ಪನಾಮಾ ಹಗರಣದಲ್ಲಿರುವವರನ್ನೂ ಬಂಧಿಸಲಿಲ್ಲ, ಫ‌ಸಲ್‌ ಬಿಮಾ ಯೋಜನೆಯು ಸರಕಾರದ ಅತಿದೊಡ್ಡ ವೈಫ‌ಲ್ಯ. ಇದರಿಂದ ರೈತರಿಗೆ ಲಾಭವಾಗುವ ಬದಲು ವಿಮಾ ಕಂಪೆನಿಗಳಷ್ಟೇ ಹಣ ಮಾಡಿ ಕೊಂಡವು’ ಎಂದು ಸರಣಿ ಟ್ವೀಟ್‌ಗಳಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ, ನಿತೀಶ್‌ ಅವರು ಬಿಜೆಪಿಯ ಸಖ್ಯ ಬೆಳೆಸಿರುವುದು ಶರದ್‌ ಅವರಿಗೆ ರುಚಿಸಿಲ್ಲ. ಸಾರ್ವಜನಿಕವಾಗಿ ಯಾವುದೇ ಆಕ್ಷೇಪ ವ್ಯಕ್ತಪಡಿಸದಿದ್ದರೂ ಪಕ್ಷದ ನಾಯಕರ ಜತೆ ತಮ್ಮ ಅತೃಪ್ತಿಯನ್ನು ಅವರು ಹೊರಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಯಾದವ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಿಪಿಐ ನಾಯಕ ಡಿ.ರಾಜಾ ಅವರೂ ಸ್ಪಷ್ಟಪಡಿಸಿದ್ದಾರೆ.

ಶರದ್‌ಗೆ ಲಾಲು ಕರೆ: ಮತ್ತೂಂದು ಬೆಳವಣಿಗೆಯಲ್ಲಿ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರು ಶರದ್‌ಗೆ ದೂರವಾಣಿ ಕರೆ ಮಾಡಿದ್ದು, ಬಿಜೆಪಿ ಮತ್ತು ನಿತೀಶ್‌ ವಿರುದ್ಧದ ಹೋರಾಟದ ನೇತೃತ್ವವನ್ನು ನೀವೇ ವಹಿಸಿ ಎಂದು ಕೇಳಿಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಶರದ್‌ ಅವರು ಕೇಂದ್ರದ ವಿರುದ್ಧ ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next